ಅಸಂಘಟಿತ ವಲಯದ ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡುವುದಕ್ಕೆ ಸಿಎಂ ಯಡಿಯೂರಪ್ಪ ಚಾಲನೆ
ಅಸಂಘಟಿತ ವಲಯದ ಸವಿತಾ ಸಮಾಜ, ಅಗಸರು, ಟೈಲರ್, ಹಮಾಲಿಗಳು, ಚಿಂದಿ ಆಯುವವರು, ಭಟ್ಟಿ ಕಾರ್ಮಿಕರು, ಕುಂಬಾರರು, ಅಕ್ಕಸಾಲಿಗರು, ಮೆಕ್ಯಾನಿಕ್ಗಳು, ಕಮ್ಮಾರರು, ಗೃಹ ಕಾರ್ಮಿಕರು, ಚಮ್ಮಾರರ ಖಾತೆಗಳಿಗೆ ಇಂದು ಡಿಬಿಟಿ ಮೂಲಕ ಹಣ ವರ್ಗಾವಣೆಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.
ಬೆಂಗಳೂರು: ನೋಂದಾಯಿತ ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರು ಮತ್ತು ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗುವ ದೃಷ್ಟಿಯಿಂದ ಪರಿಹಾರ ಪ್ಯಾಕೇಕ್ನನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ನಗದು ಮೂಲಕ ಜಮೆ ಮಾಡುವುದಕ್ಕೆ ಇಂದು (ಜೂನ್ 5) ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಗೃಹಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಲಿದ್ದಾರೆ.
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿರುವ ಕಟ್ಟಡ ಕಾರ್ಮಿಕರಿಗೆ ತಲಾ 3,000 ರೂ. ರಂತೆ ಒಟ್ಟು 494 ಕೋಟಿ ರೂ. ಕಾರ್ಮಿಕರ ಖಾತೆಗೆ ಜಮಾವಾಗಲಿದೆ. ಅಸಂಘಟಿತ ವಲಯದ ಸವಿತಾ ಸಮಾಜ, ಅಗಸರು, ಟೈಲರ್, ಹಮಾಲಿಗಳು, ಚಿಂದಿ ಆಯುವವರು, ಭಟ್ಟಿ ಕಾರ್ಮಿಕರು, ಕುಂಬಾರರು, ಅಕ್ಕಸಾಲಿಗರು, ಮೆಕ್ಯಾನಿಕ್ಗಳು, ಕಮ್ಮಾರರು, ಗೃಹ ಕಾರ್ಮಿಕರು, ಚಮ್ಮಾರರ ಖಾತೆಗಳಿಗೆ ಇಂದು ಡಿಬಿಟಿ ಮೂಲಕ ಹಣ ವರ್ಗಾವಣೆಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.
ಹಣ ಡ್ರಾ ಮಾಡಿಕೊಳ್ಳಲು ಮುಗಿ ಬಿದ್ದ ರೈತರು ಮಂಡ್ಯ: ತಾಲೂಕಿನ ಕೊತ್ತತ್ತಿಯ ಎಂಡಿಸಿಸಿ ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿಕೊಳ್ಳಲು ರೈತರು ಮುಗಿ ಬಿದ್ದಿದ್ದಾರೆ. ಹಾಲಿನ ಹಣ ಡ್ರಾ ಮಾಡಿಕೊಳ್ಳಲು ನಾ ಮುಂದು ತಾ ಮುಂದು ಅಂತ ರೈತರು ಮುಗಿ ಬಿದ್ದಿದ್ದು, ಇಂದು ಮಧ್ಯಾಹ್ನದವರೆಗೆ ಬ್ಯಾಂಕ್ ವ್ಯವಹಾರಕ್ಕೆ ಅವಕಾಶವಿದೆ. ಆದರೆ ಇಂದೇ ಎಲ್ಲರಿಗೂ ಹಣ ನೀಡಿ. ನಾವು ಸಂಕಷ್ಟದಲ್ಲಿ ಇದ್ದೇವೆ ಎಂದು ಬ್ಯಾಂಕ್ ಸಿಬ್ಬಂದಿ ಮೇಲೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kerala budget: ಕೇರಳ ಬಜೆಟ್ನಲ್ಲಿ ₹20,000 ಕೋಟಿ ಕೊವಿಡ್ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವ ಬಾಲಗೋಪಾಲ್
(CM Yeddiyurapa moves to deposit cash directly into bank accounts of unorganized sector workers)