ಮೈಸೂರು: ಮರಕ್ಕೆ ಕಾರು ಡಿಕ್ಕಿ; ಸಿಆರ್​ಪಿಎಫ್ ಯೋಧ ಸಾವು

ಮೈಸೂರು: ಮರಕ್ಕೆ ಕಾರು ಡಿಕ್ಕಿ; ಸಿಆರ್​ಪಿಎಫ್ ಯೋಧ ಸಾವು
ಸಿಆರ್​ಪಿಎಫ್ ಯೋಧ ಅಣ್ಣಯ್ಯ ಶೆಟ್ಟಿ

ಇವರು ಎರಡು ದಿನಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದರು. ಗುರುವಾರ ಮೈಸೂರಿನಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಊರಿಗೆ ತೆರಳುತ್ತಿದ್ದ ರಾತ್ರಿ ವೇಳೆ ಈ ಅವಘಡ ಸಂಭವಿಸಿದೆ. ತಾಲೂಕಿನ ಕಲ್ಲಹಳ್ಳಿ ಗೇಟ್​ನ ಹತ್ತಿರದಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

TV9kannada Web Team

| Edited By: sandhya thejappa

Jun 05, 2021 | 11:56 AM

ಮೈಸೂರು: ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಸಿಆರ್​ಪಿಎಫ್​ ಯೋಧ ಸಾವನ್ನಪ್ಪಿರುವ ಘಟನೆ ಮೈಸೂರು ಬಂಟ್ವಾಳ ರಸ್ತೆಯಲ್ಲಿ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ಅರಸುಕಲ್ಲಹಳ್ಳಿ ಬಳಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಘಟನೆಯಲ್ಲಿ 35 ವರ್ಷದ ಅಣ್ಣಯ್ಯ ಶೆಟ್ಟಿ ಮೃತಪಟ್ಟಿದ್ದಾರೆ. ಅಣ್ಣಯ್ಯ ಶೆಟ್ಟಿ ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಗೊರಳ್ಳಿ ಗ್ರಾಮದವರು. ಗ್ರಾಮದ ನಾಗರಾಜಶೆಟ್ಟಿಯವರ ಪುತ್ರ ಅಣ್ಣಯ್ಯ ಶೆಟ್ಟಿ ಸಿಆರ್​ಪಿಎಫ್ ಯೋಧರಾಗಿ ಮಹಾರಾಷ್ಟ್ರದ ನಕ್ಸಲ್ ಏರಿಯಾದಲ್ಲಿ ಕಳೆದ 14 ವರ್ಷಗಳಿಂದ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇವರು ಎರಡು ದಿನಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದರು. ಗುರುವಾರ ಮೈಸೂರಿನಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಊರಿಗೆ ತೆರಳುತ್ತಿದ್ದ ರಾತ್ರಿ ವೇಳೆ ಈ ಅವಘಡ ಸಂಭವಿಸಿದೆ. ತಾಲೂಕಿನ ಕಲ್ಲಹಳ್ಳಿ ಗೇಟ್​ನ ಹತ್ತಿರದಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಅಣ್ಣಯ್ಯ ಶೆಟ್ಟಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಹುಣಸೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೋವು, ಆಕ್ರಂದನ ಹುಣಸೂರಿನ ಶವಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಸ್ಥಳದಲ್ಲಿ ಕುಟುಂಬದವರ ದುಃಖ ಹೇಳತೀರದಾಗಿತ್ತು. ಶುಕ್ರವಾರದಂದೇ ಅಣ್ಣಯ್ಯ ಶೆಟ್ಟಿಯವ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಗೊರಳ್ಳಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಅಗಲಿದ ವೀರ ಯೋಧನಿಗೆ ಕಂಬನಿ ಮಿಡಿದರು. ಮೃತ ಅಣ್ಣಯ್ಯ ಶೆಟ್ಟಿಯವರ ಸಹೋದ್ಯೋಗಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ

ಮಂಡ್ಯ; ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಅಸ್ವಸ್ಥರಾಗಿದ್ದ ಮೂವರು ಕಾರ್ಮಿಕರ ಸಾವು

ಕೊಡಗಿನ ಭಾವೀ ಪೈಲಟ್ ಗುಜರಾತ್​ನಲ್ಲಿ ಆತ್ಮಹತ್ಯೆ: ಸಾವಿನ ಸುತ್ತ ಅನುಮಾನದ ಹುತ್ತ

(CRPF soldier died in car accident at mysuru)

Follow us on

Related Stories

Most Read Stories

Click on your DTH Provider to Add TV9 Kannada