ಮಂಡ್ಯ; ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಅಸ್ವಸ್ಥರಾಗಿದ್ದ ಮೂವರು ಕಾರ್ಮಿಕರ ಸಾವು
ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೆ ಮ್ಯಾನ್‌ಹೋಲ್‌ನಲ್ಲಿ 20 ಅಡಿ ಆಳಕ್ಕೆ ಇಳಿದಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಕಮಲಾನಗರ ನಿವಾಸಿಗಳಾದ ಮಂಜುನಾಥ್, ರಾಜೇಶ್, ಮಂಜುನಾಥ್ ಮೃತರು.
ಮಂಡ್ಯ: ಮ್ಯಾನ್‌ಹೋಲ್‌ನಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ರಾಮನಗರದ ಐಜೂರು ನಗರದಲ್ಲಿ ನಡೆದಿದೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೆ ಮ್ಯಾನ್‌ಹೋಲ್‌ನಲ್ಲಿ 20 ಅಡಿ ಆಳಕ್ಕೆ ಇಳಿದಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಕಮಲಾನಗರ ನಿವಾಸಿಗಳಾದ ಮಂಜುನಾಥ್, ರಾಜೇಶ್, ಮಂಜುನಾಥ್ ಮೃತರು.
ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಯಾವುದೇ ಮುಂಜಾಗ್ರತಾ ಕ್ರಮಗಳನ್ನಕೈಗೊಳ್ಳದೆ ಮ್ಯಾನ್‌ಹೋಲ್‌ನಲ್ಲಿ ಯುಜಿಡಿ ಲಿಂಕ್ ಕಾಮಗಾರಿ ನಡೆಸಲು ಮ್ಯಾನ್‌ಹೋಲ್ಗೆ ಇಳಿದಿದ್ದರು. ಈ ವೇಳೆ ಉಸಿರಾಟ ಸಮಸ್ಯೆಯಾಗಿ ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಅಸ್ವಸ್ಥರಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮ್ಯಾನ್‌ಹೋಲ್‌ನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಮೇಲೆತ್ತಿ ರಾಮನಗರ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಲಾರಿಯಲ್ಲಿ ತೊಗರಿಬೇಳೆ ಮೂಟೆ ಉರುಳಿ, ಅಕ್ಕಪಕ್ಕ ಮಲಗಿದ್ದ ಇಬ್ಬರು ಕಾರ್ಮಿಕರ ಸಾವು