Lockdown Guidelines: ಜೂನ್ 14ರವರೆಗೆ ಲಾಕ್​ಡೌನ್ ಮುಂದುವರಿಕೆ; 500 ಕೋಟಿ ಆರ್ಥಿಕ ಪ್ಯಾಕೇಜ್: ಸಿಎಂ ಯಡಿಯೂರಪ್ಪ ಘೋಷಣೆ

CM BS Yediyurappa PC Highlights: ಮೀನುಗಾರರಿಗೆ, ಮುಜರಾಯಿ ಇಲಾಖೆ ನೋಂದಾಯಿತ ಅರ್ಚಕರು, ಮಸೀದಿಗಳ ಧಾರ್ಮಿಕ ಪೂಜಾರಿಗಳು, ಚಲನಚಿತ್ರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಪ್ಯಾಕೇಜ್ ಘೋಷಿಸಲಾಗಿದೆ.

Lockdown Guidelines: ಜೂನ್ 14ರವರೆಗೆ ಲಾಕ್​ಡೌನ್ ಮುಂದುವರಿಕೆ; 500 ಕೋಟಿ ಆರ್ಥಿಕ ಪ್ಯಾಕೇಜ್: ಸಿಎಂ ಯಡಿಯೂರಪ್ಪ ಘೋಷಣೆ
ಬಿ.ಎಸ್​.ಯಡಿಯೂರಪ್ಪ
Follow us
guruganesh bhat
|

Updated on:Jun 03, 2021 | 5:37 PM

ಬೆಂಗಳೂರು: ರಾಜ್ಯದಲ್ಲಿ 1 ವಾರ ಲಾಕ್​ಡೌನ್ ಮುಂದುವರೆಸಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದು, ಜೂನ್ 14ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದೆ. ಅಲ್ಲದೇ 500 ಕೋಟಿ ರೂಪಾಯಿಗಳ ಲಾಕ್​ಡೌನ್ ಪ್ಯಾಕೇಜ್​ನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಮೀನುಗಾರರಿಗೆ, ಮುಜರಾಯಿ ಇಲಾಖೆ ನೋಂದಾಯಿತ ಅರ್ಚಕರು, ಮಸೀದಿಗಳ ಧಾರ್ಮಿಕ ಪೂಜಾರಿಗಳು, ಚಲನಚಿತ್ರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಪ್ಯಾಕೇಜ್ ಘೋಷಿಸಲಾಗಿದೆ.

ಎರಡನೇ ಹಂತದಲ್ಲಿ ಸುಮಾರು ₹500 ಕೋಟಿ ಪ್ಯಾಕೇಜ್​ ಘೋಷಿಸಿರುವ ಸಿಎಂ ಯಡಿಯೂರಪ್ಪ, ತಲಾ 3000ದಂತೆ ಮಗ್ಗಗಳ ಕಾರ್ಮಿಕರಿಗೆ, ಚಲನಚಿತ್ರ, ದೂರದರ್ಶನ ಕಲಾವಿದರಿಗೆ ತಲಾ ₹3000, ಮೀನುಗಾರರಿಗೆ ತಲಾ 3000 ರೂ, ಅರ್ಚಕರು, ಅಡುಗೆ ಕೆಲಸಗಾರರಿಗೆ ತಲಾ ₹3000, ಸಿ ವರ್ಗದ ದೇವಸ್ಥಾನದ ಅರ್ಚಕರು, ಅಡುಗೆ ಕೆಲಸ, ಸಹಾಯಕರು, ಮಸೀದಿ ಫೇಶಿಮಾಂ, ಮೌಂಜನ್​ಗೆ ತಲಾ ₹3000 ಆಶಾ ಕಾರ್ಯಕರ್ತೆಯರಿಗೂ ತಲಾ ತಲಾ ₹3000, ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೆ ತಲಾ ₹2000, ಶಾಲಾ ಮಕ್ಕಳಿಗೆ ಜೂನ್, ಜುಲೈನಲ್ಲಿ ಹಾಲಿನ ಪುಡಿ ನೀಡಿಕೆ, ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ತಲಾ 5000 ರೂ. ಸಹಾಯ ಧನ ಘೋಷಿಸಿದ್ದಾರೆ.

ಪಾಸಿಟಿವಿಟಿ ರೇಟ್​ ಶೇ.5ಕ್ಕಿಂತ ಕಡಿಮೆಯಾದರೆ ರಿಲೀಫ್ ನೀಡಲಾಗುವುದು. ಲಾಕ್​ಡೌನ್​ ನಿಯಮಗಳನ್ನು ಸಡಿಲ ಮಾಡಲಾಗುವುದು. ಜನರು ಸಹಕರಿಸಿದರೆ ಲಾಕ್​ಡೌನ್​ ಸಡಿಲಿಸಲಾಗುವುದು. ಆದರೆ ಒಂದು ವಾರ ಯಾವುದೇ ಬದಲಾವಣೆ ಇಲ್ಲ ಎಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ: ‘ಕೇಂದ್ರ ಸರ್ಕಾರವೇ ಕೊವಿಡ್​ 19 ಲಸಿಕೆ ಖರೀದಿಸಿ ಪೂರೈಕೆ ಮಾಡಲಿ..’-ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಒಡಿಶಾ ಸಿಎಂ

ಜೂನ್ ತಿಂಗಳಲ್ಲಿ ರಾಜ್ಯದ 60 ಲಕ್ಷಕ್ಕೂ ಹೆಚ್ಚು ಜನರಿಗೆ ಕೊವಿಡ್ ಲಸಿಕೆ ವಿತರಿಸಲು ಸಿದ್ಧತೆ: ಸಿಎಂ ಯಡಿಯೂರಪ್ಪ

(Karnataka lockdown extended till June 14 CM BS Yediyurappa announces 500 crore package)

Published On - 5:24 pm, Thu, 3 June 21