AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋಕ್ಸೋ ಕೇಸ್​​ನಲ್ಲಿ ಇಂದು 2 ಬೆಳವಣಿಗೆ: ಕುತೂಹಲ ಮೂಡಿಸಿದ ಮಲ್ಲಿಕಾರ್ಜುನ ಮುತ್ಯಾ ನಡೆ

ಅಪ್ರಾಪ್ತೆ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿ ವಿಡಿಯೋ ವೈರಲ್ ಬೆನ್ನಲ್ಲೇ ಯಾದಗಿರಿಯ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾ ನಾಪತ್ತೆಯಾಗಿದ್ದಾರೆ. ಆದ್ರೆ, ಅಜ್ಞಾತ ಸ್ಥಳದಿಂದಲೇ ಮುತ್ಯಾ ಪ್ರತ್ಯಕ್ಷವಾಗಿದ್ದು, ಯಾರು ಆತಂಕಗೊಳ್ಳಬೇಡಿ ಎಂದು ಭಕ್ತರಿಗೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರಕರಣ ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ಮುತ್ಯಾ ಇದೀಗ ಏಕಾಏಕಿ ಯುಟರ್ನ್ ಹೊಡಿದಿದ್ದಾರೆ.

ಫೋಕ್ಸೋ ಕೇಸ್​​ನಲ್ಲಿ ಇಂದು 2 ಬೆಳವಣಿಗೆ: ಕುತೂಹಲ ಮೂಡಿಸಿದ ಮಲ್ಲಿಕಾರ್ಜುನ ಮುತ್ಯಾ ನಡೆ
Mallikarjun Mutya
ರಮೇಶ್ ಬಿ. ಜವಳಗೇರಾ
|

Updated on:Mar 03, 2026 | 4:31 PM

Share

ಕಲಬುರಗಿ/ಯಾದಗಿರಿ, (ಮಾರ್ಚ್ 03): ತಮ್ಮ ವಿರುದ್ಧ ದಾಖಲಾಗಿರುವ ಫೋಕ್ಸೋ ಪ್ರಕರಣ (pocso case) ರದ್ದು ಕೋರಿ ಯಾದಗಿರಿಯ ಮಹಲ್ ರೋಜಾ ಮಲ್ಲಿಕಾರ್ಜುನ ಮುತ್ಯಾ (Mallikarjun mutya) ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಬಾಲಕಿ ಜತೆ ಅನುಚಿತವಾಗಿ ವರ್ತಿಸಿದ ವಿಡಿಯೋ ವೈರಲ್ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದ್ದು, ಬಳಿಕ ಅಜ್ಞಾತ ಸ್ಥಳದಿಂದಲೇ ತಮ್ಮ ವಕೀಲರ ಮೂಲಕ ಪ್ರಕರಣ ರದ್ದುಕೋರಿ ಕಲಬುರಗಿ ಹೈಕೋರ್ಟ್​ ಅರ್ಜಿ ಸಲ್ಲಿಸಿದ್ದರು. ಆದ್ರೆ, ಇದೀಗ ಇಂದು (ಮಾರ್ಚ್ 03) ಏಕಾಏಕಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ. ಇದರಿಂದ ಮುತ್ಯಾ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಮಲ್ಲಿಕಾರ್ಜುನ ಮುತ್ಯಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಯಾದಗಿರಿ ಜಿಲ್ಲಾ ಮತ್ತು ಪ್ರಧಾನ ಸತ್ರಾ ನ್ಯಾಯಾಲಯ ಮಾರ್ಚ್ 6ಕ್ಕೆ ಮುಂದೂಡಿದೆ.

ಹೈಕೋರ್ಟ್​​ನಿಂದ ಅರ್ಜಿ ವಾಪಸ್

ಬಾಲಕಿ ಜತೆ ಅನುಚಿತವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಯಾದಗಿರಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಮಲ್ಲಿಕಾರ್ಜು ಮುತ್ಯಾ ವಿರುದ್ಧ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿದ್ದರು. ಕೇಸ್ ದಾಖಲಾಗುತ್ತಿದ್ದಂತೆಯೇ ಮುತ್ಯಾ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳದಿಂದಲೇ ತಮ್ಮ ವಿರುದ್ಧದ ಫೋಕ್ಸೋ ಪ್ರಕರಣ ರದ್ದುಕೋರಿ ಕಲಬುರಗಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಇಂದು ಏಕಾಏಕಿ ಮುತ್ಯಾ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಬಾಲಕಿ ಹೇಳಿಕೆ ಮೇಲೆ ಮಲ್ಲಿಕಾರ್ಜುನ ಮುತ್ಯಾನ ಭವಿಷ್ಯ ನಿರ್ಧಾರ

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಇನ್ನೊಂದೆಡೆ ಪೋಕ್ಸೋ ಪ್ರಕರಣ ಸಂಬಂಧ ಮಲ್ಲಿಕಾರ್ಜುನ ಮುತ್ಯಾ, ನಿರೀಕ್ಷಣಾ ಜಾಮೀನು ಕೋರಿ ಯಾದಗಿರಿ ಜಿಲ್ಲಾ ಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಇದಕ್ಕೆ ಸರಕಾರದ ಪರ ವಕೀಲರು ಸಹ ಆಕ್ಷೇಪಣೆ ಸಲ್ಲಿಸಿದ್ದಾರೆ. ಹೀಗಾಗಿ. ಜಾಮೀನು ಅರ್ಜಿ ವಿಚಾರಣೆಯನ್ನು ಯಾದಗಿರಿ ಜಿಲ್ಲಾ ಮತ್ತು ಪ್ರಧಾನ ಸತ್ರಾ ನ್ಯಾಯಾಲಯ ಮಾರ್ಚ್ 6ಕ್ಕೆ ಮುಂದೂಡಿದೆ.  ಇದರಿಂದ ಮುತ್ಯಾ ಭವಿಷ್ಯ ಮಾರ್ಚ್ 6ರಂದು ನಿರ್ಧಾರವಾಗಲಿದೆ.

ಬಾಲಕಿ ಹೇಳಿಕೆ ದಾಖಲು

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿ ನೀಡಿದ ಹೇಳಿಕೆ‌ಯನ್ನು ಶಹಾಪುರ ಜೆಎಂಸಿ ಕೋರ್ಟ್​ ಜಡ್ಜ್ ದಾಖಲಿಸಿಕೊಂಡಿದ್ದಾರೆ. ಬಳಿಕ ಬಾಲಕಿ ಹೇಳಿಕೆಯ ದಾಖಲು ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗೆ ಸಲ್ಲಿಸಲಾಗುತ್ತದೆ.  ಹೀಗಾಗಿ ಬಾಲಕಿ ನೀಡಿರುವ ಹೇಳಿಕೆ ಮೇಲೆ ಮಲ್ಲಿಕಾರ್ಜುನ ಮುತ್ಯಾನ ಭವಿಷ್ಯ ನಿರ್ಧರ ಆಗಲಿದೆ.

ಮುತ್ಯಾ ವಿರುದ್ಧ ಕೇಸ್ ರದ್ದು ಮಾಡುವಂತೆ ಭಕ್ತರ ಪ್ರತಭಟನೆ

ಇನ್ನೊಂದರಡೆ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ಪರ ವಿವಿಧ ಸಮುದಾಯದ ಜನರು ಸಹ ಬೀದಿಗಿಳಿದು ಹೋರಾಟ ನಡೆಸಿದ್ದು, ಮುತ್ಯಾ ವಿರುದ್ಧ ದಾಖಲಾಗಿರುವ ಫೋಕ್ಸೋ ಪ್ರಕರಣ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಪ್ರಕರಣ ದಾಖಲಾಗಿರುವ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಸಹ ಅಸಮಾಧಾನ ಹೊರಹಾಕಿದ್ದಾರೆ.

ಕರ್ನಾಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:29 pm, Tue, 3 March 26

Follow Us
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ