AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಕ್ಸಿಕ್ ಅಬ್ಬರ: ‘ತಬಾಹಿ’ ಹಾಡು ಟ್ರೆಂಡ್, ಯಾವ ಭಾಷೆಯಲ್ಲಿ ಅಧಿಕ ವೀಕ್ಷಣೆ?

Toxic movie song: ‘ಟಾಕ್ಸಿಕ್’ ಚಿತ್ರದ ಮೊದಲ ಹಾಡು ‘ತಬಾಹಿ’ ನಿನ್ನೆ (ಮಾರ್ಚ್ 03) ಬಿಡುಗಡೆ ಆಗಿದೆ. ಹಾಡಿನ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅದರಲ್ಲೂ ಕೇವಲ ಲಿರಿಕಲ್ ವಿಡಿಯೋ ಮಾತ್ರವೇ ಬಿಡುಗಡೆ ಮಾಡಿರುವುದಕ್ಕೆ ಯಶ್ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಸಹ ಯೂಟ್ಯೂಬ್​​ನಲ್ಲಿ ಕೋಟ್ಯಂತರ ಮಂದಿ ಹಾಡನ್ನು ನೋಡಿದ್ದಾರೆ. ಐದು ಭಾಷೆಗಳಲ್ಲಿ ಸಿನಿಮಾದ ಹಾಡು ಬಿಡುಗಡೆ ಆಗಿದ್ದು, ಯಾವ ಭಾಷೆಯ ಹಾಡು ಹೆಚ್ಚು ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿದೆ? ಮಾಹಿತಿ ಇಲ್ಲಿದೆ...

ಟಾಕ್ಸಿಕ್ ಅಬ್ಬರ: ‘ತಬಾಹಿ’ ಹಾಡು ಟ್ರೆಂಡ್, ಯಾವ ಭಾಷೆಯಲ್ಲಿ ಅಧಿಕ ವೀಕ್ಷಣೆ?
Tabahi Song
ಮಂಜುನಾಥ ಸಿ.
|

Updated on: Mar 03, 2026 | 6:32 PM

Share

ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಟಾಕ್ಸಿಕ್‘ (Toxic: A Fairy Tale for Grown-ups) ಚಿತ್ರದ ಮೊದಲ ಹಾಡು ‘ತಬಾಹಿ’ ನಿನ್ನೆ (ಮಾರ್ಚ್ 03) ಬಿಡುಗಡೆ ಆಗಿದೆ. ಹಾಡಿನ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅದರಲ್ಲೂ ಕೇವಲ ಲಿರಿಕಲ್ ವಿಡಿಯೋ ಮಾತ್ರವೇ ಬಿಡುಗಡೆ ಮಾಡಿರುವುದಕ್ಕೆ ಯಶ್ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಸಹ ಯೂಟ್ಯೂಬ್​​ನಲ್ಲಿ ಕೋಟ್ಯಂತರ ಮಂದಿ ಹಾಡನ್ನು ನೋಡಿದ್ದಾರೆ. ಐದು ಭಾಷೆಗಳಲ್ಲಿ ಸಿನಿಮಾದ ಹಾಡು ಬಿಡುಗಡೆ ಆಗಿದ್ದು, ಯಾವ ಭಾಷೆಯ ಹಾಡು ಹೆಚ್ಚು ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿದೆ? ಮಾಹಿತಿ ಇಲ್ಲಿದೆ…

‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಹಾಡು ಅತಿ ಹೆಚ್ಚು ವೀಕ್ಷಣೆ ಪಡೆದಿರುವುದು ಹಿಂದಿ ಭಾಷೆಯಲ್ಲಿ. ಹಿಂದಿ ಆವೃತ್ತಿಯ ಹಾಡು 2 ಮಿಲಿಯನ್ (20 ಲಕ್ಷ) ವೀಕ್ಷಣೆಗಳನ್ನು ಪಡೆದುಕೊಂಡಿದೆ. ಎರಡನೇ ಸ್ಥಾನ ಕನ್ನಡ ಆವೃತ್ತಿಯದ್ದು, ಯೋಗರಾಜ್ ಭಟ್ ಅವರ ಸಾಹಿತ್ಯವಿರುವ ಕನ್ನಡ ಆವೃತ್ತಿಯ ಹಾಡು 17 ಲಕ್ಷ ವೀಕ್ಷಣೆಗಳೊಂದಿಗೆ ಟ್ರೆಂಡ್ ಆಗುತ್ತಿದೆ. ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿರುವ ತೆಲುಗು ಹಾಡು 4.37 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ತಮಿಳು ಹಾಡಿಗೆ 1.8 ಲಕ್ಷ ಮತ್ತು ಮಲಯಾಳಂ ಆವೃತ್ತಿ 78 ಸಾವಿರ ವೀಕ್ಷಣೆಗಳನ್ನು ಯೂಟ್ಯೂಬ್​​ನಲ್ಲಿ ಪಡೆದುಕೊಂಡಿದೆ. ಈ ಮಾಹಿತಿಯು ಮಾರ್ಚ್ 03ರ ಸಂಜೆ ವೇಳೆಗೆ ಸಂಗ್ರಹಿಸಿದ ಮಾಹಿತಿ ಆಗಿದ್ದು, ವೀವ್ಸ್​​ಗಳ ಸಂಖ್ಯೆ ಪ್ರತಿ ಗಂಟೆಗೂ ಬದಲಾಗುತ್ತಲೇ ಇರುತ್ತದೆ.

ಇದನ್ನೂ ಓದಿ:ಜನರ ಟೀಕೆ ಬಳಿಕ ಯಶ್ ಜೊತೆ ನಾಯಕಿ ಮುಖ ತೋರಿಸಿದ ‘ಟಾಕ್ಸಿಕ್’ ಚಿತ್ರತಂಡ

ಈ ಹಿಂದೆ ಬಿಡುಗಡೆ ಆಗಿದ್ದ ಯಶ್ ಅವರ ಪಾತ್ರದ ಇಂಟ್ರೊಡಕ್ಷನ್ ಟೀಸರ್ ಮತ್ತು ಸಿನಿಮಾದ ಟೀಸರ್​​ಗೆ ಹೋಲಿಸಿದರೆ ಇದು ಕಡಿಮೆ ಸಂಖ್ಯೆ ಎನ್ನಬಹುದು. ಯಶ್ ಅವರ ಇಂಟ್ರೊಡಕ್ಷನ್ ಟೀಸರ್ ಸುಮಾರು ಒಂದು ಕೋಟಿಗೂ ಹೆಚ್ಚಿನ ವೀವ್ಸ್ ಗಳಿಸಿಕೊಂಡಿತ್ತು. ಟ್ರೈಲರ್ ಸಹ ಸಖತ್ ಟ್ರೆಂಡ್ ಆಗಿತ್ತು. ಆದರೆ ನಿನ್ನೆ ಬಿಡುಗಡೆ ಆಗಿರುವ ಹಾಡು ಹೆಚ್ಚಿನ ಹೈಪ್ ಸೃಷ್ಟಿ ಮಾಡಿಲ್ಲವೆಂದೇ ಹೇಳಬೇಕು.

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಅವರ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಮಾರ್ಚ್ 8 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸಿನಿಮಾದ ಟ್ರೈಲರ್ ‘ಟಾಕ್ಸಿಕ್’ ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನು ಕೊಡಲಿದೆ, ಹೈಪ್ ಹೆಚ್ಚಿಸಲಿದೆ ಎಂಬುದು ಯಶ್ ಅಭಿಮಾನಿಗಳ ನಿರೀಕ್ಷೆಯಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು