ಪೋರ್ಟರ್, ರ್ಯಾಪಿಡೋ ಆ್ಯಪ್‌ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು: ಕಾರಣ ಇಲ್ಲಿದೆ
Bengaluru News: ಗೂಡ್ಸ್ ವಾಹನ ಚಾಲಕರು ಪೋರ್ಟರ್, ರ್ಯಾಪಿಡೋ, ಅಂಕಲ್ ಡೆಲಿವರಿ ಆ್ಯಪ್‌ಗಳ ವಿರುದ್ಧ ಆಡುಗೋಡಿಯಲ್ಲಿ ಪ್ರತಿಭಟಿಸಿದ್ದಾರೆ. ಪ್ಯಾಸೆಂಜರ್ ಆಟೋಗಳು ಗೂಡ್ಸ್ ಸಾಗಿಸುತ್ತಿರುವುದರಿಂದ ತಮ್ಮ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ಚಾಲಕರು ಆರೋಪಿಸಿದ್ದಾರೆ. 2021ರಿಂದ ಸಚಿವರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಚಾಲಕರು ನ್ಯಾಯಕ್ಕಾಗಿ ಹೋರಾಟಕ್ಕಿಳಿದಿರೋದಾಗಿ ತಿಳಿಸಿದ್ದಾರೆ.
ಬೆಂಗಳೂರು, ಜೂನ್ 23: ಪೋರ್ಟರ್, ರ‍್ಯಾಪಿಡೋ ಸೇರಿದಂತೆ ಹಲವು ಆ್ಯಪ್‌ಗಳ ಮೂಲಕ ಪ್ಯಾಸೆಂಜರ್ ಆಟೋಗಳಿಗೆ ಗೂಡ್ಸ್ ಬಾಡಿಗೆ ನೀಡಲಾಗುತ್ತಿದೆ. ಇದರಿಂದ ಗೂಡ್ಸ್ ವಾಹನಗಳಿಗಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ಮಾಲೀಕರಿಗೆ ಬಾಡಿಗೆ ಸಿಗ್ತಿಲ್ಲ ಎಂದು ಆರೋಪಿಸಿ ಚಾಲಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಆಡುಗೋಡಿಯಲ್ಲಿರುವ ಪೋರ್ಟರ್ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಲು ಗೂಡ್ಸ್ ವಾಹನಗಳ ಚಾಲಕರು ಮುಂದಾಗಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ತಳ್ಳಾಟ, ನೂಕಾಟ ಕೂಡ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jun 23, 2026 04:05 PM
Follow Us
Latest Videos
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’

