ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಎಂಬ ಸಿಎಂ ಮಾತಿನ ಹಿಂದೆ ಅಡಗಿದೆ ವಿರೋಧಿಗಳಿಗೆ ತಕ್ಕ ಉತ್ತರ.. ಸಿಎಂ ಈ ಹೇಳಿಕೆ ನೀಡಿದ್ದು ಏಕೆ ಗೊತ್ತಾ?

ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಎಂಬ ಸಿಎಂ ಮಾತಿನ ಹಿಂದೆ ಅಡಗಿದೆ ವಿರೋಧಿಗಳಿಗೆ ತಕ್ಕ ಉತ್ತರ.. ಸಿಎಂ ಈ ಹೇಳಿಕೆ ನೀಡಿದ್ದು ಏಕೆ ಗೊತ್ತಾ?
ಬಿ.ಎಸ್​.ಯಡಿಯೂರಪ್ಪ

BS Yediyurappa: ವರಿಷ್ಠರು ಸೂಚಿಸಿದ್ರೆ ರಾಜೀನಾಮೆ ಸಲ್ಲಿಸುವೆ ಎಂಬ ಹೇಳಿಕೆಯನ್ನು ಸಾಕಷ್ಟು ಯೋಚನೆ ಮಾಡಿಯೇ ಮಾತಾಡಿದ್ದ ಸಿಎಂ ಬಿಎಸ್ವೈ ಮಾತಿನ ಹಿಂದೆ ಮರ್ಮವಡಗಿದೆ. ಮೊನ್ನೆ ರಾತ್ರಿಯೇ ಈ ಬಗ್ಗೆ ಆಪ್ತರ ಜತೆ ಸಿಎಂ ಸಮಾಲೋಚನೆ ನಡೆಸಿ ನಾಯಕತ್ವ ಬದಲಾವಣೆ ಚರ್ಚೆ ಪದೇ ಪದೇ ಪ್ರಸ್ತಾಪವಾಗುತ್ತಿರುವುದಕ್ಕೆ ಆಕ್ಷೇಪವಿದೆ. ವಿರೋಧಿ ಬಣದ ಚಟುವಟಿಕೆಗೆ ಬ್ರೇಕ್ ಹಾಕಲೇ ಬೇಕು ಎಂದು ನಿರ್ಧರಿಸಿದ್ದರು.

TV9kannada Web Team

| Edited By: sadhu srinath

Jun 07, 2021 | 11:21 AM

ಬೆಂಗಳೂರು: ಕಳೆದ ಮೂರು ವಾರಗಳಿಂದ ರಾಜ್ಯ ಬಿಜೆಪಿಯಲ್ಲಿ ಹೊಗೆಯಾಡ್ತಿದ್ದ ನಾಯಕತ್ವ ಬದಲಾವಣೆ ಜ್ವಾಲಾಮುಖಿ ಸ್ಫೋಟಗೊಂಡಿದೆ. ರಾಜೀನಾಮೆ ಬಗ್ಗೆ ಖುದ್ದು ಸಿಎಂ ಬಿಎಸ್ವೈ ಹೇಳೋ ಮೂಲಕ ಮುಖ್ಯಮಂತ್ರಿ ಬದಲಾವಣೆ ಆಟದ ಹೊಸ ಇನ್ನಿಂಗ್ಸ್ ಶುರುವಾಗಿದೆ. ಸಿಎಂ ರಾಜೀನಾಮೆ ಚರ್ಚೆ ಬಂದಾಗಲೆಲ್ಲಾ ಬಿಎಸ್ವೈ ಬೆನ್ನಿಗೆ ನಿಲ್ತಿದ್ದ ಆಪ್ತ ಶಾಸಕರು, ಸಚಿವರಿಗೆ ಸಿಎಂ ಹೇಳಿಕೆಯಿಂದ ದಿಗ್ಭ್ರಮೆಯಾಗಿದೆ. ಯಡಿಯೂರಪ್ಪ ಬಾಯಲ್ಲಿ ಇಂಥಾದ್ದೊಂದು ಮಾತು ಬಂದ ಬಳಿಕ ಬಿಜೆಪಿ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಹಾಗಾದ್ರೆ ನಿನ್ನೆ ಈ ಹೇಳಿಕೆ ಬಳಿಕ ಸಿಎಂ ಭೇಟಿ ಮಾಡಿದ ಆಪ್ತ ಬಳಗ ಏನೆಲ್ಲ ಮಾತುಕತೆ ನಡೆಸಿದೆ ಎಂಬ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ರಾಜೀನಾಮೆ ನೀಡಲು ಸಿದ್ಧ ಎಂಬ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಬಳಿಕ ಆಪ್ತ ಸಚಿವರು ಮತ್ತು‌ ಶಾಸಕರ ಜೊತೆ ನಿನ್ನೆ ಮಧ್ಯಾಹ್ನ ಸಿಎಂ ನಿವಾಸ ಕಾವೇರಿಯಲ್ಲಿ ಮಾತುಕತೆ ನಡೆಸಿದ್ರು. ರಾಜೀನಾಮೆ ಹೇಳಿಕೆ ನಂತರ ಸಿಎಂ ಯಡಿಯೂರಪ್ಪ ಬೇಸರದಲ್ಲೇ ಇದ್ರು. ಪ್ರತಿ ನಿತ್ಯ ಬದಲಾವಣೆ ಮಾತು ಕೇಳಿ ಕೇಳಿ ಬೇಸರವಾಗಿದೆ. ಅದಕ್ಕೆ ನಾನು ಹೇಳಬೇಕಾಗಿರುವುದನ್ನು ಹೇಳಿದ್ದೇನೆ‌ ಎಂದು ಆಪ್ತರ ಬಳಿ ಬೇಸರ ಹೊರ ಹಾಕಿದ್ರು. ಏನೂ ಬೇಸರ ಮಾಡಿಕೊಳ್ಳಬೇಡಿ, ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ. ನಾಳೆಯಿಂದ ಇನ್ನಷ್ಟು ವೇಗದಿಂದ ಕೆಲಸ ಮಾಡೋಣ ಎಂದು ಆಪ್ತ ಸಚಿವರು ಸಮಾಧಾನಿಸಿದ್ದಾರೆ.

ಆಪ್ತ ಸಚಿವರಿಗೆ ಮಾಧ್ಯಮದ ಮುಂದೆ ಹೇಳಿಕೆ ನೀಡುವಂತೆ ಸಿಎಂ ಸಲಹೆ ನಾನು ಹೇಳುವಂತಹದ್ದು ಹೇಳಿದ್ದೇನೆ, ನಿಮಗೆ ಅನ್ನಿಸಿದ್ದನ್ನು ಮಾಧ್ಯಮದ ಮುಂದೆ ಹೇಳಿ. ತಮ್ಮ ಹೇಳಿಕೆಯ ಬಗ್ಗೆ ಸಚಿವರು ಪ್ರತಿಕ್ರಿಯೆ ನೀಡುವಂತೆ ಆಪ್ತರಿಗೆ ಸಿಎಂ ಸಲಹೆ ನೀಡಿದ್ರು. ನಾಯಕತ್ವ ಬದಲಾವಣೆ ಬಗ್ಗೆ ಇನ್ನು ಚರ್ಚೆ ನಡೆಯದಂತೆ ನೋಡಿಕೊಳ್ಳಲು ಮುಂದಾಗಿದ್ದ ಸಿಎಂ ಯಡಿಯೂರಪ್ಪ ಈಗಲೂ ಯಶಸ್ವಿಯಾಗಿ ಆಡಳಿತ ನಡೆಸುತ್ತಿರುವ ಸಂದೇಶವನ್ನು ತಮ್ಮ ಪಕ್ಷದಲ್ಲಿರುವ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಲು ಬಿಎಸ್ವೈ ಮಾಸ್ಟರ್‌ ಪ್ಲಾನ್ ಮಾಡಿದ್ದಾರೆ. ಸಿಎಂ ಜತೆಗಿನ ಸಮಾಲೋಚನೆ ಬೆನ್ನಲ್ಲೇ ಸಿಎಂ ಸಮರ್ಥನೆಯ ಹೇಳಿಕೆಗಳು ವ್ಯಕ್ತವಾಗಿವೆ.

ವರಿಷ್ಠರು ಸೂಚಿಸಿದ್ರೆ ರಾಜೀನಾಮೆ ಸಲ್ಲಿಸುವೆ ಎಂಬ ಹೇಳಿಕೆಯನ್ನು ಸಾಕಷ್ಟು ಯೋಚನೆ ಮಾಡಿಯೇ ಮಾತಾಡಿದ್ದ ಸಿಎಂ ಬಿಎಸ್ವೈ ಮಾತಿನ ಹಿಂದೆ ಮರ್ಮ ಅಡಗಿದೆ. ಮೊನ್ನೆ ರಾತ್ರಿಯೇ ಈ ಬಗ್ಗೆ ಆಪ್ತರ ಜತೆ ಸಿಎಂ ಸಮಾಲೋಚನೆ ನಡೆಸಿ ನಾಯಕತ್ವ ಬದಲಾವಣೆ ಚರ್ಚೆ ಪದೇ ಪದೇ ಪ್ರಸ್ತಾಪವಾಗುತ್ತಿರುವುದಕ್ಕೆ ಆಕ್ಷೇಪವಿದೆ. ವಿರೋಧಿ ಬಣದ ಚಟುವಟಿಕೆಗೆ ಬ್ರೇಕ್ ಹಾಕಲೇ ಬೇಕು ಎಂದು ನಿರ್ಧರಿಸಿದ್ದರು. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟತೆ ಸಿಕ್ಕಿದ ಬಳಿಕ ಈ ಹೇಳಿಕೆ ನೀಡಿದ್ದಾರೆ. ವರಿಷ್ಠರ ಗಮನಕ್ಕೆ ತಂದೇ ಸಿಎಂ ಯಡಿಯೂರಪ್ಪ ಈ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಯಡಿಯೂರಪ್ಪ 3 ಪಾಯಿಂಟ್‌ ಅಜೆಂಡಾ 1.ಹೈಕಮಾಂಡ್​ಗೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ಸ್ಪಷ್ಟವಾಗಿ ಹೋಗಬೇಕು 2.ದೆಹಲಿಗೆ ಪದೇ ಪದೇ ನಾಯಕರು ಹೋಗೋದು, ನಾಯಕತ್ವ ಬದಲಾವಣೆ ಚರ್ಚೆ ನಡೆಸೋದು ನಿಲ್ಲಬೇಕು. 3.ಯಡಿಯೂರಪ್ಪ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂಬುವುದೂ ಸ್ಪಷ್ಟವಾಗಬೇಕು.

ಸಿಎಂ ಮಾತಿನ ಹಿಂದಿನ ತಂತ್ರ ವರಿಷ್ಠರು ಹೇಳಿದರೆ ಮಾತ್ರ ಬದಲಾವಣೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಬೇಕು. ನಿಮ್ಮಿಂದ ಯಾರಿಂದಲೂ ಏನೂ ಮಾಡಲು ಸಾದ್ಯವಿಲ್ಲ ಎಂದು ವಿರೋಧಿ ಗುಂಪಿಗೆ ಡೈರೆಕ್ಟ್ ಪಂಚ್ ಕೊಟ್ಟಂಗಿರಬೇಕು. ಯಾವುದೇ ನಾಯಕರು ದೆಹಲಿಗೆ ಹೋಗಿ ಲಾಬಿ ನಡೆಸಿದರೆ ಬದಲಾವಣೆ ಅಸಾಧ್ಯ. ಹೈಕಮಾಂಡ್‌ ವರಿಷ್ಠರು ಕೊಟ್ಟ ಮಾತಿನಂತೆ ಅಧಿಕಾರ ನಡೆಸುತ್ತಿದ್ದೇನೆ. ಬದಲಾವಣೆ ಇದ್ದರೆ ಹೈಕಮಾಂಡ್‌ ನಾಯಕರು ನೇರವಾಗಿ ತನಗೆ ತಿಳಿಸುತ್ತಾರೆ. ವರಿಷ್ಠರು ಹೇಳಿದರೆ ಯಾವುದೇ ಕ್ಷಣದಲ್ಲಿ ರಾಜೀನಾಮೆಗೆ ರೆಡಿ. ಸದ್ಯಕ್ಕೆ ಅವಧಿ ಪೂರೈಕೆ ಬಗ್ಗೆ ಹೈಕಮಾಂಡ್ ಜೊತೆ ಗುದ್ದಾಡುವ ಮನಸ್ಥಿತಿಯಲ್ಲಿ ತಾನಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸುವ ಉದ್ದೇಶದಿಂದ ಈ ಹೇಳಿಕೆಯನ್ನು ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿ.ಎಸ್.ಯಡಿಯೂರಪ್ಪ ಪ್ರಶ್ನಾತೀತ ನಾಯಕ, ಸಿಎಂ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ: ಗೋವಿಂದ ಕಾರಜೋಳ ಪ್ರತಿಕ್ರಿಯೆ

Follow us on

Related Stories

Most Read Stories

Click on your DTH Provider to Add TV9 Kannada