Sign In

By signing in or creating an account, you agree with Associated Broadcasting Company's Terms & Conditions and Privacy Policy.

Work From Home: ತನ್ನ ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಂ ಹೋಂ ಅವಕಾಶ ನೀಡಿದ ಫೇಸ್​ಬುಕ್

Facebook: ನಮಗೆ ಉದ್ಯೋಗಿಗಳು ಎಲ್ಲಿಂದ ಕೆಲಸ ಮಾಡುತ್ತೇವೆ ಎಂಬುದು ಮುಖ್ಯವಲ್ಲ. ಹೇಗೆ ಕೆಲಸ ಮಾಡುತ್ತೇವೆ ಎಂಬುದೊಂದೇ ಮುಖ್ಯ ಎಂದು ಶಾಶ್ವತ ವರ್ಕ್ ಫ್ರಂ ಹೋಂ ಆಯ್ಕೆಯನ್ನು ಘೋಷಿಸಿರುವ ಕಂಪನಿ ತಿಳಿಸಿದ್ದು, ತಾವು ಎಲ್ಲಿಂದ ಕೆಲಸ ನಿರ್ವಹಿಸುತ್ತೇವೆ ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ಉದ್ಯೋಗಿಗಳಿಗೇ ಬಿಟ್ಟುಕೊಟ್ಟಿದೆ.

Work From Home: ತನ್ನ ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಂ ಹೋಂ ಅವಕಾಶ ನೀಡಿದ ಫೇಸ್​ಬುಕ್
ಫೇಸ್​ಬುಕ್ ಸಂಸ್ಥಾಪಕ ಜುಕರ್​ಬರ್ಗ್​​​
Follow us
TV9 Web
| Updated By: guruganesh bhat

Updated on:Jun 10, 2021 | 3:43 PM

ಸ್ಯಾನ್ ಫ್ರಾನ್ಸಿಸ್ಕೋ: ವರ್ಕ್ ಫ್ರಂ ಹೋಂ ಮಾಡಬಯಸುವ ಉದ್ಯೋಗಿಗಳು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಫೇಸ್​ಬುಕ್ ತನ್ನ ಉದ್ಯೋಗಿಗಳಿಗೆ ಒದಗಿಸಿದೆ. ಬುಧವಾರ ಈ ಕುರಿತು ಅಧಿಕೃತ ಪ್ರಕಟನೆ ಹೊರಡಿಸಿರುವ ಫೇಸ್​ಬುಕ್, ತಮಗೆ ಬಯಸುವ ದೇಶದಿಂದ ಉದ್ಯೋಗಿಗಳು ಕೆಲಸ ನಿರ್ವಹಿಸುವ ಅವಕಾಶವನ್ನೂ ತನ್ನ ಉದ್ಯೋಗಿಗಳಿಗೆ ನೀಡಿದೆ. ಜೂನ್​ 15ರ ನಂತರದಿಂದ ಈ ಆಯ್ಕೆಯನ್ನು ಉದ್ಯೋಗಿಗಳಿಗೆ ನೀಡಲಿದ್ದೇವೆ ಎಂದು ಜಗತ್ತಿನ ದೈತ್ಯ ಸಾಮಾಜಿಕ ಜಾಲತಾಣ ಕಂಪೆನಿ ಘೋಷಿಸಿದೆ.

ನಮಗೆ ಉದ್ಯೋಗಿಗಳು ಎಲ್ಲಿಂದ ಕೆಲಸ ಮಾಡುತ್ತಾರೆ ಎಂಬುದು ಮುಖ್ಯವಲ್ಲ. ಹೇಗೆ ಕೆಲಸ ಮಾಡುತ್ತೇವೆ ಎಂಬುದೊಂದೇ ಮುಖ್ಯ ಎಂದು ಶಾಶ್ವತ ವರ್ಕ್ ಫ್ರಂ ಹೋಂ ಆಯ್ಕೆಯನ್ನು ಘೋಷಿಸಿರುವ ಕಂಪನಿ ತಿಳಿಸಿದ್ದು, ತಾವು ಎಲ್ಲಿಂದ ಕೆಲಸ ನಿರ್ವಹಿಸುತ್ತೇವೆ ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ಉದ್ಯೋಗಿಗಳಿಗೇ ಬಿಟ್ಟುಕೊಟ್ಟಿದೆ.

ಇತ್ತೀಚಿಗಷ್ಟೇ ಕಂಪೆನಿಯನ್ನು ಹಂತ ಹಂತವಾಗಿ ತೆರೆದಿದ್ದ ಫೇಸ್​ಬುಕ್ ಇದೀಗ ಉದ್ಯೋಗಿಗಳಿಗೆ ಮತ್ತೆ ವರ್ಕ್ ಫ್ರಾಂ ಹೋಂ ಅವಕಾಶ ಒದಗಿಸಿದೆ.

ನಾವು ಮನೆಯಲ್ಲಿ ಕುಳಿತು ಫೇಸ್​ಬುಕ್ ಪೆರಟುತ್ತಿದ್ದರೆ ಫೇಸ್​ಬುಕ್ ಸೃಷ್ಟಿಕರ್ತ ಮಾರ್ಕ್ ಜುಕರ್​ಬರ್ಗ್ ಬಯಲಲ್ಲಿ ಈಟಿ ಎಸೆಯುತ್ತಿದ್ದಾರೆ!

ಫೇಸ್​ಬುಕ್ ಸಿಇಒ ಮಾರ್ಕ್ ಝುಕರ್​ಬರ್ಗ್ ಫೇಸ್​ಬುಕ್​ನಲ್ಲಿ ಸಖತ್ತಾಗೇ ಆ್ಯಕ್ಟಿವ್ ಆಗಿದ್ದಾರೆ. ಅವರೂ ನಮ್ಮಂತೆ ನಿಮ್ಮಂತೆಯೇ ಮಾರ್ಕ್​ಗೂ ತಮ್ಮ ಕೌಶಲಗಳ ಫೊಟೊ ತೆಗೆದು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುವುದು ಅಂದರೆ ಇಷ್ಟವಂತೆ. ಅದಕ್ಕೆ ಮಾರ್ಕ್ ಝುಕರ್​ಬರ್ಗ್ ಹಾಕುವ ಪೋಸ್ಟ್​ಗಳೇ ಸಾಕ್ಷಿ. ಮನೆಯಂಗಳದಲ್ಲಿ ಬಿಡಿಸಿದ ರಂಗೋಲಿ ಚಿತ್ರ, ಅಂಗಳದಂಚಿಗೆ ಅರಳಿದ ದಾಸವಾಳದ ಹೂವಿನ ಚಿತ್ರಗಳನ್ನು ತೆಗೆದು ಪೋಸ್ಟ್ ಮಾಡಿದಂತೆ ಫೇಸ್​ಬುಕ್ ಸಿಇಒ ಮಾರ್ಕ್ ಝುಕರ್​ಬರ್ಗ್ ಸಹ ಅವರ ಸ್ಕಿಲ್​ಗಳ ಪ್ರದರ್ಶನ ಮಾಡುತ್ತಿದ್ದಾರೆ. ಏನಪ್ಪಾ ಮಾರ್ಕ್ ಝುಕರ್​ಬರ್ಗ್ ಸ್ಕಿಲ್ ಅಂದಿರಾ? ಇಲ್ಲಿದೆ ನೋಡಿ

ಅದೊಂದು ಹಸಿರು ಬಯಲು. ಕೈಯಲ್ಲಿ ಈಟಿ ಹಿಡಿದು ಬಂದ ಮಾರ್ಕ್ ಝುಕರ್​ಬರ್ಗ್ ದೂರದಲ್ಲಿ ನಿಲ್ಲಿಸಿರುವ ಗುರಿಗೆ ಈಟಿ ಎಸೆಯುತ್ತಾರೆ. ನೋಡನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾರ್ಕ್​ ಕೈಯಲ್ಲಿದ್ದ ಈಟಿ ಗುರಿಯತ್ತ ಛಕ್ಕನೆ ಸಾಗಿ ಫಟಕ್ ಅಂತ ನಾಟುತ್ತದೆ. ಫೇಸ್​ಬುಕ್​ನಲ್ಲಿ ನಮ್ಮ ನಿಮ್ಮಂತೆಯೇ ದಿನದ ಆಗುಹೋಗುಗಳ, ಹವ್ಯಾಸಗಳ ವಿಡಿಯೋ, ಫೋಟೊಗಳನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡು ಖುಷಿಪಡುವ ಚಾಲಿ ಅವರಿಗೂ ಇದೆ.

ಫೇಸ್​ಬುಕ್ ಸಿಇಒ ಮಾರ್ಕ್ ಝುಕರ್​ಬರ್ಗ್ ಪೋಸ್ಟ್​ಗೆ ಕೆಲವರು ಹಾಕಿಟುವ ಕಮೆಂಟ್​ಗಳು ಅಷ್ಟೇ ಸ್ವಾರಸ್ಯಕರವೂ ಆಗಿದೆ. ಕೆಲವಂತೂ ವ್ಯಂಗ್ಯಭರಿತವಾಗಿದೆ. ‘ನಾವು ಲಾಕ್​ಡೌನ್​ನಲ್ಲಿ ಮನೆಯಲ್ಲಿ ಕುಳಿತು ಫೇಸ್​ಬುಕ್ ಪೆರಟುತ್ತಿದ್ದರೆ ಫೇಸ್​ಬುಕ್ ಸೃಷ್ಟಿಕರ್ತ ಮಾತ್ರ ಬಯಲಲ್ಲಿ ಆರಾಮಾಗಿ ಆಡುತ್ತಿದ್ದಾನೆ ಎಂದು ಓರ್ವ ನೆಟ್ಟಿಗ ಪ್ರತಿಕ್ರಿಯಿದ್ದಾರೆ. ಈ ಪ್ರತಿಕ್ರಿಯೆ ಪ್ರಸ್ತುತ ಸನ್ನಿವೇಶದಲ್ಲಿ ಮಾರ್ಮಿಕ ಎನಿಸುವಂತಿದೆ.

ಇದನ್ನೂ ಓದಿ: ಭಾರತೀಯರನ್ನು ನಿಂಧಿಸಿದ ಟ್ವೀಟ್ ಸಖತ್ ವೈರಲ್: ಮಾರ್ಗನ್, ಬಟ್ಲರ್​ಗೆ ಶುರುವಾಯ್ತು ನಿಷೇಧದ ನಡುಕ!

ಕೊರೊನಾ ಲಸಿಕೆ ಪಡೆಯಲು ಹೋದಾಗ ಸೂಜಿಗೆ ಹೆದರಿ ನೆಲಕ್ಕುರುಳಿದ ವ್ಯಕ್ತಿ: ವಿಡಿಯೋ ವೈರಲ್

(Facebook which allowed its employees to work from home forever)

Published On - 3:38 pm, Thu, 10 June 21