ವಿಡಿಯೋದಲ್ಲಿ ಗಮನಿಸುವಂತೆ ಯುವತಿ ರಸ್ತೆಯ ಬದಿಯಲ್ಲಿದ್ದ ಹಾವನ್ನು ಹಿಡಿಯುವುದು ಕಂಡು ಬರುತ್ತದೆ. ಒಂದುಕ್ಷಣ ಭಯವಾಗುವುದಂತೂ ಸತ್ಯ. ಅಷ್ಟು ದೊಡ್ಡ ಗಾತ್ರದ ಹಾವನ್ನು ಯುವತಿ ಬರಿಗೈಯಲ್ಲೇ ಹಿಡಿದು ನಂತರ ಮುಂದೆ ಸಾಗುತ್ತಾಳೆ. ಹಾವು ಅವಳ ಸೊಂಟದ ಸುತ್ತ ಸುತ್ತಿಕೊಂಡಿರುವುದು ವಿಡಿಯೋದಲ್ಲಿ ನೋಡಬಹುದು.
ವಿಯೇಟ್ನಾಂನ ವ್ಯಕ್ತಿರೋರ್ವರು ವಿಡಿಯೋವನ್ನು ಸೆರೆಹಿಡಿದಿದ್ದಾರೆ. ‘ಈ ಯುವತಿ ದೊಡ್ಡ ಗಾತ್ರದ ಹಾವು ಹಿಡಿಯುತ್ತಿರುವುದನ್ನು ಕಂಡು ಆಶ್ಚರ್ಯವಾಯಿತು. ಒಮ್ಮೆ ಭಯವೂ ಆಯಿತು. ನಿಜವಾಗಿಯೂ ಇದು ಅಪಾಯಕಾರಿ ಎಂದು ಅವರು ಹೇಳಿದ್ದಾರೆ.
48 ಸೆಕೆಂಡುಗಳ ವಿಡಿಯೋ ಕ್ಲಿಪ್ ನೋಡಿದ ನೆಟ್ಟಿಗರು, ಹಾವು ಹಿಡಿಯಲು ನನ್ನ ಬಳಿ ಎಂದಿಗೂ ಸಾಧ್ಯವಿಲ್ಲ. ಈ ಯುವತಿ ತುಂಬಾ ಧೈರ್ಯಶಾಲಿ ಎಂದು ಹೇಳಿದ್ದಾರೆ. ಹಾವು ಒಂದು ಪ್ರಾಣಿಯಾಗಿ ನನಗೂ ಇಷ್ಟ. ಆದರೆ ಅದನ್ನು ಹಿಡಿಯುವ ಸಾಹಸಕ್ಕೆ ಹೋಗುವುದಿಲ್ಲ ಎಂದು ಇನ್ನೋರ್ವರು ಹೇಳಿದ್ದಾರೆ.
ಇದನ್ನೂ ಓದಿ:
ಲಾಕ್‌ಡೌನ್‌ನಲ್ಲಿ ಹಲವು ಬಡಾವಣೆಗಳಲ್ಲಿ ಹೆಚ್ಚಾಯ್ತು ಹಾವುಗಳ ಕಾಟ
ಚಲಿಸುತ್ತಿರುವ ಬೈಕ್ ಹ್ಯಾಂಡಲ್ಗೆ ಸುತ್ತಿಕೊಂಡ ಹಸಿರು ಹಾವು; ಕಂಗಾಲಾಗಿ ಕಿರುಚಾಡಿದ ಮಹಿಳೆ! ಇಲ್ಲಿದೆ ವೈರಲ್ ವಿಡಿಯೋ