Viral Video: ಇಲ್ಲೊಂದು ಮುದ್ದಾದ ಬೆಕ್ಕಿನ ಮರಿಯಿದೆ.. ನಾಲಿಗೆಯಿಂದ ಆ ಪುಟ್ಟ ಬಾಯಿ ಸವರುವುದನ್ನು ನೋಡಿದ್ರೆ ನಿಜವಾಗಿಯೂ ಖುಷಿ ಪಡ್ತೀರಾ
ಕದ್ದು ಹಾಲು ಕುಡಿಯುವ ಬೆಕ್ಕು ಆಗಾಗ ನಾಲಿಗೆ ಸವರಿಕೊಳ್ಳುತ್ತದೆ. ಏಕಿರಬಹುದು ಹೇಳಿ? ಸಿಕ್ಕಿ ಹಾಕಿಕೊಳ್ಳಬಹುದೆಂಬ ಭಯವಂತೆ. ಬೆಕ್ಕು ಬಾಯಿ ಸವರಿಕೊಳ್ಳುವುದು ಹೊಸತೇನೂ ಅಲ್ಲ. ಆದರೆ ಈ ಮುದ್ದಾದ ಬೆಕ್ಕನ್ನು ನೋಡಿದರೆ ಮನಸ್ಸಿಗೆ ಖುಷಿಯಾಗುವುದಂತೂ ಸತ್ಯ.
ಬೆಕ್ಕಿನ ಮರಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮೋಟು ಬಾಲ ಅಲ್ಲಾಡಿಸುತ್ತಾ, ಒಂದು ಘಳಿಗೆಯೂ ಸಮ್ಮನಿರದೇ ಮನೆ ತುಂಬ ಕೀಟಲೆ ಮಾಡುತ್ತವೆ. ಅದರಲ್ಲಿಯೂ ಎರಡು-ಮೂರು ಬೆಕ್ಕಿನ ಮರಿಗಳಿದ್ದರಂತೂ ಒಬ್ಬರಿಗೊಬ್ಬರು ಕಿತ್ತಾಡಿಕೊಳ್ಳುತ್ತಾ, ಪರಚಿಕೊಳ್ಳುತ್ತವೆ. ಅಂತಹ ಬೆಕ್ಕಿನ ಮರಿಗಳ ವಿಡಿಯೋ ಮನ ಸೆಳೆಯುವುದಂತೂ ಸತ್ಯ. ಅಂಥಹುದೇ ಒಂದು ಮುದ್ದಾದ ಬೆಕ್ಕಿನ ಮರಿ ನಾಲಿಗೆಯಿಂದ ಬಾಯಿ ಸವರಿಕೊಳ್ಳುವ ವಿಡಿಯೋ ಒಂದು ವೈರಲ್ ಆಗಿದೆ. ಮತ್ತೆ ಮತ್ತೆ ನೋಡಬೇಕು ಅನಿಸುವ ವಿಡಿಯೋವಿದು. ನಿವೂ ನೋಡಿ.
ಮುದ್ದು ಮುದ್ದಾಗಿರುವ ಬೆಕ್ಕಿನ ಮರಿಗಳ ಜತೆ ಆಟವಾಡಲು ಮಕ್ಕಳು ಹಾತೊರೆಯುತ್ತಾರೆ. ಪುಟ್ಟ ಬಾಯಿ.. ನಾಲಿಗೆ ತೆರೆದು ಬಾಯಿ ಸವರಿಕೊಳ್ಳುವ ನಾಲಿಗೆ. ಕಪ್ಪು ಕಣ್ಣು.. ಆಗಾಗ ಮಿಟುಕಿಸುತ್ತಾ ಕಿವಿ ನೆಟ್ಟಗೆ ಮಾಡಿಕೊಂಡು ಎಲ್ಲವನ್ನು ಆಲಿಸುವ ಸುಂದರ ಬೆಕ್ಕಿದು. ಪದೇ ಪದೇ ನಾಲಿಗೆ ಸುಳಿಯುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಒಂದು ಬಾರಿ ವಿಡಿಯೋ ನೋಡಿದಾಕ್ಷಣ ಮತ್ತೆ ಮತ್ತೆ ಆ ಮುದ್ದಾದ ಬೆಕ್ಕಿನ ಮರಿಯನ್ನು ನೋಡಬೇಕು ಅನಿಸುವ ವಿಡಿಯೋವೊಂದು ಇಲ್ಲಿದೆ.
View this post on Instagram
ಕದ್ದು ಹಾಲು ಕುಡಿಯುವ ಬೆಕ್ಕು ಆಗಾಗ ನಾಲಿಗೆ ಸವರಿಕೊಳ್ಳುತ್ತದೆ. ಏಕಿರಬಹುದು ಹೇಳಿ? ಸಿಕ್ಕಿ ಹಾಕಿಕೊಳ್ಳಬಹುದೆಂಬ ಭಯವಂತೆ. ಬೆಕ್ಕು ಬಾಯಿ ಸವರಿಕೊಳ್ಳುವುದು ಹೊಸತೇನೂ ಅಲ್ಲ. ಆದರೆ ಈ ಮುದ್ದಾದ ಬೆಕ್ಕನ್ನು ನೋಡಿದರೆ ಮನಸ್ಸಿಗೆ ಖುಷಿಯಾಗುವುದಂತೂ ಸತ್ಯ.
ಕದ್ದು ಹಾಲು ಕುಡಿದ ಸತ್ಯ ಗೊತ್ತಾಗಬಾರದು ಹಾಗಾಗಿ ಬೆಕ್ಕು ನಾಲಿಗೆಯಿಂದ ಬಾಯಿ ಸವರಿಕೊಳ್ಳುತ್ತಿದೆ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೋರ್ವರು, ಈ ಬೆಕ್ಕಿನ ಮರಿ ಎಷ್ಟು ಮುದ್ದಾಗಿದೆ ಎಂದು ಹೇಳಿದ್ದಾರೆ. ವಿಡಿಯೋವನ್ನು ಪೋಸ್ಟ್ ಮಾಡಿದ ಬಳಿಕ 38,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಇನ್ನು ಕೆಲವರು ತಮ್ಮ ಮನೆಯಲ್ಲಿ ಸಾಕಿದ ಬೆಕ್ಕಿನ ಮರಿ ನೆನಪಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
Viral Video: ಹಿಮಪಾತವನ್ನು ಕಂಡು ಬೆರಗಾದ ಬೆಕ್ಕುಗಳು; ಪುಟಾಣಿ ಮಾರ್ಜಾಲಗಳ ಮುಗ್ಧತೆಗೆ ಮಾರುಹೋದ ಜನರು