AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಾಕಿದ ನಾಯಿಯನ್ನು ರಕ್ಷಿಸಲು ದೈತ್ಯಾಕಾರದ ಕರಡಿಯನ್ನು ತಳ್ಳುತ್ತಿರುವ ಬಾಲಕಿ; ಆಘಾತಕಾರಿ ವಿಡಿಯೋ ವೈರಲ್​

ಕರಡಿಯನ್ನು ಕಂಪೌಂಡ್​ನಿಂದ ಆಚೆ ತಳ್ಳುವ ಮೂಲಕ ನನ್ನ ನಾಯಿ ಮರಿಗಳನ್ನು ಕರೆದುಕೊಂಡು ನಾನು ಮನೆಯೊಳಗೆ ಬಂದುಬಿಟ್ಟೆ. ಆದರೆ, ಈ ರೀತಿಯ ಘಟನೆ ನಡೆಯುವಾಗ ಎಚ್ಚರದಿಂದಿರಿ. ನಾನು ಮಾಡಿರುವ ತಪ್ಪನ್ನು ನೀವೂ ಮಾಡದಿರಿ. ಕರಡಿಯನ್ನು ತಳ್ಳುವ ದುಸ್ಸಾಹಸಕ್ಕೆ ಪ್ರಯತ್ನಿಸಬೇಡಿ ಎಂದು ಎಚ್ಚರಿಕೆ ಬಾಲಕಿಯು ನೀಡಿದ್ದಾರೆ.

Viral Video: ಸಾಕಿದ ನಾಯಿಯನ್ನು ರಕ್ಷಿಸಲು ದೈತ್ಯಾಕಾರದ ಕರಡಿಯನ್ನು ತಳ್ಳುತ್ತಿರುವ ಬಾಲಕಿ; ಆಘಾತಕಾರಿ ವಿಡಿಯೋ ವೈರಲ್​
TV9 Web
| Edited By: |

Updated on: Jun 02, 2021 | 1:50 PM

Share

ಕ್ಯಾಲಿಫೋರ್ನಿಯಾದ 17 ವರ್ಷದ ಬಾಲಕಿಯು ತಾನು ಸಾಕಿದ ನಾಯಿಯನ್ನು ರಕ್ಷಿಸುವ ಸಲುವಾಗಿ ಕರಡಿಯನ್ನು ಕಂಪೌಂಡ್​ನಿಂದ ಆಚೆಗೆ ತಳ್ಳುತ್ತಿರುವ ದೃಶ್ಯವನ್ನು ವಿಡಿಯೋ ತೋರಿಸುತ್ತದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿ ಮಾಡುತ್ತಿದೆ. ಕರಡಿಯನ್ನು ಮನೆಯ ಕಂಪೌಂಡ್​ನಿಂದ ಆಚೆ ತಳ್ಳುವ ಮೂಲಕ ನನ್ನ ನಾಯಿ ಮರಿಗಳನ್ನು ಕರೆದುಕೊಂಡು ನಾನು ಮನೆಯೊಳಗೆ ಬಂದುಬಿಟ್ಟೆ. ಆದರೆ, ಈ ರೀತಿಯ ಘಟನೆ ನಡೆಯುವಾಗ ಎಚ್ಚರದಿಂದಿರಿ ಎಂದು ಬಾಲಕಿ ಹೇಳಿದ್ದಾಳೆ.

ಬಾಲಕಿಯ ಮನೆಯ ಕಂಪೌಂಡ್ ಮೇಲೆ ಕರಡಿ ನಿಂತಿರುವ ದೃಶ್ಯವನ್ನು ನೋಡಬಹುದು. ಕರಡಿ ಕಾಣುತ್ತಿದ್ದಂತೆಯೇ ನಾಯಿ ಮರಿಗಳು ಬೊಗಳಲು ಪ್ರಾರಂಭಿಸುತ್ತವೆ. ಕರಡಿಯನ್ನು ಓಡಿಸಲು ಹತ್ತಿರ ಹೋಗುತ್ತಿದ್ದಂತೆಯೇ ನಾಯಿಯನ್ನು ಹಿಡಿಯಲು ಕರಡಿ ಮುಂದಾಗುತ್ತದೆ. ಈ ದೃಶ್ಯ ನೋಡುತ್ತಿದ್ದಂತೆಯೇ ಮನೆಯೊಳಗಿನಿಂದ ಓಡಿ ಬಂದ ಬಾಲಕಿ ಏನೂ ಮಾಡಬೇಕೆಂದು ತೋಚದೆ ಕರಡಿಯನ್ನು ಕಂಪೌಂಡ್​ನಿಂದ ಆಚೆಕೆ ನೂಕುತ್ತಾಳೆ ಮತ್ತು ತನ್ನ ನಾಯಿಮರಿಗಳನ್ನು ಎತ್ತಿಕೊಂಡು ಬೇಗ ಮನೆಯೊಳಕ್ಕೆ ಸೇರಿಕೊಳ್ಳುತ್ತಾಳೆ.

ಕೂದಲೆಳೆಯ ಅಂತರದಲ್ಲಿ ಬಾಲಕಿ ಮತ್ತು ನಾಯಿಮರಿಗಳು ಪಾರಾದ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ತುಣುಕನ್ನು ಟಿಕ್​ಟಾಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಟಿಕ್​ಟಾಕ್​ನಲ್ಲಿ ಪೋಸ್ಟ್​ ಮಾಡಿದ 6 ಗಂಟೆಯ ಬಳಿಕ ಸುಮಾರು 10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ.

ಕರಡಿಯನ್ನು ಕಂಪೌಂಡ್​ನಿಂದ ಆಚೆ ತಳ್ಳುವ ಮೂಲಕ ನನ್ನ ನಾಯಿ ಮರಿಗಳನ್ನು ಕರೆದುಕೊಂಡು ನಾನು ಮನೆಯೊಳಗೆ ಬಂದುಬಿಟ್ಟೆ. ಆದರೆ, ಈ ರೀತಿಯ ಘಟನೆ ನಡೆಯುವಾಗ ಎಚ್ಚರದಿಂದಿರಿ. ನಾನು ಮಾಡಿರುವ ತಪ್ಪನ್ನು ನೀವೂ ಮಾಡದಿರಿ. ಕರಡಿಯನ್ನು ತಳ್ಳುವ ದುಸ್ಸಾಹಸಕ್ಕೆ ಪ್ರಯತ್ನಿಸಬೇಡಿ ಎಂದು ಎಚ್ಚರಿಕೆ ಬಾಲಕಿಯು ನೀಡಿದ್ದಾರೆ.

ಇದನ್ನೂ ಓದಿ:

Pranitha Marriage: ನಟಿ ಪ್ರಣಿತಾ ಮದುವೆ ಫೋಟೋ ವೈರಲ್​; ಲಾಕ್​ಡೌನ್​ನಲ್ಲಿ ಗುಟ್ಟಾಗಿ ಹಸೆಮಣೆ ಏರಿದ ‘ಪೊರ್ಕಿ’ ಬೆಡಗಿ

ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್​ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್​

Follow Us
TV9 Web
TV9 Web

TV9 Kannada

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ