Viral Video: ಹಿಮಪಾತವನ್ನು ಕಂಡು ಬೆರಗಾದ ಬೆಕ್ಕುಗಳು; ಪುಟಾಣಿ ಮಾರ್ಜಾಲಗಳ ಮುಗ್ಧತೆಗೆ ಮಾರುಹೋದ ಜನರು

ಮನೆಯಿಂದಾಚೆ ಸುರಿಯುತ್ತಿದ್ದ ಹಿಮವನ್ನು ಬೆಕ್ಕುಗಳೆರಡು ಗಾಜಿನ ಬಾಗಿಲ ಹಿಂದೆ ಕುಳಿತು ಬೆರಗಿನಿಂದ ನೋಡುತ್ತಿರುವ ದೃಶ್ಯ ಎಲ್ಲರ ಮನಸೂರೆಗೊಂಡಿದೆ. ವಿಡಿಯೋಕ್ಕೆ ನೀಡಲಾದ ಕ್ಯಾಪ್ಷನ್​ನಲ್ಲಿ ತಿಳಿಸಿರುವಂತೆ ಕೋಮಾ ಮತ್ತು ಕೊಕೊಟಾ ಎಂಬ ಬೆಕ್ಕುಗಳು ಹಿಮಪಾತವನ್ನು ಅಚ್ಚರಿಯಿಂದ ನೋಡುತ್ತಿದ್ದು, ವಿಡಿಯೋ ವೈರಲ್​ ಆಗಿದೆ.

Viral Video: ಹಿಮಪಾತವನ್ನು ಕಂಡು ಬೆರಗಾದ ಬೆಕ್ಕುಗಳು; ಪುಟಾಣಿ ಮಾರ್ಜಾಲಗಳ ಮುಗ್ಧತೆಗೆ ಮಾರುಹೋದ ಜನರು
ವೈರಲ್​ ವಿಡಿಯೋದಲ್ಲಿರುವ ಬೆಕ್ಕುಗಳು
Follow us
Skanda
| Updated By: shruti hegde

Updated on: Apr 04, 2021 | 12:01 PM

ಬಾಲ್ಯವೆಂದರೆ ಹಾಗೆಯೇ ಆಗ ತಾನೇ ಲೋಕವನ್ನು ಬೆರಗುಗಣ್ಣುಗಳಿಂದ ನೋಡುವ ವಯಸ್ಸು. ಚಿಕ್ಕವರಿದ್ದಾಗ ನಮಗೆ ಪ್ರತಿಯೊಂದು ಸಂಗತಿಗಳೂ ಕುತೂಹಲ ಹುಟ್ಟುಹಾಕುತ್ತವೆ. ಕೆಲವೊಮ್ಮೆ ಆ ಕುತೂಹಲಗಳೇ ಹೊಸ ಪಾಠವನ್ನೂ ಕಲಿಸುತ್ತವೆ. ಮೊದಲ ಮಿಂಚು, ಗುಡುಗು, ಮಳೆ, ಪ್ರವಾಸ, ಮೊದಲ ಬಾರಿಗೆ ಕಂಡ ಕಡಲು, ಆಕಾಶದಲ್ಲಿ ಹಾರುತ್ತಾ ಹಕ್ಕಿಯಂತೆ ಕಂಡ ವಿಮಾನ.. ಹೀಗೆ ಅಚ್ಚರಿ ಹುಟ್ಟಿಸಿದ ಸಂಗತಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಅಂದಹಾಗೆ, ಈ ಕೌತುಕ ಮನುಷ್ಯರಿಗೆ ಮಾತ್ರ ಸೀಮಿತವೇನಲ್ಲ. ಸಕಲ ಪ್ರಾಣಿಗಳೂ ಈ ಅನುಭವದಲ್ಲಿ ಮಿಂದೇಳುತ್ತವೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮುದ್ದಾದ ವಿಡಿಯೋವೊಂದು ಇಷ್ಟೆಲ್ಲಾ ಮೆಲುಕು ಹಾಕಲು ಕಾರಣವಾಗಿದೆ. ಮನೆಯಿಂದಾಚೆ ಸುರಿಯುತ್ತಿದ್ದ ಹಿಮವನ್ನು ಬೆಕ್ಕುಗಳೆರಡು ಗಾಜಿನ ಬಾಗಿಲ ಹಿಂದೆ ಕುಳಿತು ಬೆರಗಿನಿಂದ ನೋಡುತ್ತಿರುವ ದೃಶ್ಯ ಎಲ್ಲರ ಮನಸೂರೆಗೊಂಡಿದೆ. ವಿಡಿಯೋಕ್ಕೆ ನೀಡಲಾದ ಕ್ಯಾಪ್ಷನ್​ನಲ್ಲಿ ತಿಳಿಸಿರುವಂತೆ ಕೋಮಾ ಮತ್ತು ಕೊಕೊಟಾ ಎಂಬ ಬೆಕ್ಕುಗಳು ಹಿಮಪಾತವನ್ನು ಅಚ್ಚರಿಯಿಂದ ನೋಡುತ್ತಿದ್ದು, ಅದರಲ್ಲಿ ಪುಟಾಣಿ ಬೆಕ್ಕಂತೂ ಚಿಕ್ಕ ಮಗುವಿನಿಂತೆಯೇ ಅತ್ತಿತ್ತ ತನ್ನ ಚೋಟು ಬೀಸುತ್ತಾ, ಹಿಂಗಾಲಿನಿಂದ ನಿಂತು ಆಚೆ ನೋಡುತ್ತಾ ಮನಸ್ಸು ಗೆಲ್ಲುತ್ತದೆ.

@Kosuke_maeda0103 ಎಂಬ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ಸ್ವತಃ ಇನ್​ಸ್ಟಾಗ್ರಾಂ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಕರನ್ನು ಸೆಳೆದುಕೊಂಡಿದೆ. ವಿಡಿಯೋ ನೋಡಿದ ಬಹುತೇಕರು ಬೆಕ್ಕುಗಳ ಮುಗ್ಧತೆಗೆ ಮಾರುಹೋಗಿದ್ದು, ಅವುಗಳ ಕುರಿತು ತಮ್ಮ ಪ್ರೀತಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ.

View this post on Instagram

A post shared by Instagram (@instagram)

ಇದನ್ನೂ ಓದಿ: Viral Video: ಚಾಲಾಕಿ ಹಕ್ಕಿಯ ನಾಟಕ ನೋಡಿ ಬೆಕ್ಕು ಮೂರ್ಖವಾಯ್ತು..; ಏಪ್ರಿಲ್​ ಫೂಲ್ ಡೇ ಸ್ಪೆಶಲ್ ವಿಡಿಯೋ ಇದು​ 

ಕೂಲರ್‌ನಿಂದ ತಂಪಾದ ನೀರು ಕುಡಿಯುತ್ತಿರುವ ಬೆಕ್ಕು! ವಿಡಿಯೋ ಸಿಕ್ಕಾಪಟ್ಟೆ ವೈರಲ್‌

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್