Viral Video: ಚಾಲಾಕಿ ಹಕ್ಕಿಯ ನಾಟಕ ನೋಡಿ ಬೆಕ್ಕು ಮೂರ್ಖವಾಯ್ತು..; ಏಪ್ರಿಲ್​ ಫೂಲ್ ಡೇ ಸ್ಪೆಶಲ್ ವಿಡಿಯೋ ಇದು​

ವಿಡಿಯೋ ನೋಡಲು ಪ್ರಾರಂಭಿಸಿದಾಗ ಬೆಕ್ಕಿಗೇನು, ನಿಮಗೂ ಗೊತ್ತಾಗುವುದಿಲ್ಲ ಆ ಹಕ್ಕಿ ಸತ್ತಿಲ್ಲ ಎಂದು. ಅಷ್ಟು ಚೆನ್ನಾಗಿ ಅದು ನಾಟಕವಾಡಿದ್ದು ವಿಡಿಯೋದಲ್ಲಿ ಕಾಣುತ್ತದೆ. ನೆಟ್ಟಿಗರಂತೂ ಬೆಕ್ಕನ್ನು ನೋಡಿ ಅಯ್ಯೋ ಪಾಪ ಎಂದಿದ್ದಾರೆ.

Viral Video: ಚಾಲಾಕಿ ಹಕ್ಕಿಯ ನಾಟಕ ನೋಡಿ ಬೆಕ್ಕು ಮೂರ್ಖವಾಯ್ತು..; ಏಪ್ರಿಲ್​ ಫೂಲ್ ಡೇ ಸ್ಪೆಶಲ್ ವಿಡಿಯೋ ಇದು​
ಬೆಕ್ಕು ಮತ್ತು ಹಕ್ಕಿ
Follow us
Lakshmi Hegde
|

Updated on: Apr 01, 2021 | 8:01 PM

ಇಂದು ಏಪ್ರಿಲ್​ 1.. ಮೂರ್ಖರ ದಿನ. ಇಷ್ಟೊತ್ತಿಗೆ ನೀವು ಯಾರನ್ನಾದರೂ ಮೂರ್ಖರನ್ನಾಗಿ ಮಾಡಿರುತ್ತೀರಿ, ಹಾಗೇ ಯಾರಾದರೂ ನಿಮ್ಮನ್ನು ಫೂಲ್​ ಮಾಡಿರಲೂಬಹುದು. ಆದರೆ ಇಲ್ಲೊಂದು ಹಕ್ಕಿ, ಬೆಕ್ಕಿಗೆ ಅದ್ಭುತವಾಗಿ ಏಪ್ರಿಲ್​ ಫೂಲ್ ಮಾಡಿದೆ. ಈ ವಿಡಿಯೋ ನೋಡಿದರೆ ನೀವು ನಿಜಕ್ಕೂ ಹೊಟ್ಟೆ ನೋವು ಬರುವಷ್ಟು ನಗುತ್ತೀರಿ.

ವಿಡಿಯೋ ಹಳೇಯದ್ದು. ಯಾವಾಗ, ಎಲ್ಲಿ ಚಿತ್ರೀಕರಿಸಿದ್ದು ಗೊತ್ತಿಲ್ಲ. ಆದರೆ ಇಂದು ಐಎಫ್​ಎಸ್​ ಅಧಿಕಾರಿ ಸುಶಾಂತಾ ನಂದ್​ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ. ಇಂದಿನ ಏಪ್ರಿಲ್​ ಫೂಲ್ ದಿನಕ್ಕೆ ಕರೆಕ್ಟ್​ ಆಗಿ ಹೊಂದಿಕೊಳ್ಳುತ್ತದೆ. ಒಂದು ಬೆಕ್ಕು ನೆಲದ ಮೇಲೆ ಮಲಗಿರುತ್ತದೆ. ಹಾಗೇ, ಹಕ್ಕಿಯೊಂದಿಗೆ ಆಟವಾಡುತ್ತಿರುತ್ತದೆ. ಆ ಹಕ್ಕಿ ಕೂಡ ಉಲ್ಟಾ ಆಗಿ ಬಿದ್ದಿದ್ದು, ಥೇಟ್​ ಸತ್ತಂತೆಯೇ ಗೋಚರಿಸುತ್ತದೆ. ಆದರೆ ಒಂದೇ ಕ್ಷಣ.. ಆ ಹಕ್ಕಿ ಪುರ್ರನೆ ಹಾರಿ ಹೋಗುತ್ತದೆ. ಬೆಕ್ಕೂ ಕೂಡ ಶಾಕ್ ಆಗುತ್ತದೆ. ಅದನ್ನು ಹಿಡಿಯಲು ಪ್ರಯತ್ನಿಸಿ, ಆಗದೆ ಸುಮ್ಮನೆ ಮಲಗುತ್ತದೆ.

ವಿಡಿಯೋ ನೋಡಲು ಪ್ರಾರಂಭಿಸಿದಾಗ ಬೆಕ್ಕಿಗೇನು, ನಿಮಗೂ ಗೊತ್ತಾಗುವುದಿಲ್ಲ ಆ ಹಕ್ಕಿ ಸತ್ತಿಲ್ಲ ಎಂದು. ಅಷ್ಟು ಚೆನ್ನಾಗಿ ಅದು ನಾಟಕವಾಡಿದ್ದು ವಿಡಿಯೋದಲ್ಲಿ ಕಾಣುತ್ತದೆ. ನೆಟ್ಟಿಗರಂತೂ ಬೆಕ್ಕನ್ನು ನೋಡಿ ಅಯ್ಯೋ ಪಾಪ ಎಂದಿದ್ದಾರೆ. ಹಾರುತ್ತಿರುವ ಹಕ್ಕಿಯನ್ನು ಹಿಡಿಯಲು ಯತ್ನಿಸಿದರೂ ಬೆಕ್ಕು ವಿಫಲವಾಗುವುದನ್ನು ನೋಡಿದ ಜನರು, ಹಕ್ಕಿ ಬೆಕ್ಕನ್ನು ಹೀಗೆ ಏಪ್ರಿಲ್ ಫೂಲ್ ಮಾಡುವುದಾ ಎಂದು ನಗುತ್ತ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಖುಷಿ ಯಾರಿಗೆ ಬೇಡ? ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಎಂಟ್ರಿಕೊಟ್ಟ ಸಿಗರೇಟ್ ಜಾಗೃತಿ​ ಜಾಹೀರಾತಿನ ಬಾಲನಟಿ

ಲಿಂಕ್ ಆಗದ ಆಧಾರ್​-ಪಾನ್ ಕಾರ್ಡ್​ಗಳು​; ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫನ್ನಿ ಪೋಸ್ಟ್​ಗಳು