Viral Video: ಸಮುದ್ರಕ್ಕೆ ಇಳಿಯಲು ಪ್ರಯತ್ನಿಸಿದ ಐವರು ಯುವಕರಿಗೆ ‘ಕೋಳಿ ನಡಿಗೆ’ ಶಿಕ್ಷೆ; ಇಂಥ ವಾಕ್​ ನೀವು ನೋಡಿರಲಿಕ್ಕಿಲ್ಲ !

ಮರಿನ್ ಡ್ರೈವ್​ ಠಾಣೆಯ ಹಿರಿಯ ಅಧಿಕಾರಿ ವಿಶ್ವನಾಥ್ ಕೋಲೇಕರ್​ ಅವರು ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಯುವಕರಿಗೆ ಮುರ್ಗಾ ವಾಕ್​ ಮಾಡಿಸಲು ಕಾರಣ ಅವರು ಮಾಸ್ಕ್​ ಧರಿಸಿಲ್ಲ ಎಂದಲ್ಲ. ಬದಲಿಗೆ ಕಾಲುದಾರಿ ಇರುವಲ್ಲಿ ಸಮುದ್ರಕ್ಕೆ ಇಳಿಯಲು ಪ್ರಯತ್ನಿಸಿದ್ದರು ಎಂದಿದ್ದಾರೆ.

Viral Video: ಸಮುದ್ರಕ್ಕೆ ಇಳಿಯಲು ಪ್ರಯತ್ನಿಸಿದ ಐವರು ಯುವಕರಿಗೆ ‘ಕೋಳಿ ನಡಿಗೆ’ ಶಿಕ್ಷೆ; ಇಂಥ ವಾಕ್​ ನೀವು ನೋಡಿರಲಿಕ್ಕಿಲ್ಲ !
ಕೋಳಿ ನಡಿಗೆ
Follow us
Lakshmi Hegde
|

Updated on: Mar 31, 2021 | 6:47 PM

ಮುಂಬೈ: ಕಳೆದ ಬಾರಿ ಲಾಕ್​ಡೌನ್​ ವೇಳೆ ನಿಯಮ ಉಲ್ಲಂಘನೆ ಮಾಡಿದವರಿಗೆ ಪೊಲೀಸರು ವಿಚಿತ್ರ ಶಿಕ್ಷೆಗಳನ್ನು ನೀಡಿದ್ದು ವರದಿಯಾಗಿತ್ತು. ಗೋಣಿಚೀಲದಲ್ಲಿ ಕಾಲು ಹಾಕಿಕೊಂಡು ಜಂಪ್​ ಮಾಡುತ್ತ ಓಡುವುದು, ಕಪ್ಪೆಯಂತೆ ಜಂಪ್ ಮಾಡುವ ಶಿಕ್ಷೆಯನ್ನೂ ನೀಡಿದ್ದರು. ಆದರೆ ಈ ಬಾರಿ ಮುಂಬೈ ಪೊಲೀಸರು 5 ಮಂದಿ ಯುವಕರಿಗೆ ವಿಭಿನ್ನವಾದ ಶಿಕ್ಷೆ ನೀಡಿದ್ದಾರೆ. ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಉದ್ಯಮಿ ಆನಂದ್ ಮಹೀಂದ್ರಾ ಅವರೂ ಕೂಡ ವಿಡಿಯೋವನ್ನು ತಮ್ಮ ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ದಕ್ಷಿಣ ಮುಂಬೈನ ಮರಿನ್​ ಡ್ರೈವ್​ನಲ್ಲಿ ಸೋಮವಾರ ಮಧ್ಯಾಹ್ನ ಐವರು ಯುವಕರು ಸಮುದ್ರಕ್ಕೆ ಇಳಿಯಲು ಪ್ರಯತ್ನಿಸುತ್ತಿದ್ದರು. ಅವರ್ಯಾರೂ ಮಾಸ್ಕ್​ ಧರಿಸಿರಲಿಲ್ಲ. ಕೊವಿಡ್​ 19 ನಿಯಮ ಉಲ್ಲಂಘಿಸಿದ ಈ ಐವರು ಯುವಕರನ್ನು ಅಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಗಮನಿಸಿದ್ದಾರೆ. ಕೂಡಲೇ ಅವರನ್ನು ತಡೆದ ಮುಂಬೈ ಪೊಲೀಸರು ಯುವಕರ ಬಳಿ ಮುರ್ಗಾ ವಾಕ್​ (ಚಿಕನ್​ ವಾಕ್-ಕೋಳಿ ನಡಿಗೆ​)ಮಾಡಿಸುವ ಮೂಲಕ ವಿಭಿನ್ನ ಶಿಕ್ಷೆ ನೀಡಿದ್ದಾರೆ. ಅದಾದ ಬಳಿಕ ಅವರಿಗೆ ಸುರಕ್ಷತಾ ಎಚ್ಚರಿಕೆಗಳನ್ನು ನೀಡಿ ಕಳುಹಿಸಿದ್ದಾರೆ.

ವಿಡಿಯೋ ತುಂಬ ವೈರಲ್ ಆದ ಬೆನ್ನಲ್ಲೇ ಇದಕ್ಕೆ ಮುಂಬೈ ಪೊಲೀಸರು ಕೂಡ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರ ಜಾರಿಗೊಳಿಸುವ ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಅದು ದಂಡನಾತ್ಮಕ ಶಿಕ್ಷೆಯಾಗಿರಬೇಕು. ಸದ್ಯ ವಿಡಿಯೋದಲ್ಲಿ ಕಂಡು ಬಂದ ದೃಶ್ಯದ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಖಂಡಿತ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮರಿನ್ ಡ್ರೈವ್​ ಠಾಣೆಯ ಹಿರಿಯ ಅಧಿಕಾರಿ ವಿಶ್ವನಾಥ್ ಕೋಲೇಕರ್​ ಅವರು ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಯುವಕರಿಗೆ ಮುರ್ಗಾ ವಾಕ್​ ಮಾಡಿಸಲು ಕಾರಣ ಅವರು ಮಾಸ್ಕ್​ ಧರಿಸಿಲ್ಲ ಎಂದಲ್ಲ. ಬದಲಿಗೆ ಕಾಲುದಾರಿ ಇರುವಲ್ಲಿ ಸಮುದ್ರಕ್ಕೆ ಇಳಿಯಲು ಪ್ರಯತ್ನಿಸಿದ್ದರು ಎಂದಿದ್ದಾರೆ. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ, ಯುವಕರು ಫೇಸ್​ಮಾಸ್ಕ್ ಧರಿಸದ ಕಾರಣಕ್ಕೇ ಪೊಲೀಸರು ಚಿಕನ್​ ವಾಕ್​​ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ಬಿಜೆಪಿ ದಾಳಿ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ವಿಪಕ್ಷ ನಾಯಕರಿಗೆ ಪತ್ರ ಬರೆದು ಕರೆ ನೀಡಿದ ಮಮತಾ ಬ್ಯಾನರ್ಜಿ

ಇಶ್ರಾತ್​ ಜಹಾನ್​ ಎನ್​ಕೌಂಟರ್​ ಕೇಸ್: ಮೂವರು ಪೊಲೀಸ್ ಅಧಿಕಾರಿಗಳನ್ನು ಬಿಡುಗಡೆ ಮಾಡಿದ ಸಿಬಿಐ ವಿಶೇಷ ನ್ಯಾಯಾಲಯ