ಇಶ್ರಾತ್​ ಜಹಾನ್​ ಎನ್​ಕೌಂಟರ್​ ಕೇಸ್: ಮೂವರು ಪೊಲೀಸ್ ಅಧಿಕಾರಿಗಳನ್ನು ಬಿಡುಗಡೆ ಮಾಡಿದ ಸಿಬಿಐ ವಿಶೇಷ ನ್ಯಾಯಾಲಯ

2004ರಲ್ಲಿ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾದ ಇಶ್ರಾತ್ ಜಹಾನ್ ಕೇಸ್​​ನಲ್ಲಿ ಆರೋಪಿಗಳೆನಿಸಿದ್ದ ಮೂವರು ಪೊಲೀಸ್​ ಅಧಿಕಾರಿಗಳಾದ ಜಿ.ಎಲ್​.ಸಿಂಘಾಲ್​, ತರುಣ್​ ಬಾರೋತ್​ ಮತ್ತು ಅನಾಜು ಚೌಧರಿ ಅವರನ್ನು ಇಂದು ಅಹ್ಮದಾಬಾದ್​ನ ಸಿಬಿಐ ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಿದೆ. ಅಂದು ನಡೆದಿದ್ದು ನಕಲಿ ಎನ್​ಕೌಂಟರ್​ ಎಂದು ಆರೋಪ ಬಂದು, ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು. ಮಾರ್ಚ್​ 30ರಂದು ಪೊಲೀಸ್ ಅಧಿಕಾರಿಗಳು ಸಲ್ಲಿಸಿದ್ದ ವಿಮೋಚನಾ ಪತ್ರಕ್ಕೆ ಇಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಆರ್​.ರಾವಲ್ ಅನುಮೋದಿಸಿದರು. 2004ರ ಜೂನ್​ 15ರಂದು ಮುಂಬೈನ ಮುಂಬ್ರಾ ನಿವಾಸಿ […]

ಇಶ್ರಾತ್​ ಜಹಾನ್​ ಎನ್​ಕೌಂಟರ್​ ಕೇಸ್: ಮೂವರು ಪೊಲೀಸ್ ಅಧಿಕಾರಿಗಳನ್ನು ಬಿಡುಗಡೆ ಮಾಡಿದ ಸಿಬಿಐ ವಿಶೇಷ ನ್ಯಾಯಾಲಯ
ಇಶ್ರಾತ್​ ಜಹಾನ್​
Follow us
Lakshmi Hegde
|

Updated on: Mar 31, 2021 | 5:19 PM

2004ರಲ್ಲಿ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾದ ಇಶ್ರಾತ್ ಜಹಾನ್ ಕೇಸ್​​ನಲ್ಲಿ ಆರೋಪಿಗಳೆನಿಸಿದ್ದ ಮೂವರು ಪೊಲೀಸ್​ ಅಧಿಕಾರಿಗಳಾದ ಜಿ.ಎಲ್​.ಸಿಂಘಾಲ್​, ತರುಣ್​ ಬಾರೋತ್​ ಮತ್ತು ಅನಾಜು ಚೌಧರಿ ಅವರನ್ನು ಇಂದು ಅಹ್ಮದಾಬಾದ್​ನ ಸಿಬಿಐ ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಿದೆ. ಅಂದು ನಡೆದಿದ್ದು ನಕಲಿ ಎನ್​ಕೌಂಟರ್​ ಎಂದು ಆರೋಪ ಬಂದು, ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು. ಮಾರ್ಚ್​ 30ರಂದು ಪೊಲೀಸ್ ಅಧಿಕಾರಿಗಳು ಸಲ್ಲಿಸಿದ್ದ ವಿಮೋಚನಾ ಪತ್ರಕ್ಕೆ ಇಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಆರ್​.ರಾವಲ್ ಅನುಮೋದಿಸಿದರು.

2004ರ ಜೂನ್​ 15ರಂದು ಮುಂಬೈನ ಮುಂಬ್ರಾ ನಿವಾಸಿ ಇಶ್ರಾತ್​ ಜಹಾನ್​ (19)ಳನ್ನು ಗುಜರಾತ್​ ಪೊಲೀಸರು ಹತ್ಯೆ ಮಾಡಿದ್ದರು. ಇವಳಷ್ಟೇ ಅಲ್ಲದೆ, ಜಾವೇದ್​ ಶೇಖ್​ ಅಲಿಯಾಸ್ ಪ್ರಾಣೇಶ್​ ಪಿಲ್ಲೈ, ಅಮ್ಜಾದಲಿ ಅಕ್ಬರಲಿ ರಾಣಾ, ಝೀಶಾನ್​ ಜೋಹಾರ್​ ಕೂಡ ಅಂದು ಇಶ್ರಾತ್ ಜತೆ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾಗಿದ್ದರು. ಈ ನಾಲ್ವರೂ ಉಗ್ರರಾಗಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿಯವರ (ಆಗಿನ್ನೂ ನರೇಂದ್ರ ಮೋದಿಯವರು ಗುಜರಾತ್​ನ ಮುಖ್ಯಮಂತ್ರಿ ಆಗಿದ್ದರು) ಹತ್ಯೆಗೆ ಯೋಜನೆ ರೂಪಿಸಿದ್ದರು. ಹಾಗಾಗಿ ಎನ್​ಕೌಂಟರ್ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದರು.

ಆದರೆ ಈ ಪ್ರಕರಣ ಪೊಲೀಸರ ಪಾಲಿಗೆ ಸಂಕಷ್ಟವನ್ನೇ ತಂದೊಡ್ಡಿತು. ಹೈಕೋರ್ಟ್​ ರಚನೆ ಮಾಡಿದ್ದ ವಿಶೇಷ ತನಿಖಾ ತಂಡ ಇದೊಂದು ನಕಲಿ ಎನ್​ಕೌಂಟರ್​ ಎಂದು ವರದಿ ಸಲ್ಲಿಸಿದ ಪರಿಣಾಮ ಸಿಬಿಐ ತನಿಖೆ ಕೈಗೆತ್ತಿಕೊಂಡು ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಅವರಲ್ಲಿ ಸಿಂಘಾಲ್​, ಬಾರೋಟ್​, ಚೌಧರಿ ಮತ್ತು ಜೆ.ಜಿ. ಪಾರ್ಮರ್​ ವಿಚಾರಣೆ ಸಿಬಿಐ ಕೋರ್ಟ್​ನಲ್ಲಿ ನಡೆಯುತ್ತಿತ್ತು. ಜೆ.ಜಿ.ಪಾರ್ಮರ್ ಈಗಾಗಲೇ ಮೃತಪಟ್ಟಿದ್ದು, ಉಳಿದ ಮೂವರನ್ನು ಕೋರ್ಟ್ ಬಿಡುಗಡೆ ಮಾಡಿದೆ. ಇನ್ನು ಈ ಮೂವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲು ಗುಜರಾತ್ ಸರ್ಕಾರ ನಿರಾಕರಿಸಿದೆ ಎಂದು ಸಿಬಿಐ ಮಾರ್ಚ್​ 20ರಂದು ಕೋರ್ಟ್​ಗೆ ಹೇಳಿತ್ತು.

ಇದನ್ನೂ ಓದಿ: Tamil Nadu Assembly Elections 2021: ಬಿಜೆಪಿ ಚುನಾವಣಾ ಪ್ರೊಮೊದಲ್ಲಿ ಕಾರ್ತಿ ಚಿದಂಬರಂ ಪತ್ನಿಯ ಭರತನಾಟ್ಯದ ವಿಡಿಯೊ

ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದ ಹಾವೇರಿ ಯುವಕ