ಲಿಂಕ್ ಆಗದ ಆಧಾರ್-ಪಾನ್ ಕಾರ್ಡ್ಗಳು; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫನ್ನಿ ಪೋಸ್ಟ್ಗಳು
ಮಾರ್ಚ್ 31ರೊಳಗೆ ನೀವು ಆಧಾರ್-ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಹೋದರೆ ಪಾನ್ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಹೀಗಾದಾಗ ಆದಾಯ ತೆರಿಗೆ ಸಲ್ಲಿಸುವ ವೇಳೆ 10 ಸಾವಿರ ರೂ.ವರೆಗೆ ದಂಡ ತುಂಬಬೇಕಾಗುತ್ತದೆ ಎಂದೂ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು.
ಆಧಾರ್ಕಾರ್ಡ್-ಪಾನ್ಕಾರ್ಡ್ ಲಿಂಕ್ ಮಾಡಿಕೊಳ್ಳಲು ಮಾರ್ಚ್ 31 ಕೊನೇ ದಿನ ಎಂದು ಹೇಳಿತ್ತು. ಈ ದಿನಾಂಕದ ಒಳಗೆ ಆಧಾರ್-ಪಾನ್ ಲಿಂಕ್ ಮಾಡಿಕೊಳ್ಳದೆ ಹೋದರೆ 1000 ರೂ.ದಂಡ ತುಂಬಬೇಕಾಗುತ್ತದೆ. ಅಲ್ಲದೆ, ಪಾನ್ಕಾರ್ಡ್ ನಿಷ್ಕ್ರಿಯಗೊಳಿಸಲಾಗುವುದು ಎಂದೂ ಹೇಳಿತ್ತು. ಆಧಾರ್-ಪಾನ್ ಲಿಂಕ್ನ್ನು ಆನ್ಲೈನ್ನಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾಗಿದ್ದರಿಂದ ನಿನ್ನೆ ಅನೇಕರು ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಇ ಫೈಲಿಂಗ್ ವೆಬ್ಸೈಟ್ಗೆ ಭೇಟಿ ಕೊಟ್ಟು, ಲಿಂಕ್ ಮಾಡಿಕೊಳ್ಳಲು ಪ್ರಯತ್ನಿಸದ ಪರಿಣಾಮ ಹಲವು ಟೆಕ್ನಿಕಲ್ ಸಮಸ್ಯೆಗಳು ಕಾಣಿಸಿಕೊಂಡವು.
ಇಷ್ಟು ದಿನ ಟೈಂ ಕೊಟ್ಟರೂ ಇನ್ನೂ ಅನೇಕರ ಪಾನ್-ಆಧಾರ್ ಕಾರ್ಡ್ಗಳು ಲಿಂಕ್ ಆಗದ ಕಾರಣ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಮತ್ತೆ ಅವಧಿಯನ್ನು ವಿಸ್ತರಿಸಿದೆ. ಜೂನ್ 30ರವರೆಗೆ ಟೈಂ ಕೊಟ್ಟಿದೆ. ಅವಧಿ ವಿಸ್ತರಣೆ ಬಗ್ಗೆ ಇಂದು ಘೋಷಿಸಲಾಗಿದ್ದು, ಅದಕ್ಕೂ ಮೊದಲು ನಿನ್ನೆ ಅನೇಕರು ಪರದಾಡಿದ್ದಾರೆ. ಕೆಲವರಿಗೆ ವೆಬ್ಸೈಟ್ ಓಪನ್ ಆಗಿಲ್ಲ.. ಇನ್ನೂ ಅನೇಕರಿಗೆ ಆಧಾರ್ ಲಿಂಕ್ ಎಂಬ ಪೇಜ್ ತೆರೆದುಕೊಂಡಿಲ್ಲ. ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಂಡವು. ಒಂದೆಡೆ ಕೊನೇ ದಿನ ಎಂಬ ಟೆನ್ಷನ್ ಬೇರೆ, ಇನ್ನೊಂದೆಡೆ ಪೇಜ್ ಓಪನ್ ಆಗುತ್ತಿಲ್ಲ ಎಂಬ ಆತಂಕ ಬೇರೆ.. ಒಟ್ಟಾರೆ ತುಂಬ ಜನರು ಕಂಗಾಲಾಗಿದ್ದರು. ಈ ಸಂದರ್ಭವನ್ನು ವಿವರಿಸುವ ಅನೇಕ ಮೀಮ್ಸ್ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.
ಮಾರ್ಚ್ 31ರೊಳಗೆ ನೀವು ಆಧಾರ್-ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಹೋದರೆ ಪಾನ್ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಹೀಗಾದಾಗ ಆದಾಯ ತೆರಿಗೆ ಸಲ್ಲಿಸುವ ವೇಳೆ 10 ಸಾವಿರ ರೂ.ವರೆಗೆ ದಂಡ ತುಂಬಬೇಕಾಗುತ್ತದೆ ಎಂದೂ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು. ಅದೆಷ್ಟೋ ಜನ ಅವಸರವಸರವಾಗಿ ಲಿಂಕ್ ಮಾಡಿಸಿಕೊಂಡಿದ್ದರೂ, ಇನ್ನೂ ಅನೇಕರದ್ದು ಬಾಕಿ ಇದೆ. ಈ ಮಧ್ಯೆ ಕೆಲವು ಮೀಮ್ಸ್ಗಳು ಗಮನಸೆಳೆಯುತ್ತಿವೆ.
suddenly everyone wakes up on 31st and wants to link PAN and Aadhar at first try. #PANcard pic.twitter.com/LoOTdNf6UB
— Navigator (@Navigator404) March 31, 2021
Trying to link my PAN with Aadhaar on IT portal: #PANAadhaar #PANcard #Aadhaar #PANcard #Aadhaar #deadline pic.twitter.com/GoA4hzbQoB
— Andy (@iamandy1987) March 31, 2021
When website is not working. Indian ppl rightnow pic.twitter.com/O8vdBmg0Mu
— Failure Diaries (@tweetfortymefas) March 31, 2021
After successfully linking #PANcard to #Aadhar even when website is down … pic.twitter.com/5Q3CXaJMHA
— Rahul (@Rahulismm) March 31, 2021
Income tax site right now #PANcard #IncomeTax #aadhaarpanlink pic.twitter.com/6ip26TvG3Q
— A (@Aakashehe) March 31, 2021
People running to Cyber Cafes to link #Aadhaar with #PANcard as today is last date. ? pic.twitter.com/Y9VIQslSRJ
— Simar (@toxic_simar) March 31, 2021
1. People who were worried about PAN-Aadhar deadline. 2. Me who knew it would be postponed again. #PANcard pic.twitter.com/xLizCs09Ig
— ಪ್ರಣವ್? (@pranavprasad97) March 31, 2021
ಇದನ್ನೂ ಓದಿ: ಮಾಧ್ಯಮಗಳ ಕಣ್ತಪ್ಪಿಸುವ ತಂತ್ರ: 3 ಯುವತಿಯರನ್ನು 3 ಪ್ರತ್ಯೇಕ ಕಾರುಗಳಲ್ಲಿ ಕರೆದೊಯ್ದು ಎಸ್ಐಟಿಯಿಂದ ತನಿಖೆ!
ನಿನ್ನ ಗರ್ಲ್ಫ್ರೆಂಡ್ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟು ಬಂತಾ?; ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಶಾಂತ್ ಸಂಬರಗಿ
Published On - 7:22 pm, Thu, 1 April 21