Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಮಾದವೋ ಅಥವಾ ಜ್ಞಾನೋದಯವೋ: ನಿರ್ಮಲಾ ಸೀತಾರಾಮನ್​ಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ನಿರ್ಮಲಾ ಸೀತಾರಾಮನ್ ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತ ಮಾಡುವ ಆದೇಶ ಹೊರಡಿಸುವಾಗ ಪ್ರಮಾದವಾಯಿತೇ? ಅಥವಾ ಚುನಾವಣೆಯ ಹೊತ್ತಿನಲ್ಲುಂಟಾದ  ಜ್ಞಾನೋದಯದಿಂದ ಹಿಂಪಡೆಯಲಾಯಿತೇ? ಎಂದು ಪ್ರಶ್ನಿಸಿದ್ದಾರೆ.

ಪ್ರಮಾದವೋ ಅಥವಾ ಜ್ಞಾನೋದಯವೋ: ನಿರ್ಮಲಾ ಸೀತಾರಾಮನ್​ಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ
ಪ್ರಿಯಾಂಕಾ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Apr 01, 2021 | 6:05 PM

ದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ ಎಂದು ಟ್ವೀಟ್ ಮಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆ ಆದೇಶ ಪ್ರಮಾದದಿಂದ ಆಗಿದ್ದು ಎಂದಿದ್ದರು. ನಿರ್ಮಲಾ ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತ ಮಾಡುವ ಆದೇಶ ಹೊರಡಿಸುವಾಗ ಪ್ರಮಾದವಾಯಿತೇ? ಅಥವಾ ಚುನಾವಣೆಯ ಹೊತ್ತಿನಲ್ಲುಂಟಾದ  ಜ್ಞಾನೋದಯದಿಂದ ಹಿಂಪಡೆಯಲಾಯಿತೇ? ಎಂದು ಪ್ರಶ್ನಿಸಿದ್ದಾರೆ.

ನಿರ್ಮಲಾ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ರಣ್​ದೀಪ್ ಸುರ್ಜೇವಾಲ ಇದೇನು ಸರ್ಕಾರವನ್ನು ನಡೆಸುತ್ತಿದ್ದೀರಾ ಅಥವಾ ಸರ್ಕಸ್ ಎಂದು ಕೇಳಿದ್ದಾರೆ. ವಿತ್ತ ಸಚಿವೆಯಾಗಿ ಮುಂದುವರಿಯಲು ನಿರ್ಮಲಾ ಸೀತಾರಾಮನ್ ಅವರಿಗೆ ನೈತಿಕ ಹಕ್ಕು ಇಲ್ಲ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ನಿರ್ಮಲಾ ಸೀತಾರಾಮನ್ ಅವರ ಈ ಸಮರ್ಥನೆ ಅಸಮರ್ಪಕವಾದುದು ಎಂದು ಕಾಂಗ್ರೆಸ್ ನಾಯಕ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ತ್ರೈಮಾಸಿಕದಲ್ಲಿ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳ ಪ್ರಕಟಣೆ ನಿಯಮಿತ ಪ್ರಕ್ರಿಯೆಯಾಗಿದೆ. ಮಾರ್ಚ್ 31ರಂದು ಪ್ರಕಟವಾದದ್ದು ಕಣ್ತಪ್ಪಿನಿಂದ ಆದದ್ದು ಏನೂ ಅಲ್ಲ. ಬಡ್ಡಿದರಗಳನ್ನು ಕಡಿತಗೊಳಿಸಿ ಮತ್ತು ಸ್ವತಃ ಲಾಭ ಗಳಿಸುವ ಮೂಲಕ ಮಧ್ಯಮ ವರ್ಗದ ಮೇಲೆ ಮತ್ತೊಂದು ಪ್ರಹಾರ ನಡೆಸಲು ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಅದು ಗೊತ್ತಾದಾಗ ವಿತ್ತ ಸಚಿವರು ಪ್ರಮಾದ ಎಂಬ ಕುಂಟು ನೆಪವನ್ನು ಮುಂದಿಡುತ್ತಿದ್ದಾರೆ. ಹಣದುಬ್ಬರವು ಶೇಕಡಾ 6 ರಷ್ಟಿದ್ದು ಏರಿಕೆಯಾಗುವ ನಿರೀಕ್ಷೆಯಿರುವಾಗ, ಬಿಜೆಪಿ ಸರ್ಕಾರವು ಶೇಕಡಾ 6 ಕ್ಕಿಂತ ಕಡಿಮೆ ಬಡ್ಡಿದರಗಳನ್ನು ಉಳಿತಾಯ ಮಾಡುವವರಿಗೆ ಮತ್ತು ಮಧ್ಯಮ ವರ್ಗದವರಿಗೆ ನೀಡುತ್ತಿದೆ ಎಂದು ಚಿದಂಬರಂ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಕೂಡಾ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಏಪ್ರಿಲ್ ಫೂಲ್ ಎಂದು ಡೆರಿಕ್ ಓ ಬ್ರೇನ್ ಮತ್ತು ಮಹುವಾ ಮೊಯಿತ್ರಾ ಹೇಳಿದ್ದಾರೆ. ಬಿಜೆಪಿ ತೊರೆದು ಇತ್ತೀಚೆಗೆ ಟಿಎಂಸಿ ಸೇರಿದ್ದ ಯಶ್ವಂತ್ ಸಿನ್ಹಾ ರೋಲ್ ಬ್ಯಾಕ್ ಮೋದಿ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರ ಕಡಿತ ಆದೇಶ ಹಿಂಪಡೆದ ಸರ್ಕಾರ: ಪ್ರಮಾದವಾಗಿದೆ ಎಂದ ನಿರ್ಮಲಾ ಸೀತಾರಾಮನ್ 

(withdrawal of cut in small saving rate Priyanka Gandhi reply to Finance Minister Nirmala Sitharaman )

Published On - 6:02 pm, Thu, 1 April 21