Tax Saving: ತೆರಿಗೆ ಉಳಿತಾಯದ 10 ಉತ್ತಮ ಯೋಜನೆಗಳು ಇಲ್ಲಿವೆ

ಆದಾಯದ ಮೇಲಿನ ತೆರಿಗೆ ಉಳಿತಾಯಕ್ಕೆ ನಾನಾ ಆಯ್ಕೆಗಳಿವೆ. ಆದರೆ ಅದರಲ್ಲೂ ಉತ್ತಮವಾದದ್ದನ್ನೇ ಆರಿಸಿಕೊಳ್ಳಬೇಕಲ್ಲವೇ? ಆದ್ದರಿಂದಲೇ ಇಲ್ಲಿ 10 ಆಯ್ಕೆಗಳು ನಿಮ್ಮ ಎದುರಿಗೆ ಇವೆ.

Tax Saving: ತೆರಿಗೆ ಉಳಿತಾಯದ 10 ಉತ್ತಮ ಯೋಜನೆಗಳು ಇಲ್ಲಿವೆ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Mar 19, 2021 | 6:10 PM

ತೆರಿಗೆ ಉಳಿತಾಯ ಮಾಡುವುದು ಬಹಳ ಬುದ್ಧಿವಂತಿಕೆಯ ಹಾಗೂ ಸವಾಲಿನ ಜವಾಬ್ದಾರಿ. ತೆರಿಗೆ ಉಳಿಸಲು ಮಾಡುವ ಉಳಿತಾಯವನ್ನು ಎಲ್ಲಿ ಹಾಕಿದಲ್ಲಿ ಉತ್ತಮ ರಿಟರ್ನ್ಸ್ ಬರುತ್ತದೆ ಹಾಗೂ ರಿಸ್ಕ್ ಕಡಿಮೆ ಇರುತ್ತದೆ ಎಂದು ಹುಡುಕುತ್ತಾರೆ. ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್​ಗಳು ಈಗಾಗಲೇ ಉತ್ತಮ ರಿಟರ್ನ್ಸ್ ನೀಡಿಯಾಗಿದೆ. ಇನ್ನು ಈಗ ನಿಫ್ಟಿ ಇರುವ ಹಂತದಲ್ಲಿ ಭವಿಷ್ಯದ ಬಗ್ಗೆ ಹೆಚ್ಚು ಆಸೆ ಇಟ್ಟುಕೊಳ್ಳುವುದಕ್ಕಾಗಲ್ಲ. ಎನ್​ಪಿಎಸ್​ಗೆ ಎಕ್ಸ್​ಕ್ಲೂಸಿವ್ ಆದ ತೆರಿಗೆ ಅನುಕೂಲಗಳಿವೆ. ಆದರೆ ಅದರ ಲಾಕ್- ಇನ್ ಅವಧಿ ನಿವೃತ್ತಿ ತನಕ ವಿಸ್ತರಿಸುತ್ತದೆ. ಪಿಪಿಎಫ್ ಸುರಕ್ಷಿತ ಹೂಡಿಕೆ ಅನ್ನೋದರಲ್ಲಿ ಅನುಮಾನವಿಲ್ಲ. ಆದರೆ ಅದರ ಲಾಕ್ ಇನ್ ಅವಧಿ ಕೂಡ ಜಾಸ್ತಿಯೇ. ತೆರಿಗೆ ಉಳಿತಾಯ ಫಿಕ್ಸೆಡ್ ಡೆಪಾಸಿಟ್​ಗಳು ಮತ್ತು ಎನ್​ಎಸ್​ಸಿಗಳಿಗೆ ಕಡಿಮೆ ಲಾಕ್​ ಇನ್ ಅವಧಿ ಇದ್ದರೂ ಬಡ್ಡಿಯ ಮೇಲೆ ತೆರಿಗೆ ಅಂದರೆ, ತೆರಿಗೆ ನಂತರದ ರಿಟರ್ನ್ಸ್ ಬಹಳ ಕಡಿಮೆ. ULIPನಿಂದ ಶುಲ್ಕ ಕಡಿಮೆ ಮಾಡಿದ್ದು, ತೆರಿಗೆರಹಿತ ಆದಾಯ ಒದಗಿಸುತ್ತದೆ. ಆದರೆ ನೀವು ಒಂದೇ ಇನ್ಷೂರೆನ್ಸ್ ಕಂಪೆನಿ ಜತೆಗೆ ಸಂಪೂರ್ಣ ಅವಧಿಗೆ ಇರಬೇಕಾಗುತ್ತದೆ.

ಈ ಲೇಖನದಲ್ಲಿ ಹತ್ತು ತೆರಿಗೆ ಉಳಿತಾಯ ಯೋಜನೆಗಳ ಬಗ್ಗೆ ಮೌಲ್ಯಮಾಪನ ಮಾಡಿ, ವಿವರಣೆ ನೀಡಲಾಗಿದೆ. ರಿಟರ್ನ್ಸ್, ಸುರಕ್ಷತೆ, ಹೊಂದಾಣಿಕೆ, ನಗದೀಕರಣ, ವೆಚ್ಚ, ಪಾರದರ್ಶಕತೆ, ಹೂಡಿಕೆಗೆ ಸುಲಭ ಮತ್ತು ಆದಾಯದ ಮೇಲೆ ತೆರಿಗೆ ಇಂಥವೆಲ್ಲ ಗಮನಿಸಿ, ಆ ನಂತರ ಮಾಹಿತಿ ನೀಡಲಾಗಿದೆ. ನೀವೂ ಹೂಡಿಕೆಗೆ ಮುನ್ನ ಇದು ನಿಮಗೆ ಸೂಕ್ತವೇ ಹಾಗೂ ಅಗತ್ಯಕ್ಕೆ ತಕ್ಕಂತೆ ಇದೆಯೇ ಎಂಬುದನ್ನು ಪರಾಂಬರಿಸಿದ ನಂತರವೇ ನಿರ್ಧಾರ ಕೈಗೊಳ್ಳಿ. ಇನ್ನೇಕೆ ತಡ, ಆಯ್ಕೆಗಳ ಕಡೆಗೆ ಒಮ್ಮೆ ನೋಡೋಣ.

1. ಇಎಲ್​ಎಸ್​ಎಸ್​ (ELSS): ಇದು ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್. ಹೆಚ್ಚಿನ ರಿಟರ್ನ್ಸ್ ನೀಡುವ ಸಾಮರ್ಥ್ಯ ಇದಕ್ಕಿದೆ. ಹೂಡಿಕೆ ಕೂಡ ಆರಾಮವಾಗಿ ಮಾಡಬಹುದು. ಆದರೆ ಈಗಾಗಲೇ ಷೇರು ಮಾರುಕಟ್ಟೆ ಎತ್ತರದಲ್ಲಿ ಇರುವುದರಿಂದ ಚಿಂತೆಗೆ ಕಾರಣವಾಗಿದೆ. 2. ನ್ಯಾಷನಲ್ ಪೆನ್ಷನ್ ಸ್ಕೀಮ್ (ಎನ್​ಪಿಎಸ್): ಇದು ಪಿಂಚಣಿ ಯೋಜನೆ. ಹೆಚ್ಚುವರಿಯಾದ ತೆರಿಗೆ ಅನುಕೂಲವನ್ನು ಒದಗಿಸುತ್ತದೆ. ಬೇರೆಯದಕ್ಕೆ ಬದಲಿಸಿಕೊಳ್ಳುವುದು ಕೂಡ ಸಲೀಸಲು. ಆದರೆ ಕೆಲವು ಹೂಡಿಕೆದಾರರಿಗೆ ನಗದೀಕರಣದ ಸಮಸ್ಯೆ. 3. ಯೂನಿಟ್ ಲಿಂಕ್ಡ್ ಇನ್ವೆಸ್ಟ್​ಮೆಂಟ್ ಪ್ಲಾನ್ ಸ್ಕೀಮ್ (ULIPS): ಇದರಲ್ಲಿ ಬಹಳ ಸುಧಾರಣೆ ಆಗಿದೆ. ಕಡಿಮೆ ವೆಚ್ಚದಲ್ಲಿ ದೊರೆಯುತ್ತದೆ. ತೆರಿಗೆ ಮುಕ್ತ ರಿಟರ್ನ್ಸ್ ಮತ್ತು ಬದಲಿಸಿಕೊಳ್ಳುವುದು ಸಹ ಸಲೀಸಾಗಿದೆ. 4. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಇದರ ರಿಟರ್ನ್ಸ್ ತೆರಿಗೆಮುಕ್ತ ಆಗಿದೆ. ಆದರೆ ನಿಧಾನವಾಗಿ ಬಡ್ಡಿ ದರ ಕಡಿಮೆ ಆಗುತ್ತಿದೆ. ಬದಲಾಗುವ ಬಡ್ಡಿ ದರ ಇನ್ನಷ್ಟು ಕಡಿಮೆ ಆಗಬಹುದು. 5. ಹಿರಿಯ ನಾಗರಿಕರ ಉಳಿತಾಯ ಯೋಜನೆ: ಇದು ನಿವೃತ್ತರಿಗೆ ಅತ್ಯುತ್ತಮವಾದ ಆಯ್ಕೆ. ಗೌರವಯುತವಾದ ಮತ್ತು ನಿಯಮಿತವಾದ ಆದಾಯ ನೀಡುತ್ತದೆ. ಆದರೆ ಇದರ ವ್ಯಾಪ್ತಿ ಸೀಮಿತ. 6. ಸುಕನ್ಯಾ ಯೋಜನೆ: ಪಿಪಿಎಫ್​ಗಿಂತ ಉತ್ತಮ ಬಡ್ಡಿ ದರ ಇದಕ್ಕೆ ದೊರೆಯುತ್ತದೆ. ಅದೇ ರೀತಿಯ ತೆರಿಗೆ ಲೆಕ್ಕಾಚಾರವೂ ಹೌದು. ಆದರೆ ಸೀಮಿತ ವ್ಯಾಪ್ತಿ ಹಾಗೂ ಕೆಲವು ನಿರ್ಬಂಧಗಳಿವೆ. 7. ಪೆನ್ಷನ್ ಪ್ಲಾನ್​ಗಳು: ನಿವೃತ್ತಿಗೆ ಉಳಿತಾಯ ಮಾಡುವುದಕ್ಕೆ ಇದು ಉತ್ತಮ ಆಯ್ಕೆ. ಆದರೆ ಈ ಯೋಜನೆಗಳು ವೆಚ್ಚ ಮತ್ತು ತೆರಿಗೆ ಅನುಕೂಲಗಳಲ್ಲಿ ಎನ್​ಪಿಎಸ್​ಗೆ ಸಮವಲ್ಲ 8. ರಾಷ್ಟ್ರೀಯ ಉಳಿತಾಯ ಪತ್ರ (NSC): ನಿರಂತರವಾಗಿ ಸರ್ಕಾರದ ಬಾಂಡ್​ಗಳ ಯೀಲ್ಡ್​ನಲ್ಲಿ ಇಳಿಕೆ ಆಗಿದ್ದರಿಂದ ಬಡ್ಡಿ ದರ ಮತ್ತು ಇದಕ್ಕಿರುವ ಆದ್ಯತೆಯಲ್ಲಿ ಕಡಿಮೆ ಆಗಿದೆ. ಆದರೆ ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆ ಇದು. 9. ತೆರಿಗೆ ಉಳಿತಾಯ ನಿಶ್ಚಿತ ಠೇವಣಿ (ಟ್ಯಾಕ್ಸ್ ಸೇವಿಂಗ್ ಎಫ್.ಡಿ.): ಇದು ಬಹಳ ಕಡಿಮೆ ರಿಟರ್ನ್ಸ್ ನೀಡುತ್ತದೆ. ಆದಾಯಕ್ಕೆ ಪೂರ್ಣವಾಗಿ ತೆರಿಗೆ ಬೀಳುತ್ತದೆ. ನಿಮಗೆ ಸಮಯ ಇಲ್ಲ ಎಂದಾದಲ್ಲಿ ತೆರಿಗೆ ಉಳಿತಾಯಕ್ಕೆ ಅತಿ ಸುಲಭ ಮಾರ್ಗ. 10. ಜೀವ ವಿಮಾ ಪಾಲಿಸಿ: ಜೀವ ವಿಮಾ ಪಾಲಿಸಿಯ ಉದ್ದೇಶ ಸುರಕ್ಷತೆಯೇ ಹೊರತು ತೆರಿಗೆ ಉಳಿತಾಯ ಮಾಡುವುದಲ್ಲ. ತೆರಿಗೆ ಉಳಿತಾಯ ಎಂಬುದು ಹೆಚ್ಚುವರಿ ವೈಶಿಷ್ಟ್ಯವೇ ವಿನಾ ಮುಖ್ಯ ಅನುಕೂಲವಲ್ಲ.

ಇದನ್ನೂ ಓದಿ: SBI Annuity Scheme: ಎಸ್​ಬಿಐ ಆನ್ಯುಯುಟಿ ಸ್ಕೀಮ್ ಬಗ್ಗೆ ಕೇಳಿದ್ದೀರಾ?

ಇದನ್ನೂ ಓದಿ: PMJJBY Explainer: ಏನಿದು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್