TCS employees salary hike: FY22ಕ್ಕೆ ಉದ್ಯೋಗಿಗಳ ವೇತನ ಹೆಚ್ಚಳ ಘೋಷಿಸಿದ ಮೊದಲ ಕಂಪೆನಿ ಟಿಸಿಎಸ್

FY22ಕ್ಕೆ ಉದ್ಯೋಗಿಗಳಿಗೆ ವೇತನ ಹೆಚ್ಚಳ ಘೋಷಿಸಿದ ಮೊದಲ ಕಂಪೆನಿ ಎಂಬ ಶ್ರೇಯ ಈಗ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ಗೆ ದಕ್ಕಿದೆ. ಆರು ತಿಂಗಳು ಎರಡನೇ ಬಾರಿಗೆ ಉದ್ಯೋಗಿಗಳಿಗೆ ವೇತನ ಹೆಚ್ಚಳ ಘೋಷಿಸಿದೆ.

TCS employees salary hike: FY22ಕ್ಕೆ ಉದ್ಯೋಗಿಗಳ ವೇತನ ಹೆಚ್ಚಳ ಘೋಷಿಸಿದ ಮೊದಲ ಕಂಪೆನಿ ಟಿಸಿಎಸ್
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Mar 19, 2021 | 7:01 PM

ಭಾರತದ ಅತಿ ದೊಡ್ಡ ಸಾಫ್ಟ್​ವೇರ್ ಸೇವಾ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​​ನಿಂದ ಶುಕ್ರವಾರ (ಮಾರ್ಚ್ 19, 2021) ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ಘೋಷಣೆ ಮಾಡಲಾಗಿದೆ. ಏಪ್ರಿಲ್ 1ನೇ ತಾರೀಕಿನಿಂದ ವೇತನ ಹೆಚ್ಚಳ ಜಾರಿಗೆ ಬರಲಿದೆ. ಈ ಬಗ್ಗೆ ಮಿಂಟ್ ವರದಿ ಮಾಡಿದ್ದು, ಈ ಕುರಿತು ಟಿಸಿಎಸ್ ವಕ್ತಾರರನ್ನು ಮಾತನಾಡಿಸಿದೆ. 2021ರ ಏಪ್ರಿಲ್​​ನಿಂದ ಎಲ್ಲ ಕಡೆಯಲ್ಲಿ ಈ ವೇತನದ ಹೆಚ್ಚಳವನ್ನು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಮುಂಬೈ ಮೂಲದ ಈ ಐ.ಟಿ. ಕಂಪೆನಿಯಲ್ಲಿ 4 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಾರೆ. ಈ ನಿರ್ಧಾರದಿಂದ ಅವರಿಗೆಲ್ಲ ಅನುಕೂಲ ಆಗಲಿದೆ. FY22ಕ್ಕೆ ವೇತನ ಹೆಚ್ಚಳವನ್ನು ಘೋಷಿಸಿದ ಮೊದಲ ಐ.ಟಿ. ಕಂಪೆನಿ ಟಿಸಿಎಸ್. ಆರು ತಿಂಗಳಲ್ಲಿ ಇದು ಎರಡನೇ ಬಾರಿಗೆ ಟಿಸಿಎಸ್ ವೇತನ ಹೆಚ್ಚಳ ಮಾಡುತ್ತಿದೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಸಂಬಳ ಹೆಚ್ಚಳ ಘೋಷಣೆ ಮಾಡಿತ್ತು.

ಮೂಲಗಳು ತಿಳಿಸಿರುವ ಪ್ರಕಾರ, ಕೋವಿಡ್ 19 ಬಿಕ್ಕಟ್ಟಿನ ಮಧ್ಯೆಯೂ FY21ರಲ್ಲಿ ಐಟಿ ವಲಯದ ನಿಯಮಾವಳಿಯಂತೆಯೇ ಸಂಬಳ ಹೆಚ್ಚು ಮಾಡಿತ್ತು. ಇನ್ನು ಮಾಮೂಲಿಯಾದ ಬಡ್ತಿ ಕ್ರಮದಂತೆ ಅದನ್ನು ಸಹ ಮುಂದುವರಿಸಿಕೊಂಡು ಹೋಗಲಿದೆ. FY22ಕ್ಕೆ ಟಿಸಿಎಸ್ ಉದ್ಯೋಗಿಗಳಿಗೆ ಸರಾಸರಿ ಶೇಕಡಾ 12ರಿಂದ 14ರಷ್ಟು ಹೆಚ್ಚಳ ಆರು ತಿಂಗಳ ಅವಧಿಯಲ್ಲಿ ದೊರೆಯಲಿದೆ.

ಡಿಸೆಂಬರ್ 31, 2020ಕ್ಕೆ ಕೊನೆಯಾದ ತ್ರೈಮಾಸಿಕದಲ್ಲಿ ಟಿಸಿಎಸ್ ಶೇಕಡಾ 7ರಷ್ಟು ಹೆಚ್ಚಿಗೆ ನಿವ್ವಳ ಲಾಭ ಪಡೆದು, 8701 ಕೋಟಿ ರೂಪಾಯಿಯನ್ನು ದಾಖಲಿಸಿದೆ. ಕೋವಿಡ್- 19 ಬಿಕ್ಕಟ್ಟಿನ ಸಂದರ್ಭದಲ್ಲಿ ಟಿಸಿಎಸ್ ಕಂಪೆನಿಯ ಕ್ಲೌಡ್ ಸೇವೆಗೆ ಹೆಚ್ಚಿನ ಬೇಡಿಕೆ ಬಂದು, ಅದರಿಂದ ಅನುಕೂಲ ಆಗಿದೆ. ಕಳೆದ ಒಂಬತ್ತು ವರ್ಷದಲ್ಲೇ ಡಿಸೆಂಬರ್ ತ್ರೈಮಾಸಿಕದಲ್ಲಿ ಟಿಸಿಎಸ್ ದಾಖಲಿಸಿದ ಅತ್ಯುತ್ತಮ ಫಲಿತಾಂಶ ಇದು ಎಂದು ಹೇಳಿಕೊಳ್ಳಲಾಗಿದೆ. ಟಿಸಿಎಸ್ ಕಂಪೆನಿ ಷೇರಿನ ಬೆಲೆ ಶುಕ್ರವಾರದ ಕೊನೆಗೆ ಎನ್​ಎಸ್​ಇಯಲ್ಲಿ ರೂ. 3050.20ಕ್ಕೆ ವಹಿವಾಟು ಮುಗಿಸಿದೆ.

ಇದನ್ನೂ ಓದಿ: Accenture Employees Bonus: ಆಕ್ಸೆಂಚರ್​ನ 2 ಲಕ್ಷ ಸಿಬ್ಬಂದಿಗೆ ದೊರೆಯಲಿದೆ ಬೋನಸ್

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್