Accenture Employees Bonus: ಆಕ್ಸೆಂಚರ್​ನ 2 ಲಕ್ಷ ಸಿಬ್ಬಂದಿಗೆ ದೊರೆಯಲಿದೆ ಬೋನಸ್

ಆಕ್ಸೆಂಚರ್ ಕಂಪೆನಿಯಿಂದ ಸಿಬ್ಬಂದಿಗೆ ಬೋನಸ್ ನೀಡುವ ಘೋಷಣೆ ಮಾಡಲಾಗಿದೆ. ಇದರಿಂದ ಭಾರತದಲ್ಲಿನ 2 ಲಕ್ಷ ಸಿಬ್ಬಂದಿಗೆ ಅನುಕೂಲ ಆಗುತ್ತದೆ. ಒಂದು ವಾರಕ್ಕೆ ಸಮವಾದ ಮೂಲವೇತನ ಬೋನಸ್ ಆಗಿ ಉದ್ಯೋಗಿಗಳಿಗೆ ಸಿಗುತ್ತದೆ.

Accenture Employees Bonus: ಆಕ್ಸೆಂಚರ್​ನ 2 ಲಕ್ಷ ಸಿಬ್ಬಂದಿಗೆ ದೊರೆಯಲಿದೆ ಬೋನಸ್
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:Mar 19, 2021 | 12:51 PM

ಐಟಿ ಹಾಗೂ ವೃತ್ತಿಪರ ಸೇವೆಗಳನ್ನು ಒದಗಿಸುವ ಆಕ್ಸೆಂಚರ್ ಕಂಪೆನಿಯು ಆಯಾ ಸಿಬ್ಬಂದಿ ಮೂಲವೇತನದ ಒಂದು ವಾರದ ಮೊತ್ತವನ್ನು ಬೋನಸ್ ಆಗಿ ನೀಡಲಿದೆ ಎಂದು ಗುರುವಾರ ಹೇಳಿದೆ. ಕೊರೊನಾ ಬಿಕ್ಕಟ್ಟಿನ ಸವಾಲು ಇರುವಾಗಲೂ ಒಂದು ಸಲದ ಈ ಬೋನಸ್ ವಿತರಣೆ ಮಾಡಲಾಗುತ್ತಿದೆ. ಉದ್ಯೋಗಿಗಳು ಕಂಪೆನಿಗೆ ನೀಡಿದ ಕೊಡುಗೆಗೆ ಪ್ರತಿಯಾಗಿ ಈ ಬೋನಸ್ ನೀಡಲಾಗುತ್ತಿದೆ. ಅಂದ ಹಾಗೆ ಭಾರತದಲ್ಲೇ ಆಕ್ಸೆಂಚರ್ ಕಂಪೆನಿಗೆ ಎರಡು ಲಕ್ಷ ಸಿಬ್ಬಂದಿ ಇದ್ದಾರೆ. ಫೆಬ್ರವರಿ 28, 2021ಕ್ಕೆ ಕೊನೆಯಾದ ಎರಡನೇ ತ್ರೈಮಾಸಿಕದಲ್ಲಿ ಆಕ್ಸೆಂಚರ್ ಕಂಪೆನಿಯು ಆದಾಯದಲ್ಲಿ ಶೇಕಡಾ 8ರಷ್ಟು ಬೆಳವಣಿಗೆ ಕಂಡು, 12.09 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿತ್ತು.

ಕಂಪೆನಿಯ ನಿವ್ವಳ ಆದಾಯವು ಎರಡನೇ ತ್ರೈಮಾಸಿಕದಲ್ಲಿ 1.46 ಬಿಲಿಯನ್ ಡಾಲರ್ ಆಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ 1.25 ಬಿಲಿಯನ್ ಡಾಲರ್ ನಿವ್ವಳ ಲಾಭ ಬಂದಿತ್ತು. “ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯಿಂದ ಕೆಳಗಿರುವವರಿಗೆ ಕಂಪೆನಿಯಿಂದ ಒಂದು ವಾರಕ್ಕೆ ಸಮನಾಗುವ ಮೂಲವೇತನದಷ್ಟು ಬೋನಸ್ ಘೋಷಣೆ ಮಾಡಲಾಗಿದೆ. ಈ ಸವಾಲಿನ ವರ್ಷದಲ್ಲಿ ಗ್ರಾಹಕರಿಗೆ ಆಕ್ಸೆಂಚರ್ ಸಿಬ್ಬಂದಿ ತೋರಿದ ಬದ್ಧತೆ ಹಾಗೂ ಅಭೂತಪೂರ್ವ ಕೊಡುಗೆಯನ್ನು ಗುರುತಿಸಿದೆ,” ಎಂದು ಹಣಕಾಸು ವರದಿಯಲ್ಲಿ ಕಂಪೆನಿಯು ಹೇಳಿದೆ.

ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದಲ್ಲಿ ಕಂಪೆನಿಯು ಹೊಸ ಬುಕ್ಕಿಂಗ್ 16 ಬಿಲಿಯನ್ ಯುಎಸ್​ಡಿ ತಲುಪುವ ಮೂಲಕ ಶೇ 13ರಷ್ಟು ಏರಿಕೆ ದಾಖಲಿಸಿದೆ. “2021ರ ಹಣಕಾಸು ವರ್ಷದಲ್ಲಿ ಕಂಪೆನಿಯು ಕಾರ್ಯನಿರ್ವಹಣೆ ನಗದು ಹರಿವು 7.65 ಬಿಲಿಯನ್​​ನಿಂದ 8.15 ಬಿಲಿಯನ್ ಯುಎಸ್​ಡಿ ನಿರೀಕ್ಷಿಸುತ್ತಿದೆ. ಈ ಹಿಂದೆ ಆ ಪ್ರಮಾಣ 6.65 ಬಿಲಿಯನ್ ಯುಎಸ್​ಡಿಯಿಂದ 7.15 ಬಿಲಿಯನ್ ಯುಎಸ್​ಡಿ ಇತ್ತು,” ಎಂದು ಆಕ್ಸೆಂಚರ್ ಹೇಳಿದೆ.

ಇದನ್ನೂ ಓದಿ: ಇನ್ಫೋಸಿಸ್ ಸಿಬ್ಬಂದಿ, ಹತ್ತಿರ ಸಂಬಂಧಿಗಳಿಗೆ ಕಂಪೆನಿಯೇ ಭರಿಸಲಿದೆ ಕೊರೊನಾ ಲಸಿಕೆ ವೆಚ್ಚ

Published On - 12:44 pm, Fri, 19 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್