Business loan: ಉದ್ಯಮಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಟಾಪ್ 10 ಬ್ಯಾಂಕ್​ಗಳಿವು

ಉದ್ಯಮದ ಅಗತ್ಯಗಳಿಗೆ ಸಾಲ ಪಡೆಯುವುದು ಹೇಗೆ, ಯಾವ ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಸಂಸ್ಥೆ ಕಡಿಮೆ ಬಡ್ಡಿಗೆ ಬಿಜಿನೆಸ್ ಲೋನ್ ನೀಡುತ್ತಿವೆ ಎಂಬುದರ ವಿವರ ಈ ಲೇಖನದಲ್ಲಿ ಇದೆ.

Business loan: ಉದ್ಯಮಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಟಾಪ್ 10 ಬ್ಯಾಂಕ್​ಗಳಿವು
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Mar 19, 2021 | 3:09 PM

ಉದ್ಯಮಗಳಿಗೆ ಹಣಕಾಸಿನ ಅಗತ್ಯ ಬಾರದೆ ಇರುವುದಕ್ಕೆ ಸಾಧ್ಯವಾ? ಹಲವು ಬ್ಯಾಂಕ್​ಗಳು ಯಾವುದೇ ಅಡಮಾನ ಇಟ್ಟುಕೊಳ್ಳದೆ (ಅನ್​ಸೆಕ್ಯೂರ್ಡ್) ಸಾಲ ನೀಡುತ್ತಿವೆ. ಹೊಸ ಪ್ರಾಜೆಕ್ಟ್ ಶುರು ಮಾಡುವುದಕ್ಕೆ, ಈಗಿರುವ ಉದ್ಯಮದ ವಿಸ್ತರಣೆಗೆ, ಹೊಸ ಸಲಕರಣೆ- ಸಾಧನಗಳ ಖರೀದಿಗೆ, ಕಚೇರಿ ಸ್ಥಳದ ಅಡ್ವಾನ್ಸ್ ಮತ್ತು ಇತರ ಯಾವುದೇ ಉದ್ದೇಶಕ್ಕೆ ಈ ಸಾಲದ ಹಣವನ್ನು ಬಳಸಿಕೊಳ್ಳಬಹುದು. ಆದರೆ ಸಾಲಕ್ಕೆ ಅರ್ಜಿ ಹಾಕಿಕೊಳ್ಳುವ ಮುನ್ನ ಬಡ್ಡಿ ದರ, ಮರುಪಾವತಿ ಅವಧಿ, ಪ್ರೊಸೆಸಿಂಗ್ ಫೀ ಇತರ ಸಂಗತಿಗಳ ಬಗ್ಗೆ ಸರಿಯಾಗಿ ವಿಚಾರಿಸಿಕೊಳ್ಳಬೇಕು.

ಇನ್ನು ಬ್ಯಾಂಕ್​ಗಳಿಂದ ಸಹ ಸಾಲ ಪಡೆಯುವವರ ಅರ್ಹತೆಯನ್ನು ನೋಡಿಯೋ ಹಣ ನೀಡಲಾಗುತ್ತದೆ. ನೀವು ಈಗಿನ್ನೂ ಉದ್ಯಮ ಆರಂಭಿಸಿದ್ದೀರಿ ಎಂದಾದಲ್ಲಿ ಸ್ವಲ್ಪ ಪ್ರಮಾಣದ ಸಾಲ ತೆಗೆದುಕೊಂಡು, ಅದನ್ನು ವಾಪಸ್ ಮಾಡಿ. ಹೀಗೆ ನಿಯಮಿತವಾಗಿ ಮಾಡುವ ಮೂಲಕ ಕ್ರೆಡಿಟ್ ಪ್ರೊಫೈಲ್ ರೂಪಿಸಿಕೊಳ್ಳಿ. ಮುಂದೆ ದೊಡ್ಡ ಪ್ರಮಾಣದಲ್ಲಿ ಸಾಲ ಬೇಕಾದಾಗ ಇದರಿಂದ ಸಹಾಯ ಆಗುತ್ತದೆ.

ನೀವು ಉದ್ಯಮಕ್ಕಾಗಿ ಸಾಲ ಪಡೆಯುವುದಕ್ಕೆ ತೆರಳಿದಾಗ ಮುಖ್ಯವಾಗುವ ಅಂಶಗಳು ಹೀಗಿವೆ: 1. ಕ್ರೆಡಿಟ್ ಸ್ಕೋರ್ 2. ಉದ್ಯಮದಲ್ಲಿ ನಿಮ್ಮ ಅನುಭವ 3. ವಾರ್ಷಿಕ ವಹಿವಾಟು 4. ಯಾವ ರೀತಿಯ ಸಾಲ (ಸೆಕ್ಯೂರ್ಡ್ ಅಥವಾ ಅನ್​ಸೆಕ್ಯೂರ್ಡ್) 5. ಬ್ಯಾಂಕ್​ನಿಂದ ಸಾಲ ಪಡೆಯುತ್ತಿದ್ದೀರೋ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯೋ?

ಉದ್ಯಮದ ಸಾಲ ಪಡೆಯಲು ಒದಗಿಸಬೇಕಾದ ದಾಖಲೆ ಮತ್ತು ಅರ್ಹತೆಗಳು 1. 25ರಿಂದ 55 ವರ್ಷದೊಳಗಿನವರನ್ನು ಸಾಲ ಪಡೆಯುವುದಕ್ಕೆ ಪರಿಗಣಿಸಲಾಗುತ್ತದೆ 2. ಕಳೆದ 1 ವರ್ಷದ ಆದಾಯ ತೆರಿಗೆ ರಿಟರ್ನ್ಸ್ 3. ಕಳೆದ ಮೂರು ವರ್ಷದ ಲೆಕ್ಕಪರಿಶೋಧನೆಯಾದ ಅಥವಾ ಪ್ರಾವಿಷನಲ್ ಲೆಕ್ಕಪತ್ರ 4. ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್​ಮೆಂಟ್ 5. ಪ್ರಸಕ್ತ ವರ್ಷದ ಸ್ಥಿತಿಗತಿ ಮತ್ತು ಅಂದಾಜು ವಹಿವಾಟು 6. ಏಕವ್ಯಕ್ತಿ ವ್ಯಾಪಾರಿ ಸಂಸ್ಥೆ ಆಗಿದ್ದಲ್ಲಿ ಆ ಬಗ್ಗೆ ಘೋಷಣಾ ಪತ್ರ ಅಥವಾ ಪಾಲುದಾರ ಸಂಸ್ಥೆಯಾಗಿದ್ದಲ್ಲಿ ಒಪ್ಪಂದ ಪತ್ರ 7. ಮೆಮೊರಂಡಂ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ದೃಢೀಕೃತ ನಕಲು 8. ಕಂಪೆನಿ, ಸಂಸ್ಥೆ ಅಥವಾ ವೈಯಕ್ತಿಕ ಪ್ಯಾನ್ ಕಾರ್ಡ್ 9. ಗುರುತು ದೃಢೀಕರಣ 10. ವಿಳಾಸ ದೃಢೀಕರಣ

ಗಮನಿಸಬೇಕಾದ ಇತರ ಮುಖ್ಯ ಅಂಶಗಳು: 1. ಅಡಮಾನ ಮಾಡಿ ಪಡೆಯುವ ಸೆಕ್ಯೂರ್ಡ್ ಸಾಲಕ್ಕೆ ಬಡ್ಡಿ ದರವು ಸ್ವಲ್ಪ ಕಡಿಮೆ ಇರುತ್ತದೆ. 2. ಯಾವುದೇ ಅಡಮಾನ ಇಲ್ಲದ ಸಾಲಕ್ಕೆ ಅನ್​ಸೆಕ್ಯೂರ್ಡ್ ಲೋನ್ ಎನ್ನಲಾಗುತ್ತದೆ. ಇಂಥ ಸನ್ನಿವೇಶದಲ್ಲಿ ಬ್ಯಾಂಕ್​ಗಳಿಗೆ ಅಪಾಯ ಜಾಸ್ತಿಯಾದ್ದರಿಂದ ಬಡ್ಡಿ ದರವೂ ಜಾಸ್ತಿ ಇರುತ್ತದೆ. 3. ಉದ್ಯಮದ ಸಾಲಕ್ಕೆ ಪ್ರೊಸೆಸಿಂಗ್ ಶುಲ್ಕ ಶೇಕಡಾ 2ರಿಂದ 6ರ ತನಕ ಮಂಜೂರು ಆಗುವ ಮೊತ್ತವನ್ನು ಅವಲಂಬಿಸುತ್ತದೆ. 4. ಬ್ಯಾಂಕ್​ಗಳು ಅಥವಾ ಹಣಕಾಸು ಸಂಸ್ಥೆಗಳು ಕೆಲವು ಕಂಪೆನಿಗಳಿಗೆ ಪ್ರೊಸೆಸಿಂಗ್ ಫೀ ಎಂದು ಒಂದಷ್ಟು ಶುಲ್ಕ ವಿಧಿಸುತ್ತವೆ. 5. ಬಡ್ಡಿ ದರ, ಪ್ರೊಸೆಸಿಂಗ್ ಫೀ, ಅವಧಿಪೂರ್ವ ಪಾವತಿ ಶುಲ್ಕ, ಕಾಗದಪತ್ರಗಳಿಗೆ ಶುಲ್ಕ, ಭಾಗಶಃ ಪಾವತಿಗೆ ಶುಲ್ಕ, ಪಾವತಿಯನ್ನು ತಪ್ಪಿಸಿದಾಗಿನ ಶುಲ್ಕ, ಉದ್ಯಮದ ಸಾಲದ ಮೇಲಿನ ಇತರ ಶುಲ್ಕವನ್ನು ಗಮನಿಸಬೇಕು. 6. ಬ್ಯಾಂಕ್​ಗಳು ಉದ್ಯಮಕ್ಕೆ ಅಗತ್ಯ ಇರುವ ಪೂರ್ಣ ಮೊತ್ತವನ್ನು ನೀಡುವುದಿಲ್ಲ. ಶೇಕಡಾ 10ರಿಂದ ಶೇ 30ರ ತನಕ ಹಣವನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಕಡಿಮೆ ಬಡ್ಡಿ ದರಕ್ಕೆ ಉದ್ಯಮಗಳಿಗೆ ಸಾಲ ಒದಗಿಸುವ ಬ್ಯಾಂಕ್​ಗಳ ಪಟ್ಟಿ 1. ಎಸ್​ಬಿಐ ಶೇ 11.20- ಶೇ 16.30 (ಎಂಸಿಎಲ್​ಆರ್​ಗೆ ಜೋಡಣೆಯಾದಂತೆ) 2. ಬ್ಯಾಂಕ್ ಆಫ್ ಮಹಾರಾಷ್ಟ್ರ ಶೇ 14.50 ಮೇಲ್ಪಟ್ಟು 3. ಎಚ್​ಡಿಎಫ್​ಸಿ ಬ್ಯಾಂಕ್ ಶೇ 15ರಿಂದ ಶೇ 21.35 4. ಆಕ್ಸಿಸ್ ಬ್ಯಾಂಕ್ ಶೇ 15.5 ಮೇಲ್ಪಟ್ಟು 5. ಐಸಿಐಸಿಐ ಬ್ಯಾಂಕ್ ಶೇ 16 ಮೇಲ್ಪಟ್ಟು 6. ಕೊಟಕ್ ಬ್ಯಾಂಕ್ ಶೇ 16 7. ಕಾರ್ಪೊರೇಷನ್ ಬ್ಯಾಂಕ್ ಶೇ 13.55 ಮೇಲ್ಪಟ್ಟು 8. ಧನ್​ಲಕ್ಷ್ಮಿ ಬ್ಯಾಂಕ್ ಶೇ 12.90 ಮೇಲ್ಪಟ್ಟು 9. ಆರ್​ಬಿಎಲ್ ಬ್ಯಾಂಕ್ ಶೇ 16.25 10. ಇಂಡಸ್ ಇಂಡ್ ಬ್ಯಾಂಕ್ ಶೇ 14

ಇದನ್ನೂ ಓದಿ: Housing loan: ಶೇ 7ರೊಳಗೆ ಇಳಿಯಿತು ಈ ಬ್ಯಾಂಕ್​​ಗಳ ಗೃಹ ಸಾಲ ಬಡ್ಡಿ ದರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ