Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing Bell: ಸೆನ್ಸೆಕ್ಸ್ 641 ಪಾಯಿಂಟ್, ನಿಫ್ಟಿ 186 ಪಾಯಿಂಟ್ ಭರ್ಜರಿ ಜಿಗಿತ

ಅಂತೂ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆ ಹಾದಿಗೆ ಮರಳಿವೆ. ಮಾರ್ಚ್ 19ನೇ ತಾರೀಕಿನ ಶುಕ್ರವಾರದಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಭರ್ಜರಿ ಏರಿಕೆಯನ್ನು ದಾಖಲಿಸಿವೆ.

Closing Bell: ಸೆನ್ಸೆಕ್ಸ್ 641 ಪಾಯಿಂಟ್, ನಿಫ್ಟಿ 186 ಪಾಯಿಂಟ್ ಭರ್ಜರಿ ಜಿಗಿತ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Mar 19, 2021 | 4:49 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿಯ ಎಲ್ಲ ವಲಯದ ಷೇರುಗಳಲ್ಲೂ ಶುಕ್ರವಾರ (ಮಾರ್ಚ್ 19, 2021) ಖರೀದಿ ಕಂಡುಬಂತು. ಆ ಹಿನ್ನೆಲೆಯಲ್ಲಿ ದಿನಾಂತ್ಯದ ಕೊನೆಗೆ ಸೆನ್ಸೆಕ್ಸ್ 641.72 ಪಾಯಿಂಟ್ಸ್ ಅಥವಾ ಶೇಕಡಾ 1.30ಯಷ್ಟು ಏರಿಕೆಯೊಂದಿಗೆ 49,858.24 ಪಾಯಿಂಟ್​ನೊಂದಿಗೆ ವ್ಯವಹಾರ ಮುಗಿಸಿತು. ಇನ್ನು ನಿಫ್ಟಿ ಸೂಚ್ಯಂಕವು 186.10 ಪಾಯಿಂಟ್ ಅಥವಾ ಶೇ 1.28ರಷ್ಟು ಮೇಲೇರಿ, 14,744 ಪಾಯಿಂಟ್​ನೊಂದಿಗೆ ವಹಿವಾಟು ಚುಕ್ತಾ ಮಾಡಿತು.

ಈ ದಿನದ ವಹಿವಾಟಿನಲ್ಲಿ 1461 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1418 ಕಂಪೆನಿಯ ಷೇರುಗಳ ಬೆಲೆಗಳು ಇಳಿದವು. ಇನ್ನು 200 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಎಲ್ಲ ವಲಯದ ಸೂಚ್ಯಂಕಗಳು ಗಳಿಕೆಯಲ್ಲೇ ಮುಕ್ತಾಯ ಕಂಡವು. ನಿಫ್ಟಿ ಎನರ್ಜಿ ಶೇ 3ರಷ್ಟು ಏರಿಕೆ ದಾಖಲಿಸಿತು. ಬಿಎಸ್​ಇ ಮಿಡ್​ಕ್ಯಾಪ್ ಹಾಗೂ ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ಶೇ 0.4ರಿಂದ ಶೇ 1.3ರಷ್ಟು ಏರಿಕೆಗೆ ಕಾರಣ ಆದವು.

ಡಾಲರ್ ವಿರುದ್ಧ ರೂಪಾಯಿ ಮೌಲ್ಯ 72.51ರಲ್ಲಿ ಕೊನೆಯಾಯಿತು. ದಿನದ ಆರಂಭದಲ್ಲಿ ವಹಿವಾಟು 72.58ರೊಂದಿಗೆ ಶುರುವಾಯಿತು. ಈ ಹಿಂದಿನ ಸೆಷನ್​​ನಲ್ಲಿ ರೂಪಾಯಿ ಮೌಲ್ಯ 72.52ರಲ್ಲಿ ಕೊನೆಯಾಗಿತ್ತು. ಈ ದಿನ 72.46ರಿಂದ 72.58ರ ಮಧ್ಯೆ ವಹಿವಾಟು ನಡೆಸಿತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾ ಪ್ರಮಾಣ ಎನ್​ಟಿಪಿಸಿ ಶೇ 4.53 ಎಚ್​ಯುಎಲ್ ಶೇ 4.37 ಪವರ್​ಗ್ರಿಡ್ ಕಾರ್ಪ್ ಶೇ 4.14 ಜೆಎಸ್​ಡಬ್ಲ್ಯು ಸ್ಟೀಲ್ ಶೇ 4.11 ಯುಪಿಎಲ್ ಶೇ 4.02

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾ ಪ್ರಮಾಣ ಲಾರ್ಸನ್ -ಶೇ 1.18 ಟೆಕ್ ಮಹೀಂದ್ರಾ -ಶೇ 0.68 ಕೋಲ್ ಇಂಡಿಯಾ -ಶೇ 0.55 ಬಜಾಜ್ ಆಟೋ -ಶೇ 0.39 ಟೈಟಾನ್ ಕಂಪೆನಿ -ಶೇ 0.19

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್

ಇದನ್ನೂ ಓದಿ: Tata Group Founders Day: ಹೂಡಿಕೆದಾರರಿಗೆ ಅದ್ಭುತ ಲಾಭ ಮೊಗೆದುಕೊಟ್ಟ ಟಾಟಾ ಸಮೂಹ ಕಂಪೆನಿಗಳು

ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!