Tata Group Founders Day: ಹೂಡಿಕೆದಾರರಿಗೆ ಅದ್ಭುತ ಲಾಭ ಮೊಗೆದುಕೊಟ್ಟ ಟಾಟಾ ಸಮೂಹ ಕಂಪೆನಿಗಳು

ಮಾರ್ಚ್ 3ನೇ ತಾರೀಕು ಟಾಟಾ ಸಮೂಹದ ಸ್ಥಾಪಕರ ದಿನ. ಟಾಟಾ ಸಮೂಹದ ಹದಿನೇಳು ಲಿಸ್ಟೆಡ್ ಕಂಪೆನಿಗಳು ಹೂಡಿಕೆದಾರರಿಗೆ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲೂ ಕಳೆದ ಒಂದು ವರ್ಷದಲ್ಲಿ ಎಷ್ಟು ರಿಟರ್ನ್ಸ್ ನೀಡಿವೆ ಎಂಬ ಬಗ್ಗೆ ಆಸಕ್ತಿಕರ ಸಂಗತಿಗಳು ಇಲ್ಲಿವೆ.

Tata Group Founders Day: ಹೂಡಿಕೆದಾರರಿಗೆ ಅದ್ಭುತ ಲಾಭ ಮೊಗೆದುಕೊಟ್ಟ ಟಾಟಾ ಸಮೂಹ ಕಂಪೆನಿಗಳು
ಬಿಎಸ್​ಇ ಕಚೇರಿ ಎದುರು ಇರುವ ಗೂಳಿ (ಎಡಚಿತ್ರ), ರತನ್ ಟಾಟಾ (ಬಲ ಚಿತ್ರ)
Follow us
ಪೃಥ್ವಿಶಂಕರ
| Updated By: Srinivas Mata

Updated on:Mar 04, 2021 | 7:58 PM

ಮಾರ್ಚ್ 3ನೇ ತಾರೀಕು ಟಾಟಾ ಸಮೂಹ ಕಂಪೆನಿಗಳ ಸ್ಥಾಪಕ ಜೆಮ್ಷೆಡ್ ಜೀ ಟಾಟಾ ಅವರ ಜನ್ಮದಿನ. ಟಾಟಾ ಕಂಪೆನಿ ಸ್ಥಾಪಕರ ದಿನವನ್ನಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಇಂಥದ್ದೊಂದು ಸಾಮ್ರಾಜ್ಯ ಕಟ್ಟಲು ಶತಮಾನಗಳ ಶ್ರಮ ಇದೆ. ಗುಂಡು ಪಿನ್​ನಿಂದ ಏರೋಪ್ಲೇನ್ ತನಕ ಈ ಕಂಪೆನಿಯ ಅಸ್ತಿತ್ವ ಇಲ್ಲದ ಜಾಗಗಳಿಲ್ಲ. ಲಾಭ- ನಷ್ಟದ ಲೆಕ್ಕಾಚಾರದಲ್ಲಿ ಈ ಕಂಪೆನಿ ಅಲ್ಲಿ- ಇಲ್ಲಿ ಸೋತಿದ್ದಿರಬಹುದು. ಆದರೆ ಹೂಡಿಕೆದಾರರ ವಿಶ್ವಾಸ ಗಟ್ಟಿಯಾಗಿ ಉಳಿಸಿಕೊಂಡಿದೆ. ಈ ಲೇಖನವನ್ನು ಟಾಟಾ ಸಮೂಹ ಕಂಪೆನಿಗಳ ಷೇರುಗಳ ಯಶೋಗಾಥೆಯನ್ನು ಅಂಕಿಗಳಲ್ಲಿ ತಿಳಿಸುವುದಕ್ಕೆ ಅಂತಲೇ ಮೀಸಲಿಡಲಾಗಿದೆ. ಹಾಗಂತ ಇಂಥದ್ದೇ ಷೇರು ಖರೀದಿಸಿ ಎಂದು ಶಿಫಾರಸು ಮಾಡುವುದು ನಮ್ಮ ಉದ್ದೇಶವಿಲ್ಲ. ಹಾಗೊಂದು ವೇಳೆ ಖರೀದಿ ಮಾಡಿದಲ್ಲಿ ಅದರ ಲಾಭ- ನಷ್ಟ ಯಾವುದಕ್ಕೂ ಲೇಖಕರಾಗಲೀ ಟಿವಿ9 ಕನ್ನಡ ಡಿಜಿಟಲ್ ಮತ್ತು ಅದರ ಯಾವುದೇ ಸಹವರ್ತಿ ಕಂಪೆನಿಗಳು ಜವಾಬ್ದಾರ ಅಲ್ಲ.

ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡು, ಲಾಕ್​​ಡೌನ್ ಘೋಷಣೆ ಆರಂಭವಾದಾಗ ಮಾರ್ಚ್ ತಿಂಗಳಲ್ಲಿ ಬಾಂಬೆ ಷೇರು ಮಾರುಕಟ್ಟೆಯು 25,600 ಪಾಯಿಂಟ್ ಸಮೀಪಕ್ಕೆ ಬಂದು ನಿಂತುಬಿಟ್ಟಿತು. ಅದೆಷ್ಟೋ ಕಂಪೆನಿಯ ಷೇರುಗಳು ಹತ್ತು ವರ್ಷಗಳ ಕನಿಷ್ಠ ಮಟ್ಟಕ್ಕೆ, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಬಂದು ತಲುಪಿದವು. ಆದರೆ ಈಚೆಗೆ ಬಿಎಸ್​ಇ ಸೂಚ್ಯಂಕ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 52,516 ಪಾಯಿಂಟ್ ಮುಟ್ಟಿತ್ತು. ಒಂದು ವರ್ಷದೊಳಗೆ ಡಬಲ್​ಗಿಂತ ಹೆಚ್ಚಾಗಿ ಸೂಚ್ಯಂಕ ಮೇಲೆದ್ದಿದೆ. ಬಿದ್ದ ವೇಗಕ್ಕಿಂತ ಬೇಗ ಚಿಗಿತುನಿಂತಿದೆ. ಈ ಪಯಣದಲ್ಲಿ ಟಾಟಾ ಸಮೂಹ ಕಂಪೆನಿಗಳ ಷೇರು ಎಷ್ಟು ಪರ್ಸೆಂಟ್ ಲಾಭ ಗಳಿಸಿವೆ, ವಾರ್ಷಿಕ ಗರಿಷ್ಠ- ಕನಿಷ್ಠ ಮಟ್ಟ ಹಾಗೂ ಇಂದಿನ (4-3-2021) ದರಕ್ಕೆ ಲೆಕ್ಕ ಹಾಕಿದಲ್ಲಿ ಎಷ್ಟು ಪರ್ಸೆಂಟ್ ಲಾಭ ಸಿಕ್ಕಂತಾಗುತ್ತದೆ ಎಂಬ ಆಸಕ್ತಿಕರ ಸಂಗತಿಗಳು ಇಲ್ಲಿವೆ.

ಷೇರುಪೇಟೆಯಲ್ಲಿ ಟಾಟಾ ಸಮೂಹದ 17 ಕಂಪೆನಿಗಳು ಟಾಟಾ ಸಮೂಹದ್ದು ಲಿಸ್ಟಿಂಗ್ ಆಗದ ಕಂಪೆನಿಗಳೂ ಇವೆ. ಆದರೆ ಇಲ್ಲಿ ಗಣನೆಗೆ ತೆಗೆದುಕೊಳ್ಳುತ್ತಿರುವುದು ಲಿಸ್ಟಿಂಗ್ ಆದ ಕಂಪೆನಿಯ ಷೇರುಗಳ ಬೆಲೆ ಮಾತ್ರ. ಮೊದಲೇ ಹೇಳಿದ ಹಾಗೆ ವೈವಿಧ್ಯಮಯವಾದ ವ್ಯವಹಾರಗಳನ್ನು ಟಾಟಾ ಸಮೂಹ ನಡೆಸುತ್ತಿದ್ದು, 17 ಕಂಪೆನಿಗಳು ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿವೆ. ಇಲ್ಲಿವೆ ಟಾಟಾ ಸಮೂಹದ ಲಿಸ್ಟೆಡ್ ಕಂಪೆನಿಗಳ ವಿವರ: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟೈಟಾನ್ ಕಂಪೆನಿ, ಟಾಟಾ ಕೆಮಿಕಲ್ಸ್, ಟಾಟಾ ಪವರ್, ಇಂಡಿಯನ್ ಹೋಟೆಲ್ಸ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಟಾಟಾ ಕಮ್ಯುನಿಕೇಷನ್ಸ್, ವೊಲ್ಟಾಸ್, ಟ್ರೆಂಟ್ ಲಿಮಿಟೆಡ್, ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಲಿಮಿಟೆಡ್, ಟಾಟಾ ಇನ್ವೆಸ್ಟ್​​ಮೆಂಟ್ ಕಾರ್ಪೊರೇಷನ್, ಟಾಟಾ ಮೆಟಾಲಿಕ್ಸ್, ಟಾಟಾ ಎಲಾಕ್ಸಿ, ನೆಲ್ಕೋ, ಟಾಟಾ ಕಾಫೀ. ಎನ್​ಎಸ್​ಇಯಲ್ಲಿ ಇದರ ಬೆಲೆ ವಿವರ ಹೀಗಿದೆ.

ಟಾಟಾ ಸಮೂಹದ 17 ಲಿಸ್ಟಿಂಗ್ ಕಂಪೆನಿಗಳ ಒಂದು ವರ್ಷದಲ್ಲಿನ ಗಳಿಕೆ
     ಕಂಪೆನಿ ಹೆಸರು           2020ರ  ಮಾರ್ಚ್ ಕನಿಷ್ಠ ದರ        2021 ಮಾರ್ಚ್ 4ರ ದರ     ವಾರ್ಷಿಕ ಗರಿಷ್ಠ         ಶೇಕಡಾವಾರು ಗಳಿಕೆ
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 1506.05 3071.1 3,339.80 103.85
ಟಾಟಾ ಸ್ಟೀಲ್ 250.85 765 782.5 204.96
ಟಾಟಾ ಮೋಟಾರ್ಸ್ 63.5 344.05 357 441.81
ಟೈಟಾನ್ ಕಂಪೆನಿ 720.9 1481.95 1621.35 105.56
ಟಾಟಾ ಕೆಮಿಕಲ್ಸ್ 197 779.15 792.05 295.5
ಟಾಟಾ ಪವರ್ 27 109.35 114 305
ಇಂಡಿಯನ್ ಹೋಟೆಲ್ಸ್ 62.1 129.2 139.25 108.05
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ 213.7 632.95 654 196.18
ಟಾಟಾ ಕಮ್ಯುನಿಕೇಷನ್ಸ್ 200 1230.3 1342.15 515.15
ವೊಲ್ಟಾಸ್ (ಮೇ 6, 2020) 427.45 1079.55 1132 152.55
ಟ್ರೆಂಟ್ ಲಿಮಿಟೆಡ್ 365 922.2 944 152.65
ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಲಿಮಿಟೆಡ್ 164 711.55 875 333.87
ಟಾಟಾ ಇನ್ವೆಸ್ಟ್​​ಮೆಂಟ್ ಕಾರ್ಪೊರೇಷನ್ 591 1,141.70 1,163 93.18
ಟಾಟಾ ಮೆಟಾಲಿಕ್ಸ್ 308 823.55 934 167.38
ಟಾಟಾ ಎಲಾಕ್ಸಿ 499.95 2,706.00 3050 441.25
ನೆಲ್ಕೋ 115 218.55 239.45 90.04
ಟಾಟಾ ಕಾಫೀ 48 135.9 137.85 183.12

ಹೆಚ್ಚು ಲಾಭ ತಂದುಕೊಟ್ಟಿರುವ ಟಾಪ್ 5 ಕಂಪೆನಿಗಳು ಹೂಡಿಕೆದಾರರಿಗೆ ಕಳೆದ ಒಂದು ವರ್ಷದಲ್ಲಿ ಹೆಚ್ಚಿನ ಲಾಭ ತಂದುಕೊಟ್ಟಿರುವ ಟಾಪ್ 5 ಷೇರುಗಳು ಯಾವುವು ಅಂತ ನೋಡುವುದಾದರೆ, ಟಾಟಾ ಕಮ್ಯುನಿಕೇಷನ್ಸ್, ಟಾಟಾ ಮೋಟಾರ್ಸ್, ಟಾಟಾ ಎಲಾಕ್ಸಿ, ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಲಿಮಿಟೆಡ್ ಹಾಗೂ ಟಾಟಾ ಕೆಮಿಕಲ್ಸ್ ಮುಖ್ಯವಾಗಿ ಕಾಣುತ್ತವೆ. ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಬೇಕು ಎಂದು ಬಯಸುವವರಿಗೆ ನಾನಾ ಉದ್ಯಮದಲ್ಲಿ ತೊಡಗಿಕೊಂಡಿರುವ ಕಂಪೆನಿಗಳು ಟಾಟಾ ಸಮೂಹದಲ್ಲೇ ಕಂಡುಬರುತ್ತವೆ. ಬ್ಯಾಂಕ್​​ಗಳಲ್ಲಿ ಎಫ್.ಡಿ. ದರ ಆರೆಂಟು ಪರ್ಸೆಂಟ್ ಇರುವ ಕಾಲಘಟ್ಟದಲ್ಲಿ ವರ್ಷದಲ್ಲಿ ಮುನ್ನೂರು- ನಾನೂರು ಪರ್ಸೆಂಟ್ ಗಳಿಕೆ ತಂದುಕೊಟ್ಟಿರುವ ಈ ಕಂಪೆನಿಗಳು ಹೂಡಿಕೆದಾರರ ಪಾಲಿಗೆ ಅಲಾವುದ್ದೀನ್​ನ ಕಥೆಯಲ್ಲಿ ಬರುವ ಅದ್ಭುತ ದೀಪದಂತೆಯೇ ಕಂಡುಬರಬಹುದು. ಅದರ ಜತೆಗೆ ಮಾರುಕಟ್ಟೆ ಅನಿಶ್ಚಿತತೆ ಎಂಬ ಕ್ರೂರ ಮಾಂತ್ರಿಕನ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು, ಅಷ್ಟೇ.

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್

ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?

Published On - 6:04 pm, Thu, 4 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್