AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಪಾವತಿಗೆ ಹೆಚ್ಚುವರಿ ಭದ್ರತೆ; ಯೆಸ್ ಎಂದರಷ್ಟೇ ಪೇಮೆಂಟ್; ವಂಚನೆ, ತಪ್ಪಾದ ಹಣ ವರ್ಗಾವಣೆ ತಡೆಯಲು ಈ ಕ್ರಮಕ್ಕೆ ಯೋಚನೆ

UPI payments may need extra yes authentication before money leaves: ದಿನವೂ ಹಲವಾರು ಕೋಟಿ ಸಂಖ್ಯೆಗಳಷ್ಟು ಟ್ರಾನ್ಸಾಕ್ಷನ್​ಗಳನ್ನು ಕಾಣುವ ಯುಪಿಐನ ಭದ್ರತಾ ಫೀಚರ್ ಅನ್ನು ಇನ್ನಷ್ಟು ಗಟ್ಟಿಗೊಳಿಸಲಾಗುತ್ತಿದೆ. ಯುಪಿಐನಲ್ಲಿ ವಂಚನೆಗಳನ್ನು ತಡೆಯಲು ಹೆಚ್ಚುವರಿ ಸೆಕ್ಯೂರಿಟಿ ಲೇಯರ್ ತರಲು ಯೋಜಿಸಲಾಗುತ್ತಿದೆ. ಹಣ ಪಾವತಿಸುವಾಗ ಅಂತಿಮವಾಗಿ ಬಳಕೆದಾರರಿಂದ ದೃಢೀಕರಣ ಪಡೆಯುವ ವ್ಯವಸ್ಥೆ ತರಲು ಬ್ಯಾಂಕುಗಳು ಪ್ರಸ್ತಾಪಿಸಿವೆ.

ಯುಪಿಐ ಪಾವತಿಗೆ ಹೆಚ್ಚುವರಿ ಭದ್ರತೆ; ಯೆಸ್ ಎಂದರಷ್ಟೇ ಪೇಮೆಂಟ್; ವಂಚನೆ, ತಪ್ಪಾದ ಹಣ ವರ್ಗಾವಣೆ ತಡೆಯಲು ಈ ಕ್ರಮಕ್ಕೆ ಯೋಚನೆ
ಯುಪಿಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 03, 2026 | 12:59 PM

Share

ನವದೆಹಲಿ, ಆಗಸ್ಟ್ 3: ಭಾರತದಲ್ಲಿ ಅತಿಹೆಚ್ಚು ಬಳಕೆಯಾಗುವ ಡಿಜಿಟಲ್ ಪೇಮೆಂಟ್ ಸಿಸ್ಟಂ ಯುಪಿಐ (UPI). ಸುರಕ್ಷಿತ ಹಾಗೂ ಸುಲಭ ಪಾವತಿಯಲ್ಲಿ ಜನರ ವಿಶ್ವಾಸ ಹೊಂದಿರುವ ಯುಪಿಐನಲ್ಲಿ ಈಗ ಹೆಚ್ಚುವರಿ ಸುರಕ್ಷತಾ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆನ್​ಲೈನ್ ವಂಚನೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಯುಪಿಐನಲ್ಲಿ ಹೆಚ್ಚುವರಿ ಸೆಕ್ಯೂರಿಟಿ ಲೇಯರ್ ತರಬೇಕೆಂದು ಬ್ಯಾಂಕುಗಳು ಪ್ರಸ್ತಾಪಿಸಿವೆ. ಇದು ಜಾರಿಯಾದಲ್ಲಿ, ಹಣ ವರ್ಗಾವಣೆ ಆಗುವ ಮೊದಲು ಹೆಚ್ಚುವರಿ ದೃಢೀಕರಣ ಕೇಳಲಾಗುತ್ತದೆ. ಅಂದರೆ, ಹಣ ಕಳುಹಿಸಿದ ಬಳಿಕ ಅಂತಿಮವಾಗಿ ಪೇಮೆಂಟ್​ಗೆ Yes ಅಥವಾ Cancel ಆಯ್ಕೆಗಳನ್ನು ಬಳಕೆದಾರರಿಗೆ ನೀಡಬಹುದು.

ಈ ಹೊಸ ಬದಲಾವಣೆಯ ಪ್ರಮುಖ ಕಾರಣಗಳು ಏನು?

  • ವಂಚನೆ ತಡೆಗಟ್ಟಲು: ಆನ್‌ಲೈನ್ ವಂಚನೆಗಳು ಮತ್ತು ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬಳಕೆದಾರರ ಹಣವು ಸುರಕ್ಷಿತವಾಗಿರಲು ಈ ಹೆಚ್ಚುವರಿ ಭದ್ರತಾಪದರವನ್ನು ಪರಿಚಯಿಸಲಾಗುತ್ತಿದೆ.
  • ತಪ್ಪಾದ ಪಾವತಿಗಳಿಗೆ ಕಡಿವಾಣ: ಕೆಲವೊಮ್ಮೆ ತರಾತುರಿಯಲ್ಲಿ ಅಥವಾ ಗಮನಿಸದೆ ಮಾಡುವ ಯುಪಿಐ ವರ್ಗಾವಣೆಗಳನ್ನು ತಡೆಯಲು ಇದು ಸಹಕಾರಿಯಾಗಿದೆ.
  • ಬಳಕೆದಾರರ ಸಮ್ಮತಿಗೆ ಹೆಚ್ಚಿನ ಆದ್ಯತೆ: ಹಣವು ನೇರವಾಗಿ ಖಾತೆಯಿಂದ ಖಾತೆಗೆ ವರ್ಗಾವಣೆಯಾಗುವ ಮುನ್ನ ಬಳಕೆದಾರರಿಗೆ ಮತ್ತೊಮ್ಮೆ ಯೋಚಿಸಲು ಮತ್ತು ಅಂತಿಮ ಅನುಮೋದನೆ ನೀಡಲು ಇದು ಅವಕಾಶ ಕಲ್ಪಿಸುತ್ತದೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಭಾರತದಲ್ಲಿ ಬಿಡುಗಡೆ: ಬೆಲೆ 25,999 ರೂನಿಂದ ಆರಂಭ; ಬಲವಾದ ಬ್ಯಾಟರಿ, ಉತ್ತಮ ಡಿಸ್​ಪ್ಲೇ ಇರುವ ಫೋನ್

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಎಂದಿನಂತೆ ನೀವು ಯುಪಿಐ ಪಿನ್ (UPI PIN) ನಮೂದಿಸಿದ ಬಳಿಕವೂ, ಹಣ ಕಡಿತಗೊಳ್ಳುವ ಅಂತಿಮ ಹಂತದಲ್ಲಿ ಒಂದು ಹೆಚ್ಚುವರಿ ಪಾಪ್-ಅಪ್ ಅಥವಾ ದೃಢೀಕರಣ ಸಂದೇಶ ಬರಬಹುದು. ಅಲ್ಲಿ ಮತ್ತೊಮ್ಮೆ ವಹಿವಾಟಿನ ವಿವರಗಳನ್ನು ಪರಿಶೀಲಿಸಿ ಅನುಮೋದನೆ (Yes) ನೀಡಿದ ನಂತರವೇ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ.

ಎಲ್ಲಾ ಪೇಮೆಂಟ್​ಗೂ ಈ ದೃಢೀಕರಣ ಕೇಳಲಾಗುವುದಿಲ್ಲ. ಬ್ಯಾಂಕುಗಳಿಗೆ ಅನುಮಾನಾಸ್ಪದವೆನಿಸುವ ಟ್ರಾನ್ಸಾಕ್ಷನ್ ಎಂದನಿಸಿದಾಗ ಇದನ್ನು ಕೇಳಲಾಗುತ್ತದೆ. ಇದರಿಂದ ತಪ್ಪಾಗಿ ಹಣ ಪಾವತಿ ಮಾಡುವ ಬಳಕೆದಾರರಿಗೆ ತಮ್ಮ ತಪ್ಪಿನ ಅರಿವು ಹೊಂದಲು ಸಮಯಾವಕಾಶ ಸಿಕ್ಕಂತಾಗುತ್ತದೆ. ಇದು ಈ ಹೊಸ ಸೆಕ್ಯೂರಿಟಿ ಲೇಯರ್ ಜೋಡಣೆಯ ಉದ್ದೇಶ ಎನ್ನಲಾಗಿದೆ.

ಇದನ್ನೂ ಓದಿ: ದೀರ್ಘಾವಧಿ ಹೂಡಿಕೆ ಸ್ಕೀಮ್ ಪಿಪಿಎಫ್​ನಲ್ಲಿ ಮಾಡಬಾರದ 5 ತಪ್ಪುಗಳಿವು

ಡಿಜಿಟಲ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಮತ್ತು ಗ್ರಾಹಕರ ಹಣಕ್ಕೆ ಹೆಚ್ಚಿನ ರಕ್ಷಣೆ ಒದಗಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹಾಗೂ ಸಂಬಂಧಿತ ನಿಯಂತ್ರಕ ಸಂಸ್ಥೆಗಳು ಹಾಗೂ ಬ್ಯಾಂಕುಗಳು ಇಂತಹ ಸುರಕ್ಷತಾ ಕ್ರಮಗಳ ಕುರಿತು ಚಿಂತನೆ ನಡೆಸುತ್ತಿವೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಬ್ಯಾಂಕುಗಳು ಇಂಥದ್ದೊಂದು ಪ್ರಸ್ತಾವವನ್ನು ಆರ್​ಬಿಐಗೆ ಸಲ್ಲಿಸಿದೆ. ಈ ಕುರಿತು ಅಧಿಕೃತ ಮಾರ್ಗಸೂಚಿಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ