AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅ. 1ರಿಂದ ಹಣಕಾಸು ಬದಲಾವಣೆಗಳು: ಎಟಿಎಂ, ಎಫ್‌ಡಿ, ಕ್ರೆಡಿಟ್ ಕಾರ್ಡ್, ಎಲ್​ಪಿಜಿ, ಮ್ಯೂಚುವಲ್ ಫಂಡ್ ಹೊಸ ನಿಯಮಗಳು

ಅಕ್ಟೋಬರ್ 1 ರಿಂದ ಬ್ಯಾಂಕಿಂಗ್, ಹೂಡಿಕೆ, ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಮಹತ್ವದ ನಿಯಮ ಬದಲಾವಣೆಗಳು ಜಾರಿಯಾಗಲಿವೆ. ಎಸ್‌ಬಿಐ ಎಟಿಎಂ ಶುಲ್ಕ, ಎಫ್‌ಡಿ ಬಡ್ಡಿ ದರ, ಮ್ಯೂಚುವಲ್ ಫಂಡ್ ನಾಮಿನೇಷನ್, ಕ್ರೆಡಿಟ್ ಕಾರ್ಡ್ ನಿಯಮಗಳು, ಯುಪಿಐ ಪಾವತಿ ಮತ್ತು ಎಲ್‌ಪಿಜಿ ಸಬ್ಸಿಡಿ ಕುರಿತ ಬದಲಾವಣೆಗಳು ಸಾರ್ವಜನಿಕರ ದೈನಂದಿನ ಹಣಕಾಸು ವಹಿವಾಟುಗಳ ಮೇಲೆ ನೇರ ಪರಿಣಾಮ ಬೀರಲಿವೆ. ನಷ್ಟ ತಪ್ಪಿಸಲು ಗ್ರಾಹಕರು ಈ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಅತಿಮುಖ್ಯ.

ಅ. 1ರಿಂದ ಹಣಕಾಸು ಬದಲಾವಣೆಗಳು: ಎಟಿಎಂ, ಎಫ್‌ಡಿ, ಕ್ರೆಡಿಟ್ ಕಾರ್ಡ್, ಎಲ್​ಪಿಜಿ, ಮ್ಯೂಚುವಲ್ ಫಂಡ್ ಹೊಸ ನಿಯಮಗಳು
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 30, 2026 | 7:23 PM

Share

ನವದೆಹಲಿ, ಸೆಪ್ಟೆಂಬರ್ 30: ಅಕ್ಟೋಬರ್ 1 ರಿಂದ ದೇಶದ ಬ್ಯಾಂಕಿಂಗ್, ಹೂಡಿಕೆ ಮತ್ತು ಸಾರಿಗೆ ರಂಗದಲ್ಲಿ ಕೆಲವು ಪ್ರಮುಖ ನಿಯಮಗಳು ಬದಲಾಗುತ್ತಿವೆ. ಎಸ್‌ಬಿಐ ಎಟಿಎಮ್ ಸೇವಾ ಶುಲ್ಕ, ಎಫ್‌ಡಿ ಬಡ್ಡಿ ದರ ನಿಯಮ, ಮ್ಯೂಚುವಲ್ ಫಂಡ್, ಕ್ರೆಡಿಟ್ ಕಾರ್ಡ್ ಮತ್ತು ಯುಪಿಐ ನಿಯಮಗಳಲ್ಲಿ ಬದಲಾವಣೆಗಳಿರುವುದನ್ನು ಗಮನಿಸಬೇಕು. ಎಲ್​ಪಿಜಿ ಗ್ರಾಹಕರಿಗೂ ಕೂಡ ಮಹತ್ವದ ಅಪ್​ಡೇಟ್ ಇದೆ. ಅಕ್ಟೋಬರ್ 1ರಂದು ಎಲ್​ಪಿಜಿ ದರ ಪರಿಷ್ಕರಣೆಯೂ ಆಗುತ್ತದೆ. ವಿವಿಧ ಇಂಧನಗಳ ದರ ಪರಿಷ್ಕರಣೆಯೂ ನಡೆಯುತ್ತದೆ. ಇವು ಸಾರ್ವಜನಿಕರ ದಿನನಿತ್ಯದ ಹಣಕಾಸಿನ ವಹಿವಾಟುಗಳ ಮೇಲೆ ನೇರ ಪರಿಣಾಮ ಬೀರಲಿವೆ.

ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಬದಲಾವಣೆಗಳು ಇಲ್ಲಿವೆ:

1. ಎಸ್‌ಬಿಐ ಎಟಿಎಮ್ ಸೇವಾ ಶುಲ್ಕಗಳ ಪರಿಷ್ಕರಣೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಉಚಿತ ಮಿತಿಗಿಂತ ಹೆಚ್ಚಿನ ಎಟಿಎಮ್ ವಹಿವಾಟುಗಳಿಗೆ ವಿಧಿಸುವ ಸೇವಾ ಶುಲ್ಕಗಳು ಮತ್ತು ನಗದು ರಹಿತ (Non-financial) ವಹಿವಾಟುಗಳ ಮೇಲಿನ ದರಗಳನ್ನು ಪರಿಷ್ಕರಿಸಿದೆ. ನಿಗದಿತ ಮಾಸಿಕ ಉಚಿತ ಮಿತಿ ದಾಟಿದ ನಂತರ ಪ್ರತಿ ಹೆಚ್ಚುವರಿ ವಹಿವಾಟಿಗೆ ಹೊಸ ಸೇವಾ ಶುಲ್ಕಗಳು ಅನ್ವಯವಾಗಲಿವೆ.

2. ಆರ್‌ಬಿಐ ಹೊಸ ಎಫ್‌ಡಿ ಮತ್ತು ಬಲ್ಕ್ ಡೆಪಾಸಿಟ್ ನಿಯಮಗಳು

ಎಫ್‌ಡಿ (Fixed Deposit) ಮ್ಯಾಚುರಿಟಿ ಪೂರ್ಣಗೊಂಡ ನಂತರ ಹಣ ಹಿಂಪಡೆಯದಿದ್ದರೆ ಆ ಮೊತ್ತಕ್ಕೆ ನೀಡಲಾಗುವ ಬಡ್ಡಿ ದರ ಹಾಗೂ 3 ಕೋಟಿ INR ಗಿಂತ ಹೆಚ್ಚಿನ ಬಲ್ಕ್ ಡೆಪಾಸಿಟ್‌ಗಳ ಬಡ್ಡಿ ದರ ಪ್ರಕಟಣೆ ಪ್ರಕ್ರಿಯೆಯಲ್ಲಿ ಆರ್‌ಬಿಐ ನೂತನ ಪಾರದರ್ಶಕ ನಿಯಮಗಳನ್ನು ತಂದಿದೆ. ಬ್ಯಾಂಕ್‌‌ಗಳು ಪ್ರತಿದಿನ ಬೆಳಗ್ಗೆ 10:00 ಗಂಟೆಗೆ ಬಲ್ಕ್ ಡೆಪಾಸಿಟ್ ದರಗಳನ್ನು ಅಧಿಕೃತವಾಗಿ ಪ್ರಕಟಿಸುವುದು ಕಡ್ಡಾಯ.

3. ಮ್ಯೂಚುವಲ್ ಫಂಡ್ ಮತ್ತು ಡೀಮ್ಯಾಟ್ ಖಾತೆಗಳ ನಾಮಿನೇಷನ್

ಮ್ಯೂಚುವಲ್ ಫಂಡ್ ಹೂಡಿಕೆದಾರರು ಮತ್ತು ಡೀಮ್ಯಾಟ್ ಖಾತೆದಾರರಿಗೆ ನಾಮಿನಿ (Nominee) ವಿವರಗಳನ್ನು ಸಲ್ಲಿಸಲು ಅಥವಾ ನಾಮಿನೇಷನ್ ಬೇಡವೆಂದು ದೃಢೀಕರಿಸಲು ನೀಡಲಾಗಿದ್ದ ಗಡುವು ಮುಕ್ತಾಯಗೊಳ್ಳಲಿದ್ದು, ನಿಯಮ ಪಾಲಿಸದ ಖಾತೆಗಳ ವಹಿವಾಟುಗಳ ಮೇಲೆ ನಿರ್ಬಂಧಗಳು ಎದುರಾಗಬಹುದು.

4. ಕ್ರೆಡಿಟ್ ಕಾರ್ಡ್ ನಿಯಮಗಳು ಮತ್ತು ರಿವಾರ್ಡ್ ಪಾಯಿಂಟ್ಸ್

ವಿವಿಧ ಪ್ರಮುಖ ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್‌ಗಳ ರಿವಾರ್ಡ್ ಪಾಯಿಂಟ್ಸ್ ಗಳಿಕೆ, ವಿಮಾನ ನಿಲ್ದಾಣಗಳ ಲಾಂಜ್ ಆಕ್ಸೆಸ್ (Lounge Access) ಉಚಿತ ಸೌಲಭ್ಯಗಳು ಹಾಗೂ ವಾಲೆಟ್ ಲೋಡಿಂಗ್ ಶುಲ್ಕಗಳಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ.

5. ಯುಪಿಐ ಪಾವತಿ ಮತ್ತು ಎಂಡಿಆರ್ (MDR) ಮಾರ್ಗಸೂಚಿಗಳು

ವ್ಯಾಪಾರಿ ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಮತ್ತು ಪಾವತಿ ವ್ಯವಸ್ಥೆಗಳಲ್ಲಿ ಪಾರದರ್ಶಕತೆ ತರಲು ಹೊಸ ಸೂಚನೆಗಳು ಜಾರಿಯಾಗಲಿದ್ದು, ಚಿಲ್ಲರೆ ವ್ಯಾಪಾರ ವಲಯದಲ್ಲಿ ಹೊಸ ಮಾರ್ಗಸೂಚಿಗಳು ಅನ್ವಯವಾಗಲಿವೆ.

6. ಎಲ್​ಪಿಜಿ ಕನೆಕ್ಷನ್​ಗೆ ಕಡ್ಡಾಯ ಆಧಾರ್ ದೃಢೀಕರಣ

ಸಬ್ಸಿಡಿ ದರದಲ್ಲಿ ಗೃಹಬಳಕೆಯ ಎಲ್​ಪಿಜಿ ಸೌಲಭ್ಯ ಹೊಂದಿರುವ ಗ್ರಾಹಕರು, ಆ ಸೌಲಭ್ಯ ಪಡೆಯುವುದನ್ನು ಮುಂದುವರಿಸಬೇಕಾದರೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಮಾಡಿಸಿರಬೇಕು. ಈ ಅಥೆಂಟಿಕೇಶನ್ ಆಗಿರದಿದ್ದರೆ ಅಕ್ಟೋಬರ್ 1ರಿಂದ ಸಬ್ಸಿಡಿ ದರದಲ್ಲಿ ಎಲ್​ಪಿಜಿ ಸಿಗುವುದಿಲ್ಲ. ಮಾರುಕಟ್ಟೆ ಬೆಲೆಗೆ ಖರೀದಿಸಬೇಕಾಗುತ್ತದೆ.

ಇದನ್ನೂ ಓದಿ: 3ನೇ ಕ್ವಾರ್ಟರ್​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಘೋಷಣೆ; ವಿವಿಧ ಸ್ಕೀಮ್​ಗಳ ಬಡ್ಡಿದರದಲ್ಲಿ ಇಲ್ಲ ಬದಲಾವಣೆ

ಹಣಕಾಸಿನ ನಷ್ಟ ಅಥವಾ ಅಡಚಣೆಗಳನ್ನು ತಪ್ಪಿಸಲು ಗ್ರಾಹಕರು ಈ ಹೊಸ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ವಹಿವಾಟುಗಳನ್ನು ಯೋಜಿಸುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More