AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI

UPI

ಯುಪಿಐ (Unified Payments Interface) ಎಂಬುದು ಭಾರತದಲ್ಲಿ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿರುವ ಅತ್ಯಂತ ಸುಲಭ ಮತ್ತು ಸುರಕ್ಷಿತವಾದ ರಿಯಲ್-ಟೈಮ್ ಪಾವತಿ ವ್ಯವಸ್ಥೆಯಾಗಿದೆ. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಿಸುತ್ತದೆ.

ಮೊಬೈಲ್ ಅಪ್ಲಿಕೇಶನ್ (Google Pay, PhonePe, BHIM ಇತ್ಯಾದಿ) ಮೂಲಕ ಯಾವುದೇ ಸಮಯದಲ್ಲಿ (24/7) ತಕ್ಷಣವೇ ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಖಾತೆಗೆ ಹಣವನ್ನು ರವಾನಿಸಬಹುದು. ಹಣ ಕಳುಹಿಸಲು ಅಥವಾ ಪಡೆಯಲು ಬ್ಯಾಂಕ್ ಖಾತೆ ಸಂಖ್ಯೆ ಅಥವಾ IFSC ಕೋಡ್ ಅಗತ್ಯವಿಲ್ಲ. ಕೇವಲ ಯುಪಿಐ ಐಡಿ (UPI ID), ಮೊಬೈಲ್ ಸಂಖ್ಯೆ ಅಥವಾ QR ಕೋಡ್ ಸ್ಕ್ಯಾನ್ ಮಾಡಿ ಪಾವತಿಸಬಹುದು. ಪ್ರತಿಯೊಂದು ವಹಿವಾಟಿಗೂ ಬಳಕೆದಾರರು ರಚಿಸಿದ ರಹಸ್ಯ ‘UPI PIN’ ನಮೂದಿಸುವುದು ಕಡ್ಡಾಯವಾಗಿರುವುದರಿಂದ ಇದು ಅತ್ಯಂತ ಸುರಕ್ಷಿತವಾಗಿದೆ. ಒಂದೇ ಮೊಬೈಲ್ ಆಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಜೋಡಿಸಿ ವ್ಯವಹಾರ ನಡೆಸಬಹುದು.

ಪ್ರಸ್ತುತ ಚಿಲ್ಲರೆ ವ್ಯಾಪಾರಿಗಳಿಂದ ಹಿಡಿದು ಬೃಹತ್ ಸಂಸ್ಥೆಗಳವರೆಗೆ ಎಲ್ಲರೂ ಯುಪಿಐ ಬಳಸುತ್ತಿದ್ದು, ಇದು ಭಾರತವನ್ನು ನಗದು ರಹಿತ (Cashless) ಆರ್ಥಿಕತೆಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ ಹಲವು ವಿದೇಶಗಳಲ್ಲೂ ಯುಪಿಐ ಸೇವೆ ವಿಸ್ತರಣೆಯಾಗಿದೆ.

ಇನ್ನೂ ಹೆಚ್ಚು ಓದಿ

ಎಂಡಿಆರ್ ಕ್ರಮ ಜಾರಿಗೆ ಮುನ್ನವೇ ಸೆಪ್ಟೆಂಬರ್​ನಲ್ಲಿ ಯುಪಿಐ ವಹಿವಾಟು ಇಳಿಮುಖ; ಆರ್​ಬಿಐ ದತ್ತಾಂಶ

ಅಕ್ಟೋಬರ್‌ನಿಂದ ವ್ಯಾಪಾರಿಗಳ ಮೇಲೆ ನೂತನ ಎಂಡಿಆರ್ ಶುಲ್ಕ ಅನ್ವಯವಾಗಲಿರುವ ಬೆನ್ನಲ್ಲೇ, ಸೆಪ್ಟೆಂಬರ್‌ನಲ್ಲಿ ಯುಪಿಐ (UPI) ವಹಿವಾಟುಗಳ ಒಟ್ಟು ಸಂಖ್ಯೆ ಮತ್ತು ಮೌಲ್ಯದಲ್ಲಿ ಶೇಕಡಾ 1.8 ರಷ್ಟು ಇಳಿಕೆ ಕಂಡುಬಂದಿದೆ. ಆಗಸ್ಟ್​ನಲ್ಲಿ 2,450 ಕೋಟಿ ಸಂಖ್ಯೆಯಲ್ಲಿ ಯುಪಿಐ ವಹಿವಾಟುಗಳು ನಡೆದಿದ್ದವು. ಸೆಪ್ಟೆಂಬರ್​ನಲ್ಲಿ ಈ ಸಂಖ್ಯೆ 2,407 ಕೋಟಿಗೆ ಇಳಿಕೆಯಾಗಿದೆ. ಆರ್‌ಬಿಐ ಅಂಕಿಅಂಶಗಳ ಸಂಪೂರ್ಣ ವಿವರ ಇಲ್ಲಿದೆ.

ಅ. 1ರಿಂದ ಹಣಕಾಸು ಬದಲಾವಣೆಗಳು: ಎಟಿಎಂ, ಎಫ್‌ಡಿ, ಕ್ರೆಡಿಟ್ ಕಾರ್ಡ್, ಎಲ್​ಪಿಜಿ, ಮ್ಯೂಚುವಲ್ ಫಂಡ್ ಹೊಸ ನಿಯಮಗಳು

ಅಕ್ಟೋಬರ್ 1 ರಿಂದ ಬ್ಯಾಂಕಿಂಗ್, ಹೂಡಿಕೆ, ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಮಹತ್ವದ ನಿಯಮ ಬದಲಾವಣೆಗಳು ಜಾರಿಯಾಗಲಿವೆ. ಎಸ್‌ಬಿಐ ಎಟಿಎಂ ಶುಲ್ಕ, ಎಫ್‌ಡಿ ಬಡ್ಡಿ ದರ, ಮ್ಯೂಚುವಲ್ ಫಂಡ್ ನಾಮಿನೇಷನ್, ಕ್ರೆಡಿಟ್ ಕಾರ್ಡ್ ನಿಯಮಗಳು, ಯುಪಿಐ ಪಾವತಿ ಮತ್ತು ಎಲ್‌ಪಿಜಿ ಸಬ್ಸಿಡಿ ಕುರಿತ ಬದಲಾವಣೆಗಳು ಸಾರ್ವಜನಿಕರ ದೈನಂದಿನ ಹಣಕಾಸು ವಹಿವಾಟುಗಳ ಮೇಲೆ ನೇರ ಪರಿಣಾಮ ಬೀರಲಿವೆ. ನಷ್ಟ ತಪ್ಪಿಸಲು ಗ್ರಾಹಕರು ಈ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಅತಿಮುಖ್ಯ.

ಅಕ್ಟೋಬರ್ 2ರಂದು ‘ನೋ ಯುಪಿಐ ಡೇ’; ಅಂಗಡಿಗಳಿಂದ ಒಂದು ದಿನ ಯುಪಿಐ ಪೇಮೆಂಟ್ ಬಹಿಷ್ಕಾರ

ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ ವಿಧಿಸುವುದನ್ನು ವಿರೋಧಿಸಿ ಮೊಬೈಲ್ ರೀಟೇಲರ್ಸ್ ಸಂಸ್ಥೆ ಅ. 2ರಂದು ‘ನೋ ಯುಪಿಐ ಡೇ’ ಗೆ ಕರೆ ನೀಡಿದೆ. ಅಖಿಲ ಭಾರತ ಕನ್ಸೂಮರ್ ಪ್ರಾಡಕ್ಟ್ ಡಿಸ್ಟ್ರಿಬ್ಯೂಟರ್ಸ್ ಫೆಡರೇಶನ್ ಸಂಸ್ಥೆಯೂ ಈ ಪ್ರತಿಭಟನೆಗೆ ಬೆಂಬಲ ನೀಡಿದೆ. ದೇಶಾದ್ಯಂತ ಹಲವು ರೀಟೇಲ್ ಅಂಗಡಿಗಳು ಈ ಶುಕ್ರವಾರ ಯುಪಿಐ ಪೇಮೆಂಟ್ ಸ್ವೀಕರಿಸುವುದಿಲ್ಲ ಎಂದು ಹೇಳಲಾಗಿದೆ.

ಯುಪಿಐ ಪೇಮೆಂಟ್​ಗೆ ಎಂಡಿಆರ್ ಶುಲ್ಕ; ತಡೆ ನೀಡಲು ಸುಪ್ರೀಂಕೋರ್ಟ್ ನಕಾರ; ವಿವರಣೆ ಕೋರಿ ಸರ್ಕಾರಕ್ಕೆ ನೋಟೀಸ್

ನಿರ್ದಿಷ್ಟ ಯುಪಿಐ ಪಾವತಿಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಅಥವಾ ಎಂಡಿಆರ್ ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರವು ಕೋರ್ಟ್ ಕಟಕಟೆಯಲ್ಲಿ ವಿಚಾರಣೆ ಎದುರಿಸುತ್ತಿದೆ. ಶುಲ್ಕ ಜಾರಿಯಾಗದಂತೆ ತಡೆ ನೀಡಲು ಸುಪ್ರೀಂ ನ್ಯಾಯಪೀಠ ನಿರಾಕರಿಸಿದೆ. ವಕೀಲ ಅಂಜನ್ ದತ್ತಾ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಎಂಡಿಆರ್ ಶುಲ್ಕದ ಅಧಿಕೃತತೆಯನ್ನು ಪ್ರಶ್ನಿಸಿದ್ದರು. ಇದೇ ವೇಳೆ, ನ್ಯಾಯಾಲಯವು ಸರ್ಕಾರದಿಂದ ವಿವರಣೆ ಕೋರಿ ನೋಟೀಸ್ ನೀಡಿದೆ.

ಗಾಂಧಿ ಜಯಂತಿಯಂದು ‘ನೋ ಯುಪಿಐ ಡೇ’ ಕರೆ ನೀಡಿರುವ ಸುದ್ದಿ ಸುಳ್ಳು: ವರ್ತಕರ ಒಕ್ಕೂಟ ಸ್ಪಷ್ಟನೆ

ಅಕ್ಟೋಬರ್ 2ರಂದು ದೇಶಾದ್ಯಂತ 'ನೋ ಯುಪಿಐ ಡೇ' (No UPI Day) ಆಚರಿಸಲು ಕರೆ ನೀಡಲಾಗಿದೆ ಎಂಬ ವರದಿಗಳನ್ನು ಪ್ರಮುಖ ವರ್ತಕರ ಒಕ್ಕೂಟ 'ಸಿಎಐಟಿ' ತೀವ್ರವಾಗಿ ನಿರಾಕರಿಸಿದೆ. ಗ್ರಾಹಕರು ಮತ್ತು ವರ್ತಕರಿಗೆ ಪಾರದರ್ಶಕ ವ್ಯವಸ್ಥೆಯಾಗಿರುವ ಯುಪಿಐ ಅನ್ನು ತಾನು ಬೆಂಬಲಿಸುತ್ತಾ ಬಂದಿರುವುದಾಗಿ ಅದು ಹೇಳಿದೆ. ಸುಳ್ಳು ವರದಿಗಳು, ಎಂಡಿಆರ್ (MDR) ಶುಲ್ಕ ವಿವಾದ ಮತ್ತು ಸತ್ಯಾಸತ್ಯತೆಯ ವಿವರಗಳು ಇಲ್ಲಿದೆ.

‘ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ’; ಕಾಂಗ್ರೆಸ್​​ಗೆ ಪ್ರಲ್ಹಾದ್ ಜೋಶಿ ತಿರುಗೇಟು

ಯುಪಿಐ ವ್ಯವಸ್ಥೆ ಜಾರಿಗೆ ತರಲು ಮತ್ತು ಅದನ್ನು ಜನರಿಗೆ ಅಭ್ಯಾಸ ಮಾಡಿಸಲು ಸರ್ಕಾರ ಸಾವಿರಾರು ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ ಎಂದು ಅವರು ಸ್ಪಷ್ಟಪಡಿಸಿದರು. ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಗಳು ಆಧಾರರಹಿತ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಯುಪಿಐ ವಹಿವಾಟುಗಳಲ್ಲಿ ವಿಧಿಸಲಾಗುವ ಶುಲ್ಕದ ಬಗ್ಗೆ ಮಾತನಾಡಿದ ಅವರು, 2000 ರೂ.ವರೆಗಿನ ವಹಿವಾಟುಗಳಿಗೆ ಮತ್ತು ಬೀದಿಬದಿ ವ್ಯಾಪಾರಸ್ಥರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಕೇವಲ 0.04% ಶುಲ್ಕವು ದೊಡ್ಡ ಪ್ರಮಾಣದ ವಹಿವಾಟುಗಳನ್ನು ನಡೆಸುವ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇದರಿಂದ 96% ವಹಿವಾಟುದಾರರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯುಪಿಐ ಮೇಲೆ ಎಂಡಿಆರ್ ಶುಲ್ಕ ವಿಧಿಸುತ್ತಿರುವುದು ಅಮೆರಿಕನ್ ಕ್ರೆಡಿಟ್ ಕಾರ್ಡ್ ಕಂಪನಿಗಳ ಒತ್ತಡದಿಂದಲಾ? ಸರ್ಕಾರದ ಸ್ಪಷ್ಟನೆ ಇದು

ಯುಪಿಐ ಪಾವತಿಗಳಿಗೆ ಎಂಡಿಆರ್ ವಿಧಿಸುವ ನಿರ್ಧಾರಕ್ಕೆ ಅಮೆರಿಕನ್ ಕ್ರೆಡಿಟ್ ಕಾರ್ಡ್ ಕಂಪನಿಗಳ ಒತ್ತಡ ಕಾರಣ ಎನ್ನುವ ವಿಪಕ್ಷಗಳ ಆರೋಪವನ್ನು ಸರ್ಕಾರ ತಳ್ಳಿ ಹಾಕಿದೆ. ಈ ಆರೋಪಗಳಲ್ಲಿ ಲವಶೇಷದಷ್ಟೂ ಹುರುಳಿಲ್ಲ. ದೇಶೀಯ ಯುಪಿಐ ಇಕೋಸಿಸ್ಟಂ ಬಲಪಡಿಸಲು ಎಂಡಿಆರ್ ಶುಲ್ಕ ಕ್ರಮ ತರಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಎಂಡಿಆರ್ ಶುಲ್ಕದ ಮೇಲೆ ಜಿಎಸ್​ಟಿ ವಿಧಿಸುವ ಸುದ್ದಿಯನ್ನೂ ನಿರಾಕರಿಸಿದೆ.

UPI ಪಾವತಿ ಮೇಲಿನ MDR ಶುಲ್ಕ: ನಿರ್ಧಾರ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಮೂಲಗಳ ಸ್ಪಷ್ಟನೆ

ಗ್ರಾಹಕರಿಂದ ವ್ಯಾಪಾರಿಗಳಿಗೆ ಮಾಡಲಾಗುವ ಯುಪಿಐ ಪಾವತಿಗೆ ಎಂಡಿಆರ್ ವಿಧಿಸಲು ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 15ರಿಂದ ಎಂಡಿಆರ್ ನಿಯಮಗಳು ಜಾರಿಗೆ ಬರಲಿವೆ. ಸರ್ಕಾರದ ನಡೆಯನ್ನು ವಿಪಕ್ಷಗಳು ಕಟುವಾಗಿ ಟೀಕಿಸಿವೆ. ಆದರೆ, ಈ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಆಲೋಚನೆ ಸರ್ಕಾರಕ್ಕೆ ಇಲ್ಲ ಎಂದು ಮೂಲಗಳು ಹೇಳುತ್ತಿವೆ.

‘ಟ್ರಂಪ್ ಮುಂದೆ ಶರಣಾಗಬೇಡಿ’; ಯುಪಿಐ ತೆರಿಗೆಗೆ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

2,000 ರೂ.ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಶೇಕಡಾ 0.4ರಷ್ಟು 'ಮರ್ಚೆಂಟ್ ಡಿಸ್ಕೌಂಟ್ ರೇಟ್' ವಿಧಿಸುವ ಕೇಂದ್ರ ಸರ್ಕಾರದ ನೂತನ ಯುಪಿಐ ನಿಯಮಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಕೆಲವು ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ ಶುಲ್ಕ ವಿಧಿಸಲು ಅವಕಾಶ ನೀಡುವ ಸರ್ಕಾರದ ಹೊಸ ನೀತಿಯ ವಿರುದ್ಧ ಕಿಡಿಕಾರಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಅಮೆರಿಕ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮುಂದೆ 'ಸಂಪೂರ್ಣ ಶರಣಾಗಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.

ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ; ನಾಲ್ಕು ಭಾಗವಾಗಿ ಹಂಚಿಕೆ; ಯಾರಿಗೆ ಎಷ್ಟು ಆದಾಯ ಸಿಗುತ್ತೆ? ಇಲ್ಲಿದೆ ವಿವರ

ಅಕ್ಟೋಬರ್ 16ರಿಂದ ಯುಪಿಐ ಪಾವತಿಗಳಿಗೆ ಎಂಡಿಆರ್ ನಿಯಮಗಳು ಜಾರಿಗೆ ಬರುತ್ತವೆ. 2,000 ರೂಗಿಂತ ಹೆಚ್ಚಿನ ಮೊತ್ತದ ಯುಪಿಐ ಪೇಮೆಂಟ್ ಸ್ವೀಕರಿಸುವ ವ್ಯಾಪಾರಿಗಳು ಶೇ. 0.4ರಷ್ಟು ಎಂಡಿಆರ್ ತೆರಬೇಕಾಗುತ್ತದೆ. ಈ ಎಂಡಿಆರ್ ಹಣವು ಗ್ರಾಹಕರ ಬ್ಯಾಂಕ್ ಅಕೌಂಟ್, ವ್ಯಾಪಾರಿಯ ಬ್ಯಾಂಕ್ ಅಕೌಂಟ್, ಪೇಮೆಂಟ್ ಆ್ಯಪ್ ಮತ್ತು ಪಾರ್ಟ್ನರ್ ಬ್ಯಾಂಕ್ ಈ ನಾಲ್ಕು ಭಾಗಗಳಾಗಿ ಹಂಚಿಕೆಯಾಗುತ್ತದೆ.

ಯುಪಿಐಗೆ ಎಂಡಿಆರ್: ಉಚಿತ ಟ್ರಾನ್ಸಾಕ್ಷನ್​ಗಳ್ಯಾವುವು, ಶುಲ್ಕ ಇರುವಂಥವು ಯಾವುವು? ಇಲ್ಲಿದೆ ಡೀಟೇಲ್ಸ್

ಅಕ್ಟೋಬರ್ 15ರಿಂದ ಯುಪಿಐ ವಹಿವಾಟುಗಳಿಗೆ ಎಂಡಿಆರ್ ಶುಲ್ಕ ನಿಯಮಗಳು ಜಾರಿಗೆ ಬರುತ್ತವೆ. ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ಯುಪಿಐ ಪೇಮೆಂಟ್​ಗಳು, ಹಾಗು ಗ್ರಾಹಕರಿಂದ ವರ್ತಕರಿಗೆ ಮಾಡಲಾಗುವ ₹2,000 ವರೆಗಿನ ಪೇಮೆಂಟ್​ಗಳಿಗೆ ಎಂಡಿಆರ್ ಶುಲ್ಕ ಇರುವುದಿಲ್ಲ. ₹2,000 ಮೇಲ್ಪಟ್ಟ ಪೇಮೆಂಟ್​ಗಳನ್ನು ಪಡೆಯುವ ವ್ಯಾಪಾರಿಗಳಿಗೆ ಎಂಡಿಆರ್ ಶುಲ್ಕ ಅನ್ವಯ ಆಗುತ್ತದೆ.

ಯುಪಿಐ ಟ್ರಾನ್ಸಾಕ್ಷನ್​​ಗೂ ತೆರಿಗೆಗೆ ಕಾಂಗ್ರೆಸ್​​ ವಿರೋಧ: ಇದು ದೇಶದ ಜನರಿಗೆ ಮಾಡಿದೆ ಮೋಸ ಎಂದ ಸುರ್ಜೇವಾಲ

ಯುಪಿಐ ವಹಿವಾಟಿಗೆ ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮೋಸ ಎಂದು ಕಿಡಿಕಾರಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯ ನಾಯಕರ ಮೇಲಿನ ಇಡಿ ದಾಳಿಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಇನ್ನು ಸಿಎಂ ಡಿಕೆಶಿ ನೇತೃತ್ವದ ಸಚಿವ ಸಂಪುಟದಲ್ಲಿ ಮಹಿಳಾ ಶಾಸಕರಿಗೆ ಸ್ಥಾನ ನೀಡದ ವಿಚಾರ ಸಂಬಂಧವೂ ಮಾತನಾಡಿರುವ ಸುರ್ಜೇವಾಲ, ನನ್ನದೇ ತಪ್ಪಿಂದ ಸಚಿವ ಸಂಪುಟದಲ್ಲಿ ಮಹಿಳಾ ಮಂತ್ರಿ ಇಲ್ಲ ಎಂದು ತಿಳಿಸಿದ್ದಾರೆ.

ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್