AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಪಾರಿಗಳಿಗೆ ‘ಯುಪಿಐ ವ್ಯಾಪಾರ ಸಕ್ಷಮ್’ ಸ್ಕೀಮ್​ಗೆ ಚಾಲನೆ ನೀಡಿದ ಎನ್​ಪಿಸಿಐ; ಬ್ಯಾಂಕುಗಳಿಗೆ ಸಿಗಲಿದೆ ಪ್ರೋತ್ಸಾಹಧನ

ದೇಶಾದ್ಯಂತ ಸಣ್ಣ ವ್ಯಾಪಾರಿಗಳಲ್ಲಿ ಯುಪಿಐ (UPI) ಸ್ವೀಕೃತಿಯನ್ನು ವಿಸ್ತರಿಸುವ ಉದ್ದೇಶದಿಂದ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (NPCI) 'ಯುಪಿಐ ವ್ಯಾಪಾರ ಸಕ್ಷಮ್' ಯೋಜನೆಯನ್ನು (UPI Vyapaar Saksham Scheme) ಆರಂಭಿಸಿದೆ. ವ್ಯಾಪಾರಿಗಳ ಸ್ಥಳದಲ್ಲಿ ಕ್ಯೂಆರ್ ಕೋಡ್ ಮತ್ತು ಸೌಂಡ್‌ಬಾಕ್ಸ್ ಅಳವಡಿಕೆಗೆ ಬ್ಯಾಂಕ್‌ಗಳಿಗೆ ಪ್ರೋತ್ಸಾಹ ಧನ ನೀಡಲಿದೆ.

ವ್ಯಾಪಾರಿಗಳಿಗೆ ‘ಯುಪಿಐ ವ್ಯಾಪಾರ ಸಕ್ಷಮ್’ ಸ್ಕೀಮ್​ಗೆ ಚಾಲನೆ ನೀಡಿದ ಎನ್​ಪಿಸಿಐ; ಬ್ಯಾಂಕುಗಳಿಗೆ ಸಿಗಲಿದೆ ಪ್ರೋತ್ಸಾಹಧನ
ಯುಪಿಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 15, 2026 | 7:50 PM

Share

ನವದೆಹಲಿ, ನವೆಂಬರ್ 15: ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳು ಡಿಜಿಟಲ್ ಪಾವತಿಗಳನ್ನು ಸುಲಭವಾಗಿ ಸ್ವೀಕರಿಸಲು ಅನುಕೂಲವಾಗುವಂತೆ ಎನ್‌ಪಿಸಿಐ (NPCI) ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ಇದು ಯುಪಿಐ ವ್ಯಾಪಾರ ಸಕ್ಷಮ ಯೋಜನೆ. ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಮತ್ತು ಯುಪಿಐ ಸೌಂಡ್​ಬಾಕ್ಸ್ ಅಲರ್ಟ್ ಸಿಸ್ಟಂ ಅನ್ನು ಹಾಕಿಸುವ ಬ್ಯಾಂಕುಗಳಿಗೆ ಪ್ರೋತ್ಸಾಹ ಧನ ಒದಗಿಸುವ ಯೋಜನೆ ಇದು.

ವಾರ್ಷಿಕ 40 ಲಕ್ಷ ರೂವರೆಗೆ ವಹಿವಾಟು ನಡೆಸುವ ವ್ಯಾಪಾರಿಗಳು ಈ ಯೋಜನೆಯಡಿ ಅರ್ಹರಾಗಿದ್ದು, ವಿಶೇಷವಾಗಿ ಟೈರ್-3 ರಿಂದ ಟೈರ್-6 ನಗರಗಳ ವ್ಯಾಪಾರಿಗಳಿಗೆ (ಪಿಎಂ ಸ್ವನಿಧಿ ಮತ್ತು ಪಿಎಂ ವಿಶ್ವಕರ್ಮ ಯೋಜನೆಯಡಿ ಬರುವವರೂ ಸೇರಿದಂತೆ) ಇದು ಹೆಚ್ಚಿನ ನೆರವಾಗಲಿದೆ.

ಬ್ಯಾಂಕ್‌ಗಳಿಗೆ ಪ್ರೋತ್ಸಾಹಧನ

ಹೊಸ ವ್ಯಾಪಾರಿಗಳನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ತರುವ ಬ್ಯಾಂಕ್‌ಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಪ್ರತಿ ಹೊಸ ಭೌತಿಕ ಕ್ಯೂಆರ್ ಕೋಡ್ (QR code) ಅಳವಡಿಕೆಗೆ 300 ರೂ ಹಾಗೂ ಸೌಂಡ್‌ಬಾಕ್ಸ್ (Soundbox) ವಿತರಣೆಗೆ 750 ರೂವರೆಗೆ ಪ್ರೋತ್ಸಾಹಧನ ಸಿಗಲಿದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಭಾರತದ ಒಟ್ಟು ರಫ್ತು 90 ಬಿಲಿಯನ್ ಡಾಲರ್​​ಗೆ ಏರಿಕೆ; 20 ಬಿಲಿಯನ್ ಡಾಲರ್​ಗೆ ತಗ್ಗಿದ ಟ್ರೇಡ್ ಡೆಫಿಸಿಟ್

ಯುಪಿಐ ಎಂಡಿಆರ್ ಶುಲ್ಕಗಳ ಮೂಲಕ ಪಡೆದ ಹಣದಲ್ಲಿ ಶೇ. 5ರಷ್ಟನ್ನು ಈ ಸ್ಕೀಮ್​ಗೆ ಫಂಡಿಂಗ್ ಆಗಿ ನೀಡಲಾಗುತ್ತದೆ. ಈ ನಿಧಿಯನ್ನು ಮುಖ್ಯವಾಗಿ ಹೊಸ ವ್ಯಾಪಾರಿಗಳ ಸೇರ್ಪಡೆ, ಯುಪಿಐ ವಹಿವಾಟಿನ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಡಿಜಿಟಲ್ ಮೂಲಸೌಕರ್ಯ ವೃದ್ಧಿಗೆ ಬಳಸಲಾಗುತ್ತದೆ.

ಇಲ್ಲಿ ಬ್ಯಾಂಕುಗಳು ಹೊಸ ವ್ಯಾಪಾರಿಗಳನ್ನು ಗುರುತಿಸಿ ಅವರ ಅಂಗಡಿಯಲ್ಲಿ ಕ್ಯೂಆರ್ ಕೋಡ್ ಕೊಟ್ಟು, ಸೌಂಡ್ ಬಾಕ್ಸ್ ಸ್ಥಾಪಿಸಬೇಕು. ಆ ವರ್ತಕ ಮೂರು ತಿಂಗಳಲ್ಲಿ ಎರಡು ತಿಂಗಳು 25 ಅರ್ಹ ವಹಿವಾಟು ಪೂರ್ಣಗೊಳಿಸಬೇಕು. ಆ ವಹಿವಾಟುಗಳ ಒಟ್ಟು ಮೌಲ್ಯ 5,000 ರೂ ಆಗಿರಬೇಕು. ಅಂದರೆ, ಒಂದು ತಿಂಗಳಲ್ಲಿ 25 ಟ್ರಾನ್ಸಾಕ್ಷನ್​ಗಳು, ಹಾಗು ಒಟ್ಟಾರೆ ವಹಿವಾಟು ಮೌಲ್ಯ 5,000 ರೂ ಆಗಿರಬೇಕು. ಈ ರೀತಿ ಒಂದು ತ್ರೈಮಾಸಿಕ ಅವಧಿಯಲ್ಲಿ ಎರಡು ತಿಂಗಳಾದರೂ ಮಾಡಬೇಕು. ಹಾಗಿದ್ದಾಗ ಬ್ಯಾಂಕುಗಳಿಗೆ ಕ್ಯೂಆರ್ ಕೋಡ್ ಮತ್ತು ಸೌಂಡ್ ಬಾಕ್ಸ್​ಗಳಿಗೆ ಇನ್ಸೆಂಟಿವ್ ದೊರಕುವುದು.

ಇನ್ಸೆಂಟಿವ್​ಗಳನ್ನು ತ್ರೈಮಾಸಿಕವಾಗಿ ಲೆಕ್ಕ ಹಾಕಲಾಗುತ್ತದೆ. ವ್ಯಾಪಾರಿಯ ಜಾಗ, ಯೂನಿಕ್ ಐಡೆಂಟಿಫಯರ್, ಅಳವಡಿತ ಸಾಧನಗಳ ವಿವರಗಳನ್ನು ಬ್ಯಾಂಕು ಸಲ್ಲಿಸಬೇಕು. ಕ್ಲೇಮ್ ಮಾಡಿ 30 ದಿನದೊಳಗೆ ಅದನ್ನು ಸೆಟಲ್ ಮಾಡಲಾಗುತ್ತದೆ.

ಇದನ್ನೂ ಓದಿ: ಆಗಸದಿಂದ ವೇಗವಾಗಿ ಬಂದ ಸ್ಟಾರ್​​ಶಿಪ್ ರಾಕೆಟ್ ಅನ್ನು ಹಿಡಿದು ಹೊಸ ಇತಿಹಾಸ ಸೃಷ್ಟಿಸಿದ ಸ್ಪೇಸ್​ಎಕ್ಸ್

ಬ್ಯಾಂಕುಗಳಿಗೆ ಇನ್ಸೆಂಟಿವ್ ಎಷ್ಟು ಸಿಗುತ್ತದೆ ಎನ್ನುವುದಕ್ಕೆ ಒಂದು ನಿದರ್ಶನ ನೀಡುವುದಾದರೆ: ಒಂದು ಬ್ಯಾಂಕು 1,000 ವ್ಯಾಪಾರಿಗಳಿಗೆ 1,000 ಕ್ಯೂಆರ್ ಕೋಡ್​ಗಳನ್ನು, ಮತ್ತು 200 ಸೌಂಡ್ ಬಾಕ್ಸ್​ಗಳನ್ನು ಒದಗಿಸುತ್ತದೆ ಎಂದಿಟ್ಟುಕೊಳ್ಳೋಣ. ಆಗ ಆ ಎಲ್ಲಾ ವ್ಯಾಪಾರಿಗಳು ಅರ್ಹ ಟ್ರಾನ್ಸಾಕ್ಷನ್ ಮಟ್ಟ ಸಾಧಿಸುತ್ತಾರೆ ಎಂದಾದಲ್ಲಿ, ಬ್ಯಾಂಕಿಗೆ 4.5 ಲಕ್ಷ ರೂ ಪ್ರೋತ್ಸಾಹ ಧನ ಸಿಗುತ್ತದೆ.

ಲಕ್ಷಾಂತರ ಹೊಸ ಸಾಧನಗಳ ಗುರಿ

ಪ್ರತಿವರ್ಷ ಸುಮಾರು 60 ಲಕ್ಷದಿಂದ 1 ಕೋಟಿ ಹೊಸ ಕ್ಯೂಆರ್ ಕೋಡ್‌ಗಳು ಹಾಗೂ 5 ರಿಂದ 10 ಲಕ್ಷ ಹೊಸ ಸೌಂಡ್‌ಬಾಕ್ಸ್‌ಗಳನ್ನು ತಳಮಟ್ಟದಲ್ಲಿ ತಲುಪಿಸುವ ಗುರಿಯನ್ನು ಎನ್‌ಪಿಸಿಐ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Sun, 15 November 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ