AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್​ನಲ್ಲಿ ಭಾರತದ ಒಟ್ಟು ರಫ್ತು 90 ಬಿಲಿಯನ್ ಡಾಲರ್​​ಗೆ ಏರಿಕೆ; 20 ಬಿಲಿಯನ್ ಡಾಲರ್​ಗೆ ತಗ್ಗಿದ ಟ್ರೇಡ್ ಡೆಫಿಸಿಟ್

ಅಕ್ಟೋಬರ್ ತಿಂಗಳಲ್ಲಿ ಭಾರತದ ಸರಕು ಮತ್ತು ಸೇವಾ ರಫ್ತುಗಳು ಶೇ. 29.9ರಷ್ಟು ಭಾರಿ ಏರಿಕೆಯಾಗಿ ದಾಖಲೆಯ 89.99 ಬಿಲಿಯನ್ ಡಾಲರ್‌ ತಲುಪಿದೆ. ಒಟ್ಟು ಟ್ರೇಡ್ ಡೆಫಿಸಿಟ್ ಅಥವಾ ವ್ಯಾಪಾರ ಕೊರತೆ 25 ಬಿಲಿಯನ್ ಡಾಲರ್ ಇದ್ದದ್ದು 20 ಬಿಲಿಯನ್ ಡಾಲರ್​ಗೆ ಇಳಿದಿದೆ. ಸರ್ವಿಸ್ ಸೆಕ್ಟರ್​ನಲ್ಲಿ ಆಮದಿಗಿಂತ ಎರಡು ಪಟ್ಟು ರಫ್ತು ಆಗಿರುವುದು ಗಮನಾರ್ಹ.

ಅಕ್ಟೋಬರ್​ನಲ್ಲಿ ಭಾರತದ ಒಟ್ಟು ರಫ್ತು 90 ಬಿಲಿಯನ್ ಡಾಲರ್​​ಗೆ ಏರಿಕೆ; 20 ಬಿಲಿಯನ್ ಡಾಲರ್​ಗೆ ತಗ್ಗಿದ ಟ್ರೇಡ್ ಡೆಫಿಸಿಟ್
ಭಾರತದ ರಫ್ತುImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 15, 2026 | 1:36 PM

Share

ನವದೆಹಲಿ, ನವೆಂಬರ್ 15: ಅಕ್ಟೋಬರ್ ತಿಂಗಳಲ್ಲಿ ಭಾರತದ ಒಟ್ಟು ರಫ್ತು (ಸರಕು ಹಾಗೂ ಸೇವೆಗಳು ಸೇರಿದಂತೆ) ಶೇ. 29.9ರಷ್ಟು ಹೆಚ್ಚಳಗೊಂಡಿದೆ. ಏರಿಕೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಈ ದಾಖಲೆಯ ಏರಿಕೆಯೊಂದಿಗೆ ಭಾರತದ ಅಕ್ಟೋಬರ್ ತಿಂಗಳ ಒಟ್ಟು ರಫ್ತು 89.99 ಬಿಲಿಯನ್ ಡಾಲರ್​ ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 69.27 ಬಿಲಿಯನ್ ಡಾಲರ್ ಇತ್ತು.

ಇದರಲ್ಲಿ ಸರಕು ರಫ್ತು (Merchandise exports) ಸುಮಾರು 49.47 ಬಿಲಿಯನ್ ಡಾಲರ್ ಹಾಗೂ ಸೇವಾ ರಫ್ತು (Services exports) ಸುಮಾರು 40.51 ಬಿಲಿಯನ್ ಡಾಲರ್ ತಲುಪಿದೆ.

ಕಡಿಮೆಗೊಂಡ ವ್ಯಾಪಾರ ಕೊರತೆ

ರಫ್ತಿನಲ್ಲಿ ಉಂಟಾದ ಈ ಗಮನಾರ್ಹ ಏರಿಕೆಯಿಂದಾಗಿ ಭಾರತದ ಒಟ್ಟು ವ್ಯಾಪಾರ ಕೊರತೆಯು (Trade Deficit Narrows) ಇಳಿಕೆಯಾಗಿದ್ದು, ಅಕ್ಟೋಬರ್‌ನಲ್ಲಿ ಟ್ರೇಡ್ ಡೆಫಿಸಿಟ್ 20.09 ಬಿಲಿಯನ್ ಡಾಲರ್​​ಗೆ ತಗ್ಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇದು 25.15 ಬಿಲಿಯನ್ ಡಾಲರ್ ಇತ್ತು.

ಇದನ್ನೂ ಓದಿ: ಆಗಸದಿಂದ ವೇಗವಾಗಿ ಬಂದ ಸ್ಟಾರ್​​ಶಿಪ್ ರಾಕೆಟ್ ಅನ್ನು ಹಿಡಿದು ಹೊಸ ಇತಿಹಾಸ ಸೃಷ್ಟಿಸಿದ ಸ್ಪೇಸ್​ಎಕ್ಸ್

ಒಂದೆಡೆ ಭಾರತದ ಒಟ್ಟು ರಫ್ತು 89.99 ಬಿಲಿಯನ್ ಡಾಲರ್ ಇದ್ದರೆ, ಒಟ್ಟು ಆಮದು 94.42 ಬಿಲಿಯನ್ ಡಾಲರ್​ನಿಂದ 110.07 ಬಿಲಿಯನ್ ಡಾಲರ್​ಗೆ ಏರಿದೆ. ಇದರಿಂದಾಗಿ ಆಮದು ಮತ್ತು ರಫ್ತು ನಡುವಿನ ಅಂತರವಾಗಿರುವ ಟ್ರೇಡ್ ಡೆಫಿಸಿಟ್ 20.09 ಬಿಲಿಯನ್ ಡಾಲರ್ ಆಗಿದೆ.

ಟ್ರೇಡ್ ಡೆಫಿಸಿಟ್ ಇಳಿಕೆಯಲ್ಲಿ ಸರ್ವಿಸ್ ಸೆಕ್ಟರ್ ಪಾತ್ರ ಮಹತ್ವದ್ದು

ಭಾರತದ ಸರ್ವಿಸ್ ಸೆಕ್ಟರ್​ನಿಂದ ಅಕ್ಟೋಬರ್​ನಲ್ಲಿ 40.51 ಬಿಲಿಯನ್ ಡಾಲರ್​ನಷ್ಟು ರಫ್ತಾಗಿದೆ. ಇನ್ನು, ಆಮದು ಪ್ರಮಾಣ 20.72 ಬಿಲಿಯನ್ ಡಾಲರ್ ಇದೆ. ಈ ಸೆಕ್ಟರ್​ನಲ್ಲಿ ಆಮದಿಗಿಂತ ಎರಡು ಪಟ್ಟು ರಫ್ತು ಕಂಡಿದೆ ಭಾರತ.

ಇದನ್ನೂ ಓದಿ: ಚೆಕ್‌ನಲ್ಲಿ ಅಮೌಂಟ್‌ ಪಕ್ಕ ಓನ್ಲಿ ಎಂದು ಬರೆಯುವುದರ ಹಿಂದಿದೆ ಈ ಕಾರಣ

ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪ್ರಾಬಲ್ಯ

ಭಾರತದ ಒಟ್ಟು 50 ಪ್ರಮುಖ ರಫ್ತು ಗಮ್ಯಸ್ಥಾನಗಳಲ್ಲಿ (Export destinations) 43 ದೇಶಗಳಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಾಗಿದ್ದು, ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ಭಾರತೀಯ ಉದ್ಯಮಗಳು ಬಲವಾದ ಸಾಧನೆ ತೋರಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More