AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆಕ್‌ನಲ್ಲಿ ಅಮೌಂಟ್‌ ಪಕ್ಕ ಓನ್ಲಿ ಎಂದು ಬರೆಯುವುದರ ಹಿಂದಿದೆ ಈ ಕಾರಣ

ಸಾಮಾನ್ಯವಾಗಿ ನೀವು ಚೆಕ್ ಬುಕ್ ಗಮನಿಸಿದರೆ ಮೊತ್ತದ ಬಳಿಕ ಓನ್ಲಿ ಎಂದು ಬರೆಯಲಾಗುತ್ತದೆ. ಹೆಚ್ಚಿನವರು ಇದನ್ನು ಬ್ಯಾಂಕಿನ ಔಪಚಾರಿಕತೆ ಎಂದು ಭಾವಿಸುತ್ತಾರೆ. ಆದರೆ ಈ ರೀತಿ ಬರೆಯುವುದರ ಹಿಂದಿನ ಕಾರಣದ ಬಗ್ಗೆ ಯಾರು ಯೋಚಿಸುವುದಿಲ್ಲ. ಈ ಓನ್ಲಿ ಎಂಬ ಪದ ಬಳಕೆಯ ಮೂಲ ಉದ್ದೇಶವೇ ಹಣಕಾಸಿನ ವಂಚನೆ ಹಾಗೂ ತಿದ್ದುಪಡಿಯನ್ನು ತಡೆಯುವುದಾಗಿದೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಚೆಕ್‌ನಲ್ಲಿ ಅಮೌಂಟ್‌ ಪಕ್ಕ ಓನ್ಲಿ ಎಂದು ಬರೆಯುವುದರ ಹಿಂದಿದೆ ಈ ಕಾರಣ
ಸಾಂದರ್ಭಿಕ ಚಿತ್ರImage Credit source: hindi.trendingnews.co.in
ಸಾಯಿನಂದಾ
|

Updated on: Nov 14, 2026 | 5:46 PM

Share

ಮುಖ್ಯಾಂಶಗಳು

  • ಚೆಕ್‌ನಲ್ಲಿ ಮೊತ್ತದ ಬಳಿಕ ಓನ್ಲಿ ಎಂದು ಬರೆಯಲಾಗುತ್ತದೆ
  • ಹೆಚ್ಚಿನವರು ಇದನ್ನು ಬ್ಯಾಂಕಿನ ಔಪಚಾರಿಕತೆ ಎಂದು ಭಾವಿಸುತ್ತಾರೆ
  • ಚೆಕ್‌ನಲ್ಲಿ ಅಮೌಂಟ್‌ ಪಕ್ಕ ಓನ್ಲಿ ಎಂದು ಬರೆಯುವುದರ ಹಿಂದಿದೆ ಈ ಕಾರಣ

ಇತ್ತೀಚೆಗಿನ ದಿನಗಳಲ್ಲಿ ಯುಪಿಐ, ನೆಟ್ ಬ್ಯಾಂಕಿಂಗ್ (net banking) ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಆದರೆ, ದೊಡ್ಡ ವಹಿವಾಟುಗಳಿಗೆ ಚೆಕ್‌ಗಳನ್ನು ಬಳಸಲಾಗುತ್ತಿದೆ. ಆದರೆ ಚೆಕ್‌ನಲ್ಲಿ ಮೊತ್ತ ನಮೂದಿಸಿದ ಬಳಿಕ ಓನ್ಲಿ ಬರೆಯಲಾಗುತ್ತದೆ. ಈ ಪದವನ್ನು ಯಾಕೆ ಬರೆಯಲಾಗುತ್ತದೆ ಎಂದು ಒಮ್ಮೆಯಾದ್ರು ನೀವು ಯೋಚಿಸಿದ್ದೀರಾ?. ಆದರೆ ಹೀಗೆ ಬರೆಯುವುದರಿಂದ ಯಾರೂ ಮೊತ್ತವನ್ನು ಹೆಚ್ಚಿಸಲು ಆಗಲ್ಲ. ಪ್ರತಿಯೊಬ್ಬ ಗ್ರಾಹಕರು ತಮ್ಮ ಭದ್ರತೆಗಾಗಿ ಮೊತ್ತದ ಕೊನೆಗೆ ಓನ್ಲಿ ಎನ್ನುವ ಪದವನ್ನು ಬರೆಯುತ್ತಾರೆ.

ಚೆಕ್‌ನಲ್ಲಿ ಮೊತ್ತದ ಕೊನೆಗೆ ಓನ್ಲಿ ಪದ ಬರೆಯುವುದು ಯಾಕೆ?

ಸುರಕ್ಷತೆ: ಮೊತ್ತದ ಕೊನೆಗೆ ಓನ್ಲಿ ಬರೆಯಲೇಬೇಕು ಎಂಬ ಕಡ್ಡಾಯವಾದ ಕಾನೂನು ನಿಯಮವಿಲ್ಲ. ಆದರೆ ಈ ಪದ ಬಳಕೆಯು ವಂಚನೆ ಹಾಗೂ ತಿದ್ದುಪಡಿಗಳನ್ನು ತಡೆಯುತ್ತದೆ. ಸುರಕ್ಷತೆಗಾಗಿ ಈ ಓನ್ಲಿ ಎಂಬ ಪದವನ್ನು ಬರೆಯಲಾಗುತ್ತದೆ.

ಮೊತ್ತದ ಸ್ಪಷ್ಟತೆ: ಚೆಕ್‌ನಲ್ಲಿ ಮೊತ್ತದ ಬಳಿಕ ಓನ್ಲಿ ಎಂದು ಬರೆಯುವುದರಿಂದ ಬ್ಯಾಂಕ್ ಸಿಬ್ಬಂದಿಗೆ ಮೊತ್ತದ ಬಗ್ಗೆ ಯಾವುದೇ ಗೊಂದಲ ಉಂಟಾಗುವುದನ್ನು ತಡೆಯುತ್ತದೆ. ಅಂಕಿಗಳಲ್ಲಿ ಬರೆದ ಮೊತ್ತಕ್ಕೂ ಹಾಗೂ ಪದಗಳಲ್ಲಿ ಬರೆದ ಮೊತ್ತಕ್ಕೂ ಹೊಂದಾಣಿಕೆ ಇದೆಯೇ ಎಂದು ಇದು ತಿಳಿಸುತ್ತದೆ.

ಇದನ್ನೂ ಓದಿ: ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್​ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ

ಹೆಚ್ಚುವರಿ ಪದಗಳ ಸೇರ್ಪಡೆ ತಡೆಯಲು ಸಾಧ್ಯ: ಚೆಕ್‌ನಲ್ಲಿ ಮೊತ್ತದ ಕೊನೆಯಲ್ಲಿ ಓನ್ಲಿ ಬರೆಯದೇ ಹೋದರೆ ಬೇರೆಯವರು ಅಲ್ಲಿ ಹೆಚ್ಚುವರಿ ಪದಗಳನ್ನು ಸೇರಿಸಿ ಮೊತ್ತವನ್ನು ಬದಲಾಯಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಒಂದೇ ಒಂದು ಪದವು ಹೆಚ್ಚುವರಿ ಪದಗಳ ಸೇರ್ಪಡೆ ತಡೆಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More