AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ಪ್ರಮಾಣದ ಯುಪಿಐ ಶುಲ್ಕದಿಂದ ದೊಡ್ಡ ಪರಿಣಾಮ ಆಗುವುದಿಲ್ಲ: ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅಭಿಪ್ರಾಯ

ಯುಪಿಐಗೆ ಎಂಡಿಆರ್ ಶುಲ್ಕ ಹಾಕುವುದರಿಂದ ಒಟ್ಟಾರೆ ಯುಪಿಐ ವಹಿವಾಟು ಪ್ರಮಾಣದಲ್ಲಿ ದೊಡ್ಡ ವ್ಯತ್ಯಯವಾಗದು ಎಂದು ಆರ್​ಬಿಐ ಗವರ್ನರ್ ಹೇಳಿದ್ದಾರೆ. ಎಂಡಿಆರ್ ಶುಲ್ಕದಿಂದ ಯುಪಿಐ ವಹಿವಾಟು ಕಡಿಮೆ ಆಗುತ್ತದೆ ಎಂದು ವೈಯಕ್ತಿಕವಾಗಿ ತನಗೆ ಅನಿಸುವುದಿಲ್ಲ ಎಂದು ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. 2,000 ರೂ ಮೇಲ್ಪಟ್ಟ ಹಣ ಪಾವತಿಗೆ ಶೇ. 0.4ರ ಎಂಡಿಆರ್ ಶುಲ್ಕ ವಿಧಿಸುವ ಕ್ರಮ ಅ. 15ರಿಂದ ಜಾರಿಗೆ ಬರಲಿದೆ.

ಸಣ್ಣ ಪ್ರಮಾಣದ ಯುಪಿಐ ಶುಲ್ಕದಿಂದ ದೊಡ್ಡ ಪರಿಣಾಮ ಆಗುವುದಿಲ್ಲ: ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅಭಿಪ್ರಾಯ
ಸಂಜಯ್ ಮಲ್ಹೋತ್ರಾImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 07, 2026 | 4:52 PM

Share

ಮುಂಬೈ, ಅಕ್ಟೋಬರ್ 7: ಕೆಲ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ಸರ್ಕಾರದ ಕ್ರಮದಿಂದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ದುರ್ಬಲಗೊಳ್ಳಲಿದೆ ಎನ್ನುವ ಆತಂಕದ ಅಭಿಪ್ರಾಯಗಳನ್ನು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (Sanjay Malhotra) ತಳ್ಳಿಹಾಕಿದ್ದಾರೆ. ಎಂಡಿಆರ್ ಶುಲ್ಕದಿಂದ ಯುಪಿಐ ವಹಿವಾಟು ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದಿದ್ದಾರೆ.

‘ಸದ್ಯದ ಮಟ್ಟಿಗೆ, ಯುಪಿಐ ಟ್ರಾನ್ಸಾಕ್ಷನ್ ಪ್ರಮಾಣದಲ್ಲಿ ಇಳಿಕೆ ಆಗಬಹುದು ಅಂತ ಅನಿಸೋದಿಲ್ಲ. ವೈಯಕ್ತಿಕವಾಗಿ ಹೇಳುವುದಾದರೆ, ಸಣ್ಣ ಶುಲ್ಕದಿಂದ ವಹಿವಾಟುಗಳ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ’ ಎಂದು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ.

ಎಂಪಿಸಿ ಸಭೆ ಬಳಿಕ, ಆರ್​ಬಿಐ ಮುಖ್ಯ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಂಜಯ್ ಮಲ್ಹೋತ್ರಾ, ರೆಪೋ ದರ ಹೆಚ್ಚಿಸುವ ಪ್ರಮುಖ ಕ್ರಮ ಘೋಷಿಸಿದರು. ಅದಾದ ಬಳಿಕ ಮಾಧ್ಯಮದೊಂದಿಗೆ ಸಂವಾದ ನಡೆಸಿದ ಅವರು, ಯುಪಿಐ ಎಂಡಿಆರ್ ಶುಲ್ಕದ ಕುರಿತ ಪ್ರಶ್ನೆಗೆ ಉತ್ತರ ನೀಡುತ್ತಿದ್ದರು.

ಇದನ್ನೂ ಓದಿ: ಆರ್​ಬಿಐ ದರ ಹೆಚ್ಚಳದ ಬಳಿಕ ಫಿಕ್ಸೆಡ್ ಡೆಪಾಸಿಟ್ ದರ ಪರಿಷ್ಕರಣೆಯ ನಿರೀಕ್ಷೆ; ಠೇವಣಿ ದರ ಹೆಚ್ಚಿದರೆ ಎಷ್ಟು ಲಾಭ? ಇಲ್ಲಿದೆ ಡೀಟೇಲ್ಸ್

ಅಕ್ಟೋಬರ್ 15ರಿಂದ ಎಂಡಿಆರ್ ಶುಲ್ಕ ನೀತಿ ಜಾರಿ

ಯುಪಿಐ ಟ್ರಾನ್ಸಾಕ್ಷನ್ ಮೇಲೆ ಎಂಡಿಆರ್ ವಿಧಿಸುವ ಹೊಸ ಕ್ರಮ ಅ. 15ರಿಂದ ಜಾರಿಗೆ ಬರುತ್ತದೆ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಮಾಡಲಾಗುವ ಪೇಮೆಂಟ್ ಮೇಲೆ ಈ ಮುಂಚಿನಿಂದಲೂ ಎಂಡಿಆರ್ ಶುಲ್ಕ ವಿಧಿಸಲಾಗುತ್ತಿದೆ. ಬ್ಯಾಂಕುಗಳು ಹಾಗೂ ಪೇಮೆಂಟ್ ಪ್ರೋಸಸ್ ಮಾಡುವ ಕಂಪನಿಗಳು ವಸೂಲಿ ಮಾಡುವ ಶುಲ್ಕ ಇದು. ವರ್ತಕರಿಂದ ಈ ಶುಲ್ಕ ಪಡೆಯಲಾಗುತ್ತದೆ.

ಇದೇ ಮಾದರಿಯಲ್ಲಿ ಯುಪಿಐ ಪಾವತಿಗೂ ಎಂಡಿಆರ್ ಶುಲ್ಕ ವಿಧಿಸುವ ನಿರ್ಧಾರ ಮಾಡಲಾಗಿದೆ. 2,000 ರೂ ಮೇಲ್ಪಟ್ಟ ಪೇಮೆಂಟ್​ಗೆ ಶೇ. 0.4ರಷ್ಟು ಎಂಡಿಆರ್ ಎಂದು ನಿಗದಿ ಮಾಡಲಾಗಿದೆ. ಎಂಡಿಆರ್ ಗರಿಷ್ಠ ಮಿತಿ 300 ರೂ ಇದೆ. ಅಂದರೆ, 75,000 ಮೇಲ್ಪಟ್ಟ ಎಷ್ಟೇ ಮೊತ್ತದ ಪೇಮೆಂಟ್ ಆದರೂ 300 ರೂ ಎಂಡಿಆರ್ ಶುಲ್ಕವನ್ನಷ್ಟೇ ಪಡೆಯಬಹುದು.

ಇದನ್ನೂ ಓದಿ: ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ಬೇಕೇ?: ಹಾಗಿದ್ದರೆ ನಿಮ್ಮ ಸಿಬಿಲ್ ಸ್ಕೋರ್ ಇಷ್ಟಿದ್ದರೆ ಸಾಕು, ಇಲ್ಲಿದೆ ಮಾಹಿತಿ

ಕ್ರೆಡಿಟ್ ಕಾರ್ಡ್ ಪೇಮೆಂಟ್​ಗೆ ಶೇ. 1.5ರಿಂದ ಶೇ. 3.5ರವರೆಗೂ ಮರ್ಚೆಂಟ್ ಡಿಸ್ಕೌಂಟ್ ರೇಟ್ ಅಥವಾ ಎಂಡಿಆರ್ ಶುಲ್ಕ ನಿಗದಿಯಾಗಿರುತ್ತದೆ. ಇದಕ್ಕೆ ಹೋಲಿಸಿದರೆ ಯುಪಿಐಗೆ ಇರುವ ಎಂಡಿಆರ್ ಬಹಳ ಕಡಿಮೆ. ಶೇ. 3 ಎಂಡಿಆರ್ ಇರುವ ಕ್ರೆಡಿಟ್ ಕಾರ್ಡ್ ಮೂಲಕ 50,000 ರೂ ಪೇಮೆಂಟ್ ಮಾಡಿದರೆ 1,500 ರೂ ಶುಲ್ಕ ಆಗುತ್ತದೆ. ಯುಪಿಐ ಮೂಲಕ 50,000 ರೂ ಪೇಮೆಂಟ್ ಮಾಡಿದರೆ 200 ರೂ ಎಂಡಿಆರ್ ಇರುತ್ತದೆ.

ರೈಲ್ವೆ ಟಿಕೆಟ್, ಇನ್ಷೂರೆನ್ಸ್, ಗ್ಯಾಸ್, ವಿದ್ಯುತ್ ಇತ್ಯಾದಿ ಯುಟಿಲಿಟಿ ಪಾವತಿಗಳಿಗೆ ಎಂಡಿಆರ್ ಶೇಕಡವಾರು ಬದಲು 5 ರೂ ನಿಗದಿತ ಎಂಡಿಆರ್ ಶುಲ್ಕ ಇರುತ್ತದೆ. ಅಂದರೆ, 2,000 ರೂ ಮೇಲ್ಪಟ್ಟ ಇಂಥ ಯುಟಿಲಿಟಿ ಪೇಮೆಂಟ್​ಗೆ 5 ರೂ ಮಾತ್ರವೇ ಎಂಡಿಆರ್ ಶುಲ್ಕ ಪಡೆಯಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More