AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಬಿಐ ದರ ಹೆಚ್ಚಳದ ಬಳಿಕ ಫಿಕ್ಸೆಡ್ ಡೆಪಾಸಿಟ್ ದರ ಪರಿಷ್ಕರಣೆಯ ನಿರೀಕ್ಷೆ; ಠೇವಣಿ ದರ ಹೆಚ್ಚಿದರೆ ಎಷ್ಟು ಲಾಭ? ಇಲ್ಲಿದೆ ಡೀಟೇಲ್ಸ್

ರಿಸರ್ವ್ ಬ್ಯಾಂಕ್​ನ ರೆಪೋ ರೇಟ್ 25 ಮೂಲಾಂಕಗಳಷ್ಟು ಏರಿದೆ. ಶೇ. 5.25ರಿಂದ ಶೇ. 5.50ಕ್ಕೆ ರೆಪೋ ದರ ಹೆಚ್ಚಳಗೊಂಡಿದೆ. ಸಾಲಗಳಿಗೆ ಬಡ್ಡಿದರಗಳು ಹೆಚ್ಚಲಿವೆ. ಜೊತೆಗೆ, ಠೇವಣಿ ದರಗಳೂ ಏರಿಕೆ ಆಗಲಿವೆ. ಆಕರ್ಷಕ ಬಡ್ಡಿಗಳಿರುವ ಠೇವಣಿ ಪ್ಲಾನ್​ಗಳನ್ನು ಬ್ಯಾಂಕುಗಳು ಬಿಡುಗಡೆ ಮಾಡಬಹುದು. ಕೆಲ ಬ್ಯಾಂಕುಗಳು ಶೇ. 9ರವರೆಗೂ ಎಫ್​ಡಿ ದರಗಳನ್ನು ನಿಗದಿ ಮಾಡುವುದುಂಟು.

ಆರ್​ಬಿಐ ದರ ಹೆಚ್ಚಳದ ಬಳಿಕ ಫಿಕ್ಸೆಡ್ ಡೆಪಾಸಿಟ್ ದರ ಪರಿಷ್ಕರಣೆಯ ನಿರೀಕ್ಷೆ; ಠೇವಣಿ ದರ ಹೆಚ್ಚಿದರೆ ಎಷ್ಟು ಲಾಭ? ಇಲ್ಲಿದೆ ಡೀಟೇಲ್ಸ್
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 07, 2026 | 2:40 PM

Share

ನವದೆಹಲಿ, ಅಕ್ಟೋಬರ್ 7: ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು 25 ಮೂಲಾಂಕಗಳಷ್ಟು ಹೆಚ್ಚಿಸಿದೆ. ಇದರಿಂದ ಗೃಹ ಸಾಲಗಳಿಗೆ ಬಡ್ಡಿದರ ಹೆಚ್ಚುವ ಸಾಧ್ಯತೆ ಇದೆ. ಹಾಗೆಯೇ, ಬ್ಯಾಂಕುಗಳು ಠೇವಣಿ ದರಗಳನ್ನೂ ಹೆಚ್ಚಿಸುವ ಸಾಧ್ಯತೆ ಇದೆ. ಎಷ್ಟು ಪ್ರಮಾಣದಲ್ಲಿ ಎಫ್​ಡಿ ದರಗಳು ಏರುತ್ತವೆ ಎಂಬುದು ಮುಂದಿನ ದಿನಗಳಲ್ಲಿ ಬ್ಯಾಂಕುಗಳ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ.

ಹಾಲಿ ಇರುವ ಎಫ್ಡಿಗಳಲ್ಲಿ ಬದಲಾವಣೆ ಇರುವುದಿಲ್ಲ…

ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಲ್ಲಿ ಬಡ್ಡಿದರ ಪೂರ್ವನಿಶ್ಚಿತವಾಗಿರುತ್ತದೆ. ಮಧ್ಯದಲ್ಲಿ ಬಡ್ಡಿದರ ಪರಿಷ್ಕರಣೆ ಆಗುವುದಿಲ್ಲ. ಹೀಗಾಗಿ, ಈಗಾಗಲೇ ಠೇವಣಿ ಇಟ್ಟಿರುವವರಿಗೆ ನಿಗದಿತ ಬಡ್ಡಿದರವೇ ಮುಂದುವರಿಯುತ್ತದೆ. ಠೇವಣಿ ದರ ಪರಿಷ್ಕರಣೆ ಬಳಿಕ ಬ್ಯಾಂಕುಗಳಲ್ಲಿ ಇಡುವ ಡೆಪಾಸಿಟ್​ಗಳಿಗೆ ಹೊಸ ಬಡ್ಡಿದರ ನಿಗದಿ ಆಗಬಹುದು. ಅಥವಾ ಹಾಲಿ ಇರುವ ಎಫ್​ಡಿ ಮೆಚ್ಯೂರ್ ಆಗಿ ಅದನ್ನು ರಿನಿವಲ್ ಮಾಡುವಾಗ ಹೊಸ ದರ ಅನ್ವಯ ಆಗಬಹುದು.

ಇದನ್ನೂ ಓದಿ: ಆರ್​ಬಿಐ ರೆಪೋ ದರ ಹೆಚ್ಚಳ; ಸಾಲಗಳ ಇಎಂಐನಲ್ಲಿ ಎಷ್ಟು ಹೆಚ್ಚಳವಾಗಬಹುದು ಇತ್ಯಾದಿ ವಿವರ ಇಲ್ಲಿದೆ

ಯಾವ ಬ್ಯಾಂಕುಗಳಲ್ಲಿ ಠೇವಣಿಗಳಿಗೆ ಹೆಚ್ಚು ಬಡ್ಡಿ ಸಿಗುತ್ತದೆ?

ಸಹಕಾರಿ ಬ್ಯಾಂಕುಗಳು, ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಎಫ್​ಡಿ ದರಗಳು ಹೆಚ್ಚಿರುತ್ತವೆ. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಶಿವಾಲಿಕ್ ಎಸ್​ಎಂಬಿ ಇತ್ಯಾದಿ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಠೇವಣಿ ದರ ಶೇ. 8ರ ಆಸುಪಾಸಿನಲ್ಲಿದೆ. ಕೆಲ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರ ಕೆಲ ಠೇವಣಿಗಳಿಗೆ ಶೇ. 9ರವರೆಗೂ ಬಡ್ಡಿ ನೀಡುವುದುಂಟು.

ಈ ಕಿರು ಬ್ಯಾಂಕುಗಳಿಗೆ ಹೋಲಿಸಿದರೆ ಪ್ರಮುಖ ಖಾಸಗಿ ಬ್ಯಾಂಕುಗಳು ಹಾಗೂ ಪಿಎಸ್​ಯು ಬ್ಯಾಂಕುಗಳಲ್ಲಿ ಠೇವಣಿ ದರ ಕಡಿಮೆ ಇರುತ್ತದೆ. ಅದರಲ್ಲೂ ಎಸ್​ಬಿಐ ಇತ್ಯಾದಿ ಪಿಎಸ್​ಯು ಬ್ಯಾಂಕುಗಳಲ್ಲಿ ಬಹಳ ಕಡಿಮೆ ಎಫ್​ಡಿ ದರಗಳಿರುತ್ತವೆ. ಇದಕ್ಕೆ ಕಾರಣ, ಸರ್ಕಾರಿ ಬ್ಯಾಂಕುಗಳಲ್ಲಿ ಅಪಾರ ಮೊತ್ತದ ಠೇವಣಿಗಳು ಹರಿದುಬರುತ್ತವೆ. ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತವೆ. ಸಣ್ಣ ಬ್ಯಾಂಕುಗಳು ಆಕರ್ಷಕ ಬಡ್ಡಿ ಆಫರ್ ಮಾಡಿ ಠೇವಣಿಗಳನ್ನು ಆಕರ್ಷಿಸುವುದು ಅನಿವಾರ್ಯ. ಇಲ್ಲದಿದ್ದರೆ ಅವುಗಳು ಜೀವಂತ ಉಳಿಯುವುದು ಕಷ್ಟ.

ಇದನ್ನೂ ಓದಿ: ಆರ್​ಬಿಐ ಎಂಪಿಸಿ ಸಭೆ: ರೆಪೋ ದರ ಶೇ. 5.50 ಗೆ ಏರಿಕೆ

25 ಮೂಲಾಂಕ ಬಡ್ಡಿ ಹೆಚ್ಚಿದರೆ ಎಷ್ಟು ಲಾಭ?

25 ಮೂಲಾಂಕಗಳಷ್ಟು ಬಡ್ಡಿ ಹೆಚ್ಚಿದರೆ ಅದರಿಂದ ಸಿಗುವ ರಿಟರ್ನ್ಸ್ ಗಮನಾರ್ಹವಾಗಿ ಹೆಚ್ಚುತ್ತದೆ. ಉದಾಹರಣೆಗೆ, ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಸಾಮಾನ್ಯ ಗ್ರಾಹಕನ 4 ವರ್ಷದ ಡೆಪಾಸಿಟ್​ಗೆ ಶೇ. 6.5 ವಾರ್ಷಿಕ ಬಡ್ಡಿದರ ಇದೆ. ನೀವು 5 ಲಕ್ಷ ರೂ ಅನ್ನು 4 ವರ್ಷಕ್ಕೆ ಡೆಪಾಸಿಟ್ ಇಟ್ಟರೆ, ಮೆಚ್ಯೂರಿಟಿ ವೇಳೆ, ನಿಮಗೆ 6,47,111 ರೂ ಸಿಗುತ್ತದೆ.

ಈಗ ಬಡ್ಡಿದರ ಶೇ. 6.75ಕ್ಕೆ ಏರಿದಲ್ಲಿ ನಿಮ್ಮ 5 ಲಕ್ಷ ರೂ ಠೇವಣಿಯು 4 ವರ್ಷದಲ್ಲಿ 6,317 ರೂ ಹೆಚ್ಚುವರಿ ಲಾಭ ಪಡೆಯುತ್ತದೆ. ಮೆಚ್ಯೂರಿಟಿಯಲ್ಲಿ ನಿಮಗೆ ಸಿಗುವ ರಿಟರ್ಸ್ 6,53,428 ರೂ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ