AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

3ನೇ ಕ್ವಾರ್ಟರ್​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಘೋಷಣೆ; ವಿವಿಧ ಸ್ಕೀಮ್​ಗಳ ಬಡ್ಡಿದರದಲ್ಲಿ ಇಲ್ಲ ಬದಲಾವಣೆ

2026-27ರ ಮೂರನೇ ತ್ರೈಮಾಸಿಕ ಅವಧಿಗೆ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಿಸಿದೆ. ಹಿಂದಿನ ತ್ರೈಮಾಸಿಕದಲ್ಲಿದ್ದ ದರಗಳನ್ನೇ ಮುಂದುವರಿಸಲಾಗಿದೆ. ಸುಕನ್ಯಾ ಸಮೃದ್ದಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಗರಿಷ್ಠ ಶೇ. 8.2 ಬಡ್ಡಿ ಸಿಗುತ್ತದೆ. ಮಂತ್ಲಿ ಇನ್ಕಮ್ ಸ್ಕೀಮ್, ಪಿಪಿಎಫ್, ಕಿಸಾನ್ ವಿಕಾಸ್ ಪತ್ರ ಇತ್ಯಾದಿ ಸ್ಕೀಮ್​ಗಳಿಗೂ ಉತ್ತಮ ಬಡ್ಡಿದರ ಇದೆ.

3ನೇ ಕ್ವಾರ್ಟರ್​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಘೋಷಣೆ; ವಿವಿಧ ಸ್ಕೀಮ್​ಗಳ ಬಡ್ಡಿದರದಲ್ಲಿ ಇಲ್ಲ ಬದಲಾವಣೆ
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 30, 2026 | 7:14 PM

Share

ನವದೆಹಲಿ, ಸೆಪ್ಟೆಂಬರ್ 30: ಈ ಹಣಕಾಸು ವರ್ಷದ ಮೂರನೇ ಕ್ವಾರ್ಟರ್ ಆದ ಅಕ್ಟೋಬರ್ 1ರಿಂದ ಡಿಸೆಂಬರ್ 31ರವರೆಗಿನ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರದಲ್ಲಿ ಸರಕಾರ ಬದಲಾವಣೆ ಮಾಡಿಲ್ಲ. ಹಿಂದಿನ ಕ್ವಾರ್ಟರ್​ನಲ್ಲಿ ಇದ್ದ ದರಗಳೇ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಆರ್ಥಿಕ ವ್ಯವಹಾರಗಳ ಇಲಾಖೆ ಈ ನಿರ್ಧಾರ ಪ್ರಕಟಿಸಿದೆ.

ಅಂಚೆ ಕಚೇರಿ, ಬ್ಯಾಂಕು ಹಾಗೂ ಇತರ ಮಾರ್ಗಗಳ ಮೂಲಕ ಸರ್ಕಾರವು 8-11 ಸಣ್ಣ ಉಳಿತಾಯ ಯೋಜನೆಗಳನ್ನು ನಡೆಸುತ್ತದೆ. ಶೇ. 8.2ರವರೆಗೂ ಬಡ್ಡಿದರಗಳನ್ನು ಈ ಸ್ಕೀಮ್​ಗಳಲ್ಲಿ ನೀಡಲಾಗುತ್ತಿದೆ. 2026-27ರ ಕ್ವಾರ್ಟರ್​ಗೆ ವಿವಿಧ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ನಿಗದಿ ಮಾಡಲಾಗಿರುವ ಬಡ್ಡಿದರ ಇಂತಿವೆ:

  1. ಸುಕನ್ಯಾ ಸಮೃದ್ಧಿ ಯೋಜನೆ: ಶೇ. 8.2 ಬಡ್ಡಿ
  2. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್​ಸಿಎಸ್​ಎಸ್): ಶೇ. 8.2
  3. ರಾಷ್ಟ್ರೀಯ ಉಳಿತಾಯ ಪತ್ರ (ಎನ್​ಎಸ್​ಸಿ): ಶೇ. 7.7
  4. ಅಂಚೆ ಕಚೇರಿ ಟೈಮ್ ಡೆಪಾಸಿಟ್ 5 ವರ್ಷ: ಶೇ. 7.5
  5. ಅಂಚೆ ಕಚೇರಿ ಟೈಮ್ ಡೆಪಾಸಿಟ್ 3 ವರ್ಷ: ಶೇ. 7.1
  6. ಅಂಚೆ ಕಚೇರಿ ಟೈಮ್ ಡೆಪಾಸಿಟ 2 ವರ್ಷ: ಶೇ 7.0
  7. ಅಂಚೆ ಕಚೇರಿ ಟೈಮ್ ಡೆಪಾಸಿಟ್ 1 ವರ್ಷ: ಶೇ. 6.9
  8. ಕಿಸಾನ್ ವಿಕಾಸ್ ಪತ್ರ (ಕೆವಿಪಿ): ಶೇ. 7.5
  9. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್): ಶೇ. 7.4
  10. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಶೇ. 7.1
  11. ಅಂಚೆ ಕಚೇರಿ ಉಳಿತಾಯ ಖಾತೆ: ಶೇ. 4.0

ಇದನ್ನೂ ಓದಿ: ಆರು ಪ್ರಮುಖ ಹಿಂಗಾರು ಬೆಳೆಗಳಿಗೆ ಎಂಎಸ್​ಪಿ ದರ ಘೋಷಿಸಿದ ಸರ್ಕಾರ; ಮುಂಗಾರು ಬೆಳೆಗೆ ಕರ್ನಾಟಕಕ್ಕೂ ಸಿಹಿ ಸುದ್ದಿ

ಮಹಿಳೆ ಮತ್ತು ವೃದ್ಧರಿಗೆಂದು ಇರುವ ಸ್ಕೀಮ್​ಗಳಿಗೆ ಗರಿಷ್ಠ ಬಡ್ಡಿ ನೀಡಲಾಗುತ್ತಿದೆ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಎಂದರೆ ಫಿಕ್ಸೆಡೆ ಡೆಪಾಸಿಟ್ ಆಗಿದ್ದು, 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷದ ಠೇವಣಿ ಪ್ಲಾನ್​ಗಳಿವೆ. 1 ವರ್ಷಕ್ಕೆ ಕನಿಷ್ಠ ಬಡ್ಡಿ ಸಿಕ್ಕರೆ, 5 ವರ್ಷದ ಪ್ಲಾನ್​ಗೆ ಗರಿಷ್ಠ ಬಡ್ಡಿ ಸಿಗುತ್ತದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕಡಿಮೆ ಬಡ್ಡಿದರ ನೀಡುತ್ತಿದೆಯಾದರೂ, ಟ್ಯಾಕ್ಸ್ ಡಿಡಕ್ಷನ್ ಕಾರಣಕ್ಕೆ ಜನಪ್ರಿಯವಾಗಿದೆ. ದೀರ್ಘಾವಧಿ ಹೂಡಿಕೆಗೂ ಸೂಕ್ತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More