Post Office
ಅಂಚೆ ಕಚೇರಿಯು (Post Office) ಕೇವಲ ಪತ್ರಗಳನ್ನು ತಲುಪಿಸಲು ಮಾತ್ರವಲ್ಲದೆ, ದೇಶಾದ್ಯಂತ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಯೋಜನೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರದ ಬೆಂಬಲವಿರುವುದರಿಂದ ಇಲ್ಲಿ ಹೂಡಿಕೆ ಮಾಡುವ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಅಂಚೆ ಕಚೇರಿಯಲ್ಲಿ ಅಲ್ಪಕಾಲಿಕ ಮತ್ತು ದೂರಕಾಲಿಕ ಯೋಜನೆಗಳು ಲಭ್ಯ ಇವೆ. ರೆಕರಿಂಗ್ ಡೆಪಾಸಿಟ್ ಆರ್ಡಿ ಸ್ಕೀಮ್, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಜೊತೆಗೆ, ದೂರಕಾಲಿಕವಾಗಿ ಹೆಣ್ಮಕ್ಕಳಿಗೆ ಸಿಗುವ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಹೂಡಿಕೆಗೆ ಲಭ್ ಇರುತ್ತದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯನ್ನೂ ಕೂಡ ಪೋಸ್ಟ್ ಆಫೀಸ್ನಲ್ಲಿ ಮಾಡಿಸಬಹುದು. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಕಿಸಾನ್ ವಿಕಾಸ್ ಪತ್ರದಂತಹ ಯೋಜನೆಗಳಲ್ಲೂ ಉತ್ತಮ ಬಡ್ಡಿ ಸಿಗುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿಯೊಬ್ಬರಿಗೂ ಶೂನ್ಯ ಅಪಾಯ (Zero Risk) ಹಾಗೂ ಉತ್ತಮ ಆದಾಯ ನೀಡಲು ಅಂಚೆ ಕಚೇರಿಯ ಯೋಜನೆಗಳು ಅತ್ಯಂತ ಜನಪ್ರಿಯವಾಗಿವೆ.
ಇನ್ನೂ ಹೆಚ್ಚು ಓದಿಸುಕನ್ಯಾ ಸಮೃದ್ದಿ, ಕೆವಿಪಿ, ಎನ್ಎಸ್ಸಿ, ಪಿಪಿಎಫ್, ಟೈಮ್ ಡೆಪಾಸಿಟ್ ಸ್ಕೀಮ್ಗಳಿಂದ ಸಿಗುವ ಲಾಭವೆಷ್ಟು? ಇಲ್ಲಿದೆ ಲೆಕ್ಕಾಚಾರ
ಸುಕನ್ಯಾ ಸಮೃದ್ಧಿ, ಪಿಪಿಎಫ್, ಕೆವಿಪಿ, ಎನ್ಎಸ್ಸಿ ಮತ್ತು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆಗಳು ಎಷ್ಟು ಲಾಭ ತರಬಲ್ಲುವು? ಈ ₹10 ಲಕ್ಷ ಹೂಡಿಕೆ ಮಾಡಿ 20-21 ವರ್ಷಗಳವರೆಗೆ ಕಾಯ್ದುಕೊಂಡರೆ ಸಿಗುವ ರಿಟರ್ನ್ಸ್ನ ಲೆಕ್ಕಾಚಾರ ಇಲ್ಲಿದೆ. ಸುಕನ್ಯಾ ಸಮೃದ್ಧಿ ಮತ್ತು ಪಿಪಿಎಫ್ ಸ್ಕೀಮ್ಗಳಲ್ಲಿ ಕಂತುಗಳಲ್ಲಿ ಹೂಡಿಕೆ ಮಾಡುವುದರಿಂದ ಒಟ್ಟಾರೆ ರಿಟರ್ಸ್ ತುಸು ಕಡಿಮೆ.
- Vijaya Sarathy SN
- Updated on: Oct 1, 2026
- 5:30 pm
3ನೇ ಕ್ವಾರ್ಟರ್ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಘೋಷಣೆ; ವಿವಿಧ ಸ್ಕೀಮ್ಗಳ ಬಡ್ಡಿದರದಲ್ಲಿ ಇಲ್ಲ ಬದಲಾವಣೆ
2026-27ರ ಮೂರನೇ ತ್ರೈಮಾಸಿಕ ಅವಧಿಗೆ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಿಸಿದೆ. ಹಿಂದಿನ ತ್ರೈಮಾಸಿಕದಲ್ಲಿದ್ದ ದರಗಳನ್ನೇ ಮುಂದುವರಿಸಲಾಗಿದೆ. ಸುಕನ್ಯಾ ಸಮೃದ್ದಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಗರಿಷ್ಠ ಶೇ. 8.2 ಬಡ್ಡಿ ಸಿಗುತ್ತದೆ. ಮಂತ್ಲಿ ಇನ್ಕಮ್ ಸ್ಕೀಮ್, ಪಿಪಿಎಫ್, ಕಿಸಾನ್ ವಿಕಾಸ್ ಪತ್ರ ಇತ್ಯಾದಿ ಸ್ಕೀಮ್ಗಳಿಗೂ ಉತ್ತಮ ಬಡ್ಡಿದರ ಇದೆ.
- Vijaya Sarathy SN
- Updated on: Sep 30, 2026
- 7:14 pm