AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರು ಪ್ರಮುಖ ಹಿಂಗಾರು ಬೆಳೆಗಳಿಗೆ ಎಂಎಸ್​ಪಿ ದರ ಘೋಷಿಸಿದ ಸರ್ಕಾರ; ಮುಂಗಾರು ಬೆಳೆಗೆ ಕರ್ನಾಟಕಕ್ಕೂ ಸಿಹಿ ಸುದ್ದಿ

ಕೇಂದ್ರ ಸರ್ಕಾರ ಗೋಧಿ ಸೇರಿದಂತೆ ಆರು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. 2027-28ರ ಮಾರ್ಕೆಟಿಂಗ್ ವರ್ಷಕ್ಕೆ ಗೋಧಿ, ಬಾರ್ಲಿ, ಕಡಲೆ, ಮಸೂರ, ಕುಸುಬೆ ಮತ್ತು ಸಾಸಿವೆಗೆ ಎಂಎಸ್​ಪಿ ದರವನ್ನು ಏರಿಸಲಾಗಿದೆ. ಇದಕ್ಕಾಗಿ ಸರ್ಕಾರ 90,000 ಕೋಟಿ ರೂಗೂ ಹೆಚ್ಚು ವ್ಯಯಿಸಲಿದೆ. ಹಿಂಗಾರು ಸೀಸನ್​ನ ಕೆಲ ಬೆಳೆಗಳನ್ನು ಸರ್ಕಾರ ಎಂಎಸ್​ಪಿ ದರದಲ್ಲಿ ಖರೀದಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಆರು ಪ್ರಮುಖ ಹಿಂಗಾರು ಬೆಳೆಗಳಿಗೆ ಎಂಎಸ್​ಪಿ ದರ ಘೋಷಿಸಿದ ಸರ್ಕಾರ; ಮುಂಗಾರು ಬೆಳೆಗೆ ಕರ್ನಾಟಕಕ್ಕೂ ಸಿಹಿ ಸುದ್ದಿ
ರೈತImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 30, 2026 | 5:57 PM

Share

ನವದೆಹಲಿ, ಸೆಪ್ಟೆಂಬರ್ 30: ಕೇಂದ್ರ ಸರ್ಕಾರ 2027-28ರ ಮಾರುಕಟ್ಟೆ ವರ್ಷಕ್ಕೆ ಹಿಂಗಾರು ಋತುವಿನ ಆರು ಪ್ರಮುಖ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್​ಪಿ ಘೋಷಿಸಿದೆ. ಇದರಲ್ಲಿ ಗೋಧಿಯೂ ಒಳಗೊಂಡಿದೆ. ಗೋಧಿಗೆ ಎಂಎಸ್​ಪಿಯನ್ನು ಹೆಚ್ಚಿಸಲಾಗಿದೆ. ಇತರ ಐದು ಹಿಂಗಾರು ಬೆಳೆಗಳಿಗೂ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಆರು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಕ್ರಮಕ್ಕೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಈ ಎಂಎಸ್​ಪಿ ಕ್ರಮದಲ್ಲಿ 2027-28ರ ಮಾರ್ಕೆಟಿಂಗ್ ವರ್ಷದಲ್ಲಿ ರೈತರಿಂದ ಸರ್ಕಾರ 324 ಲಕ್ಷ ಟನ್​ಗಳಷ್ಟು ಧವಸಧಾನ್ಯ ಖರೀದಿಸಲಿದೆ. ಇದಕ್ಕೆ 90,962 ಕೋಟಿ ರೂ ವೆಚ್ಚವಾಗುವ ನಿರೀಕ್ಷೆ ಇದೆ. ಗೋಧಿ, ಬಾರ್ಲಿ, ಕಡಲೆ, ಮಸೂರ, ಕುಸುಬೆ ಮತ್ತು ಸಾಸಿವೆಗೆ ಸರ್ಕಾರ ಎಂಸಿಪಿ ದರವನ್ನು ಹೆಚ್ಚಿಸಿದೆ.

ಗೋಧಿಗೆ ಎಂಎಸ್​ಪಿ ಕ್ವಿಂಟಾಲ್​ಗೆ 25 ರೂ ಏರಿಕೆ ಮಾಡಲಾಗಿದೆ. ಬಾರ್ಲಿಗೆ 136 ರೂ ಹೆಚ್ಚಿಸಲಾಗಿದೆ. ಮಸೂರ ಬೇಳೆ 390 ರೂ, ಕಡಲೆಗೆ 83 ರೂ, ಕುಸುಬೆಗೆ 675 ರೂ, ಸಾಸಿವೆಗೆ 413 ರೂನಷ್ಟು ಎಂಎಸ್​ಪಿ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ರಾಜ್ಯದ ರೈತರಿಗೆ ಸಿಹಿಸುದ್ದಿ​​ ನೀಡಿ ಮೋದಿ ಸರ್ಕಾರ: ಬೆಂಬಲ ಬೆಲೆ ಯೋಜನೆಯಡಿ ಭರ್ಜರಿ ಬೆಳೆ ಖರೀದಿ, ಜೋಶಿ ಧನ್ಯವಾದ

2027-28ರ ಮಾರ್ಕೆಟಿಂಗ್ ವರ್ಷಕ್ಕೆ ಹಿಂಗಾರು ಬೆಳೆಗಳಿಗೆ ನಿಗದಿಯಾದ ಎಂಎಸ್​​ಪಿ (ಪ್ರತೀ ಕ್ವಿಂಟಾಲ್​ಗೆ)

  1. ಗೋಧಿ: 2,610 ರೂ
  2. ಬಾರ್ಲಿ: 2,286 ರೂ
  3. ಕಡಲೆ (Gram): 5,958 ರೂ
  4. ಮಸೂರ ಬೇಳೆ (Lentil Masur): 7,390 ರೂ
  5. ಸಾಸಿವೆ (Mustard/ Rapeseed): 6,613 ರೂ
  6. ಕುಸುಬೆ (Safflower): 7,215 ರೂ

ಮುಂಗಾರು ಸೀಸನ್: ಕರ್ನಾಟಕ ರೈತರಿಗೆ ಖುಷಿ ಸುದ್ದಿ ಕೊಟ್ಟ ಸರ್ಕಾರ

2026-27ರ ಖಾರಿಫ್ ಮಾರ್ಕೆಟಿಂಗ್ ಸೀಸನ್​ನಲ್ಲಿ ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ಮೂರು ರಾಜ್ಯಗಳ ರೈತರಿಂದ 5,547.99 ಕೋಟಿ ರೂ ಮೌಲ್ಯದ ಬೆಳೆ ಖರೀದಿಗೆ ಸರ್ಕಾರ ಅನುಮೋದಿಸಿದೆ. ಉತ್ತರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ರೈತರಿಂದ ಬೇಳೆಕಾಳು, ಎಣ್ಣೆ ಬೀಜಗಳನ್ನು ಎಂಎಸ್​ಪಿ ದರದಲ್ಲಿ ಸರ್ಕಾರ ಖರೀದಿಸಲಿದೆ.

ಇದನ್ನೂ ಓದಿ: ಪಿಎಂ ಕಿಸಾನ್ ಮಾನ್​ಧನ್ ಯೋಜನೆ: ರೈತರಿಗೆ ವರ್ಷಕ್ಕೆ 36,000 ರೂ ಪಿಂಚಣಿ ಕೊಡುವ ಗವರ್ನ್ಮೆಂಟ್ ಸ್ಕೀಮ್

ಮುಂಗಾರು ಬೆಳೆಗಳನ್ನು ಎಂಎಸ್​​ಪಿ ದರದಲ್ಲಿ ಖರೀದಿಸಲು ಮಂಜೂರಾಗಿರುವುದು: 5,547 ಕೋಟಿ ರೂ

  • ಉತ್ತರಪ್ರದೇಶಕ್ಕೆ: 3,992 ಕೋಟಿ ರೂ
  • ಕರ್ನಾಟಕಕ್ಕೆ 1,107 ಕೋಟಿ ರೂ
  • ತೆಲಂಗಾಣಕ್ಕೆ: 448 ಕೋಟಿ ರೂ

ಕರ್ನಾಟಕದಿಂದ ಯಾವ ಬೆಳೆಗಳ ಖರೀದಿ?

  • ಸೋಯಾಬೀನ್: 659 ಕೋಟಿ ರೂ ಮೌಲ್ಯದ 1,15,500 ಮೆಟ್ರಿಕ್ ಟನ್
  • ಹೆಸರುಕಾಳು: 335 ಕೋಟಿ ರೂ ಮೌಲ್ಯದ 38,250 ಮೆಟ್ರಿಕ್ ಟನ್
  • ಸೂರ್ಯಕಾಂತಿ: 111 ಕೋಟಿ ರೂ ಮೌಲ್ಯದ 13,413 ಮೆಟ್ರಿಕ್ ಟನ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More