AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಫ್ ವೇತನ ಮಿತಿ 15,000 ರೂನಿಂದ 25,000 ರೂ ಏರಿಕೆ: ಹಣಕಾಸು ಸಚಿವಾಲಯ ಅನುಮೋದನೆ; ಏನಿದರ ಅನುಕೂಲ?

EPFO wage ceiling to be raised to Rs 25,000: ಇಪಿಎಫ್​ಒ ಯೋಜನೆಯ ವೇತನ ಮಿತಿ ನಿಯಮವನ್ನು ಪರಿಷ್ಕರಿಸಲಾಗುತ್ತಿದೆ. ಮೂಲವೇತನದ ಮಿತಿಯನ್ನು 15,000 ರೂನಿಂದ 25,000 ರೂಗೆ ಏರಿಸುವ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಕೋಟ್ಯಂತರ ಉದ್ಯೋಗಿಗಳ ಇಪಿಎಫ್ ಅಕೌಂಟ್​ಗೆ ಹೆಚ್ಚಿನ ಕೊಡುಗೆ ಸಿಗಲಿದೆ. ನಿವೃತ್ತಿ ವೇಳೆಗೆ ಹೆಚ್ಚಿನ ಹಣ ಸೇರಲಿದೆ.

ಪಿಎಫ್ ವೇತನ ಮಿತಿ 15,000 ರೂನಿಂದ 25,000 ರೂ ಏರಿಕೆ: ಹಣಕಾಸು ಸಚಿವಾಲಯ ಅನುಮೋದನೆ; ಏನಿದರ ಅನುಕೂಲ?
ಇಪಿಎಫ್​ಒImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 03, 2026 | 3:39 PM

Share

ಮುಖ್ಯಾಂಶಗಳು

  • ಇಪಿಎಫ್​ಒ ಯೋಜನೆಯ ವೇತನ ಮಿತಿ ನಿಯಮವನ್ನು ಪರಿಷ್ಕರಿಸಲಾಗುತ್ತಿದೆ.
  • ಮೂಲವೇತನದ ಮಿತಿಯನ್ನು 25,000 ರೂಗೆ ಏರಿಸಲು ಸರ್ಕಾರ ಅನುಮೋದನೆ ನೀಡಿದೆ.
  • ಇದರಿಂದ ಕೋಟ್ಯಂತರ ಉದ್ಯೋಗಿಗಳ ಇಪಿಎಫ್ ಅಕೌಂಟ್​ಗೆ ಹೆಚ್ಚಿನ ಕೊಡುಗೆ ಸಿಗಲಿದೆ.

ನವದೆಹಲಿ, ಆಗಸ್ಟ್ 3: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್​ಒ (EPFO) ತನ್ನ ಕಡ್ಡಾಯ ಸಾಮಾಜಿಕ ಭದ್ರತಾ ವ್ಯಾಪ್ತಿಯ ವೇತನ ಮಿತಿಯನ್ನು (Wage Ceiling) ಪ್ರಸ್ತುತ ಇರುವ ₹15,000 ರಿಂದ ₹25,000 ಕ್ಕೆ ಹೆಚ್ಚಿಸಲು ಕೇಂದ್ರ ವಿತ್ತ ಸಚಿವಾಲಯ (Ministry of Finance) ಅನುಮೋದನೆ ನೀಡಿದೆ. ಇದು ಜಾರಿಯಾದಲ್ಲಿ 2014 ರ ನಂತರ, ಅಂದರೆ ಸುಮಾರು 12 ವರ್ಷಗಳ ಬಳಿಕ ಇಪಿಎಫ್‌ಒ ವೇತನ ಮಿತಿಯಲ್ಲಿ ಈ ಮಹತ್ವದ ಪರಿಷ್ಕರಣೆ ಮಾಡಿದಂತಾಗುತ್ತದೆ. ಇದರಿಂದ ಸಂಘಟಿತ ವಲಯದ ಲಕ್ಷಾಂತರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಹೆಚ್ಚು ಕಾರ್ಮಿಕರು ಪಿಂಚಣಿ ವ್ಯಾಪ್ತಿಗೆ

ಕಡ್ಡಾಯ ಇಪಿಎಫ್‌ಒ ಯೋಜನೆಯಡಿ ಬರುವ ಮೂಲ ವೇತನ ಮಿತಿಯನ್ನು ₹15,000 ದಿಂದ ₹25,000 ಕ್ಕೆ ಹೆಚ್ಚಿಸಲಾಗಿದೆ. ಈ ನಿರ್ಧಾರದಿಂದ ಸುಮಾರು 1 ಕೋಟಿಗೂ ಹೆಚ್ಚು ಖಾಸಗಿ ಹಾಗೂ ಸಂಘಟಿತ ವಲಯದ ಕಾರ್ಮಿಕರು ಕಡ್ಡಾಯ ಪಿಎಫ್ ಮತ್ತು ಇಪಿಎಸ್ (EPS) ಪಿಂಚಣಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.

2014 ರಲ್ಲಿ ಕೊನೆಯ ಬಾರಿಗೆ ಈ ಮಿತಿಯನ್ನು ₹6,500 ರಿಂದ ₹15,000 ಕ್ಕೆ ಏರಿಸಲಾಗಿತ್ತು. ಆ ನಂತರ ಜಾರಿಯಾದ ಹಣದುಬ್ಬರ ಮತ್ತು ವೇತನ ಹೆಚ್ಚಳಕ್ಕೆ ತಕ್ಕಂತೆ ಮಿತಿ ಏರಿಸಬೇಕೆಂಬ ಬೇಡಿಕೆ ಈಗ ಈಡೇರಿದೆ.

ಇದನ್ನೂ ಓದಿ: ಯುಪಿಐ ಪಾವತಿಗೆ ಹೆಚ್ಚುವರಿ ಭದ್ರತೆ; ಯೆಸ್ ಎಂದರಷ್ಟೇ ಪೇಮೆಂಟ್; ವಂಚನೆ, ತಪ್ಪಾದ ಹಣ ವರ್ಗಾವಣೆ ತಡೆಯಲು ಈ ಕ್ರಮಕ್ಕೆ ಯೋಚನೆ

ಇಪಿಎಫ್​ಒ ವೇತನ ಮಿತಿ ಎಂದರೇನು?

ಇಪಿಎಫ್​ಒ ನಿಯಮಗಳ ಪ್ರಕಾರ ನಿರ್ದಿಷ್ಟ ವೇತನ ಮಿತಿಯಲ್ಲಿರುವ ಕಾರ್ಮಿಕರಿಗೆ ಅವರು ಕೆಲಸ ಮಾಡುವ ಕಂಪನಿಗಳು ಕಡ್ಡಾಯವಾಗಿ ಇಪಿಎಫ್ ಅಕೌಂಟ್​ಗಳನ್ನು ತೆರೆಯಬೇಕು. ಅಂದರೆ, ₹15,000 ಕ್ಕಿಂತ ಹೆಚ್ಚಿನ ಮೂಲ ವೇತನ ಹೊಂದಿರುವವರಿಗೆ ಕಂಪನಿಯು ಇಪಿಎಫ್ ಅಕೌಂಟ್ ತೆರೆಯಬೇಕೆಂಬ ಕಡ್ಡಾಯವೇನಿಲ್ಲ. ಅದೇನಿದ್ದರೂ ಐಚ್ಛಿಕ. ಈಗ ಹೆಚ್ಚಿನ ಕಂಪನಿಗಳು ಹೆಚ್ಚಿನ ವೇತನ ಇರುವ ಉದ್ಯೋಗಿಗಳಿಗೂ ಇಪಿಎಫ್ ಅಕೌಂಟ್ ತೆರೆಯುವುದುಂಟು. ಆದರೆ, 15,000 ರೂ ಲೆಕ್ಕಾಚಾರದಲ್ಲಿ ಮಾತ್ರ ಪಿಎಫ್ ಅಕೌಂಟ್​​ಗೆ ಕೊಡುಗೆ ನೀಡುತ್ತವೆ. ಹೆಚ್ಚಿನ ಕೊಡುಗೆ ನೀಡುವಂತಿರುವುದಿಲ್ಲ.

ಹೊಸ ಮಿತಿ ಏರಿಕೆಯಿಂದ ಉದ್ಯೋಗಿಗಳ ಮೇಲಾಗುವ ಪರಿಣಾಮಗಳು

ಹೊಸ ವೇತನ ಮಿತಿ ಜಾರಿಗೆ ಬಂದಲ್ಲಿ ಪಿಎಫ್ ಅಕೌಂಟ್​ಗೆ ಉದ್ಯೋಗಿಗಳು ಮತ್ತು ಮಾಲೀಕರ ಕೊಡುಗೆ ಹೆಚ್ಚುತ್ತದೆ. ₹25,000 ಹಾಗೂ ಅದಕ್ಕಿಂತ ಹೆಚ್ಚಿನ ಮೂಲವೇತನ ಹೊಂದಿರುವವರಿಗೆ ಕಡ್ಡಾಯ ಪಿಎಫ್ ವಂತಿಗೆ ₹1,800 ನಿಂದ ₹3,000 ಗೆ ಏರಿಕೆಯಾಗುತ್ತದೆ. ಅಂದರೆ, ಉದ್ಯೋಗಿಯ ಸಂಬಳದಿಂದ ಕಡ್ಡಾಯವಾಗಿ ₹3,000 ಮುರಿದುಕೊಳ್ಳಲಾಗುತ್ತದೆ. ಆದರೆ, ಮಾಲಕರ ಶೇ. 12ರ ಕೊಡುಗೆಯಲ್ಲೂ ಹೆಚ್ಚಳವಾಗುತ್ತದೆ. ತಿಂಗಳಿಗೆ ₹1,800 ಕ್ಕೆ ಮಾತ್ರ ಇರುವ ಮಾಲಕರ ಕಮಿಟ್ಮೆಂಟ್ ₹3,000ಕ್ಕೆ ಏರಿಕೆ ಆಗುತ್ತದೆ. ಅಂದರೆ, ಕಂಪನಿ ವತಿಯಿಂದಲೂ ಪಿಎಫ್ ಅಕೌಂಟ್​ಗೆ ಹೆಚ್ಚಿನ ಕೊಡುಗೆ ಬಂದು ಸೇರುತ್ತದೆ.

ನಿವೃತ್ತಿ ಭದ್ರತೆ ಮತ್ತು ಪಿಂಚಣಿ ಹೆಚ್ಚಳ

₹15,000 ರಿಂದ ₹25,000 ನಡುವೆ ಮೂಲ ವೇತನ ಹೊಂದಿರುವ ಉದ್ಯೋಗಿಗಳ ಇಪಿಎಫ್‌ಒ ಖಾತೆಗೆ ತಿಂಗಳ ಕೊಡುಗೆ ಹೆಚ್ಚಾಗುವುದರಿಂದ, ಅವರ ನಿವೃತ್ತಿ ನಿಧಿ (Retirement Corpus) ಗಮನಾರ್ಹವಾಗಿ ಬೆಳೆಯಲಿದೆ. ಜೊತೆಗೆ ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಗೆ ಜಮಾ ಆಗುವ ಮೊತ್ತವೂ ಹೆಚ್ಚುವುದರಿಂದ ಭವಿಷ್ಯದಲ್ಲಿ ಲಭಿಸುವ ತಿಂಗಳ ಪಿಂಚಣಿ ಪ್ರಮಾಣವೂ ಹೆಚ್ಚಲಿದೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಭಾರತದಲ್ಲಿ ಬಿಡುಗಡೆ: ಬೆಲೆ 25,999 ರೂನಿಂದ ಆರಂಭ; ಬಲವಾದ ಬ್ಯಾಟರಿ, ಉತ್ತಮ ಡಿಸ್​ಪ್ಲೇ ಇರುವ ಫೋನ್

ಟೇಕ್-ಹೋಮ್ ಸಂಬಳದಲ್ಲಿ ಸಣ್ಣ ವ್ಯತ್ಯಾಸ

ಕಡ್ಡಾಯ ಪಿಎಫ್ ವಂತಿಗೆಯ ಕಡಿತ (12%) ಹೆಚ್ಚಾಗುವುದರಿಂದ ₹15,000 ಕ್ಕಿಂತ ಹೆಚ್ಚು ಮೂಲ ವೇತನ ಪಡೆಯುವ ಕೆಲವು ಉದ್ಯೋಗಿಗಳ ಕೈಗೆ ಸಿಗುವ ಮಾಸಿಕ ಸಂಬಳ (Take-Home Salary) ಸಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ, ಅದಕ್ಕೆ ಸಮನಾದ ಮೊತ್ತವನ್ನು ಕಂಪನಿ (Employer) ಕೂಡ ಭರಿಸುವುದರಿಂದ ದೀರ್ಘಾವಧಿಯ ಉಳಿತಾಯಕ್ಕೆ ಇದು ಅನುಕೂಲಕರವಾಗಿದೆ.

ಕಂಪನಿಗಳು ಮತ್ತು ಮಾಲೀಕರ ಮೇಲಿನ ಪರಿಣಾಮ

ವೇತನ ಮಿತಿ ಏರಿಕೆಯಿಂದಾಗಿ ಕಂಪನಿಗಳು ಅಥವಾ ಉದ್ಯೋಗದಾತರು ತಮ್ಮ ಸಿಬ್ಬಂದಿಯ ಪಿಎಫ್ ಖಾತೆಗೆ ನೀಡಬೇಕಾದ ಕಡ್ಡಾಯ 12% ವಂತಿಗೆಯ ಪಾಲು ಹೆಚ್ಚಾಗಲಿದೆ. ಇದರಿಂದ ಖಾಸಗಿ ಕಂಪನಿಗಳ ಸಿಬ್ಬಂದಿ ವೆಚ್ಚಗಳು (Payroll Costs) ಸಲ್ಪ ಪ್ರಮಾಣದಲ್ಲಿ ಹೆಚ್ಚಾಗಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Mon, 3 August 26

Follow Us
‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಶಿವಲಿಂಗೇಗೌಡ
‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಶಿವಲಿಂಗೇಗೌಡ
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ