Housing loan: ಶೇ 7ರೊಳಗೆ ಇಳಿಯಿತು ಈ ಬ್ಯಾಂಕ್​​ಗಳ ಗೃಹ ಸಾಲ ಬಡ್ಡಿ ದರ

ಪ್ರಮುಖ ಬ್ಯಾಂಕ್​ಗಳಿಂದ Housing loan ಬಡ್ಡಿ ದರ ಶೇಕಡಾ 7ಕ್ಕಿಂತ ಕಡಿಮೆಯಲ್ಲಿ ನೀಡಲಾಗುತ್ತಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರೊಸೆಸಿಂಗ್ ಫೀ ಕೂಡ ಮನ್ನಾ ಮಾಡಲಾಗಿದೆ. ಇದು ಮಾರ್ಚ್ 31ರ ತನಕ ಅನ್ವಯ ಆಗುತ್ತದೆ.

Housing loan: ಶೇ 7ರೊಳಗೆ ಇಳಿಯಿತು ಈ ಬ್ಯಾಂಕ್​​ಗಳ ಗೃಹ ಸಾಲ ಬಡ್ಡಿ ದರ
ಸಾಂದರ್ಭಿಕ ಚಿತ್ರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 05, 2021 | 5:45 PM

ಹತ್ತು ವರ್ಷಗಳಲ್ಲೇ ಕನಿಷ್ಠ ಮಟ್ಟವಾದ ವಾರ್ಷಿಕ ಶೇ 6.7ಕ್ಕೆ ಗೃಹ ಸಾಲದ ಬಡ್ಡಿದರ ಇಳಿಸಿ, ಶುಕ್ರವಾರ ಐಸಿಐಸಿಐ ಬ್ಯಾಂಕ್ ಘೋಷಣೆ ಮಾಡಿದೆ. ಮಾರ್ಚ್ 5, 2021ರಿಂದ ಈ ದರವು ಅನ್ವಯ ಆಗಲಿದೆ. ಗ್ರಾಹಕರು ರೂ 75 ಲಕ್ಷದವರೆಗಿನ ಸಾಲವನ್ನು ಇದೇ ಬಡ್ಡಿ ದರದಲ್ಲಿ ಪಡೆಯಬಹುದು. 75 ಲಕ್ಷ ರೂಪಾಯಿ ಮೇಲ್ಪಟ್ಟ ಸಾಲಕ್ಕೆ ಶೇಕಡಾ 6.75ರ ಬಡ್ಡಿ ದರ ಆಗುತ್ತದೆ. ಈ ಪರಿಷ್ಕೃತ ಬಡ್ಡಿ ದರವು ಮಾರ್ಚ್ 31, 2021ರ ತನಕ ದೊರೆಯುತ್ತದೆ ಎಂದು ಬ್ಯಾಂಕ್​​ನಿಂದ ತಿಳಿಸಲಾಗಿದೆ.

‘ತಮ್ಮ ಸ್ವಂತ ಬಳಕೆಗಾಗಿ ಮನೆ ಖರೀದಿ ಮಾಡಬೇಕು ಎಂದು ಕಳೆದ ಕೆಲವು ತಿಂಗಳಿಂದ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿರುವುದು ನಮಗೆ ಕಂಡುಬಂದಿದೆ. ಕಡಿಮೆ ಬಡ್ಡಿ ದರವನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ ಕನಸಿನ ಮನೆಯನ್ನು ಖರೀದಿ ಮಾಡುವುದಕ್ಕೆ ಇದು ಅವಕಾಶ’ ಎಂದು ಐಸಿಐಸಿಐ ಬ್ಯಾಂಕ್ ಸೆಕ್ಯೂರ್ಡ್ ಅಸೆಟ್ಸ್ ಮುಖ್ಯಸ್ಥ ರವಿ ನಾರಾಯಣನ್ ಹೇಳಿದ್ದಾರೆ.

ಶೇ 7ರ ಬಡ್ಡಿದರದೊಳಗೆ ಬಂತು ಗೃಹ ಸಾಲ ಕಳೆದ ವಾರ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ), ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ ಮತ್ತು ಈ ವಾರದ ಶುರುವಿನಲ್ಲಿ ಎಚ್​ಡಿಎಫ್​ಸಿಯಿಂದ ಗೃಹ ಸಾಲದ ಬಡ್ಡಿ ದರವನ್ನು ಇಳಿಕೆ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಸ್ಪರ್ಧೆ ವಿಪರೀತ ಹೆಚ್ಚಾಗುತ್ತಿರುವುದರಿಂದ ಇಂಥ ಬೆಳವಣಿಗೆ ಆಗಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಗೃಹ ಸಾಲ ದರವನ್ನು ಶೇ 6.7 ಹಾಗೂ ಶೇ 6.75ಕ್ಕೆ ಇಳಿಸಿವೆ. ಇನ್ನು ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ ಶೇ 6.65ಕ್ಕೆ ತರಲಾಗಿದೆ.

ಐಸಿಐಸಿಐ ಬ್ಯಾಂಕ್ ತಿಳಿಸಿರುವ ಪ್ರಕಾರ, ಹೊಸಬರು ಕೂಡ ಈ ಸಾಲಕ್ಕೆ ಡಿಜಿಟಲ್ ಆಗಿ ಬ್ಯಾಂಕ್ ವೆಬ್​ಸೈಟ್ ಮೂಲಕ ಹಾಗೂ ಮೊಬೈಲ್ ಬ್ಯಾಂಕಿಂಗ್ ಪ್ಲಾಟ್​ಫಾರ್ಮ್ iMobile ಪೇ ಮೂಲಕ ಅರ್ಜಿ ಹಾಕಬಹುದು. 2020ರ ನವೆಂಬರ್​​ನಲ್ಲಿ ಮನೆ ಅಡಮಾನ ಇರಿಸಿಕೊಂಡು ಸಾಲ ನೀಡುವ ಪೋರ್ಟ್​ಫೋಲಿಯೋದಲ್ಲಿ 2 ಲಕ್ಷ ಕೋಟಿ ರೂಪಾಯಿ ದಾಟಿದ ಮೊದಲ ಖಾಸಗಿ ಬ್ಯಾಂಕ್ ಎನಿಸಿಕೊಂಡಿತು ಐಸಿಐಸಿಐ ಬ್ಯಾಂಕ್. 2021ರ ಎರಡನೇ ತ್ರೈಮಾಸಿಕಕ್ಕಿಂತ ಮೂರನೇ ತ್ರೈಮಾಸಿಕದಲ್ಲಿ ಅಡಮಾನ ಸಾಲದ ವಿತರಣೆ ಐಸಿಐಸಿಐ ಬ್ಯಾಂಕ್​ನದು ಹೆಚ್ಚಿದೆ. 2020ರ ಡಿಸೆಂಬರ್​ನಲ್ಲಿ ಸಾರ್ವಕಾಲಿಕ ತಿಂಗಳ ಗರಿಷ್ಠ ಮಟ್ಟವನ್ನು ತಲುಪಿತು ಎಂದು ತಿಳಿಸಲಾಗಿದೆ.

ಪ್ರೊಸೆಸಿಂಗ್ ಶುಲ್ಕ ಮನ್ನಾ ಮಾರ್ಚ್ 3ನೇ ತಾರೀಕಿನಂದು ಎಚ್​ಡಿಎಫ್​ಸಿ ತಿಳಿಸಿರುವಂತೆ, ಎಲ್ಲ ರೀಟೇಲ್ ಗ್ರಾಹಕರಿಗೂ ಮಾರ್ಚ್ 4ರಿಂದ ಅನ್ವಯ ಆಗುವಂತೆ ಗೃಹಸಾಲ ದರವನ್ನು 5 ಬೇಸಿಸ್ ಪಾಯಿಂಟ್ ಇಳಿಕೆ ಮಾಡಲಾಗಿದೆ. ಈ ದರ ಇಳಿಕೆಯಿಂದ ಎಚ್​ಡಿಎಫ್​ಸಿ ಗೃಹ ಸಾಲ ಪಡೆಯುವ ಎಲ್ಲ ಗ್ರಾಹಕರಿಗೂ ಅನ್ವಯ ಆಗುತ್ತದೆ. ಸಾಲದ ಮೊತ್ತ ಎಷ್ಟೇ ಆಗಿದ್ದರೂ ಬಡ್ಡಿ ದರವನ್ನು ಶೇ 6.75ಕ್ಕೆ ನಿಗದಿ ಮಾಡಲಾಗಿದೆ. ಎಸ್​ಬಿಐನಿಂದ ಶೇ 6.70ಗೆ ಇಳಿಸಲಾಗಿದೆ. ಜತೆಗೆ ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಇನ್ನು ಖಾಸಗಿ ಬ್ಯಾಂಕ್ ಆದ ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದಲೂ ಈಚೆಗೆ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಲಾಗಿದೆ.

ಅಂದಹಾಗೆ 2019ರ ಫೆಬ್ರವರಿಯಿಂದ ಇಲ್ಲಿಯ ತನಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೋ ದರವನ್ನು (ವಾಣಿಜ್ಯ ಬ್ಯಾಂಕ್​ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ) 250 ಬಿಪಿಎಸ್ ಇಳಿಕೆ ಮಾಡಿದೆ. ಅದರ ಪರಿಣಾಮವಾಗಿ ವಾಣಿಜ್ಯ ಬ್ಯಾಂಕ್​ಗಳು ಸಹ ಸಾಲದ ಮೇಲೆ ಬಡ್ಡಿ ದರ ಇಳಿಸಿವೆ.

ಇದನ್ನೂ ಓದಿ: Housing Loan: ಮನೆ ಕಟ್ಟಲು, ಖರೀದಿ ಮಾಡಲು ಸಾಲ ಮಾಡುವ ಮುನ್ನ ತಿಳಿಯಲೇಬೇಕಾದ ಸಂಗತಿಗಳು

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು