PMJJBY Explainer: ಏನಿದು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ?
ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ಬಗ್ಗೆ ನಿಮಗೆ ಗೊತ್ತೆ? ಕಡಿಮೆ ಪ್ರೀಮಿಯಂ ಮೊತ್ತದಲ್ಲಿ ಜೀವ ವಿಮೆ ಕವರೇಜ್ ನೀಡುವಂಥ ಯೋಜನೆ ಇದು. ನಿಮಗೊಂದು ಬ್ಯಾಂಕ್ ಖಾತೆ ಇದ್ದಲ್ಲಿ ವರ್ಷಕ್ಕೆ 330 ರೂ. ಪಾವತಿಸಿದರೆ ಸಾಕು.
ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾವನ್ನು (ಪಿಎಂಜೆಜೆಬಿವೈ) ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (ಜೀವ ವಿಮಾ ನಿಗಮ) ಮತ್ತು ಇತರ ಜೀವವಿಮೆ ಕಂಪೆನಿಗಳು ಅದೇ ರೀತಿಯ ನಿಬಂಧನೆಗಳ ಜತೆಗೆ ಒದಗಿಸುತ್ತಿವೆ. ಅದಕ್ಕಾಗಿ ಅಗತ್ಯ ಅನುಮತಿಯನ್ನು ಪಡೆದಿದ್ದು, ಈ ಉದ್ದೇಶಕ್ಕೆ ಬ್ಯಾಂಕ್ಗಳು ಜತೆಗೆ ಸಹಭಾಗಿತ್ವ ವಹಿಸಿವೆ. ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾಗೆ ಕೇಂದ್ರ ಸರ್ಕಾರದಿಂದ 2015ರ ಮೇ 9ರಂದು ಚಾಲನೆ ನೀಡಲಾಗಿದ್ದು, ದೇಶದ ನಾಗರಿಕರ ಅನುಕೂಲವನ್ನು ಗಮನದಲ್ಲಿ ಇಟ್ಟುಕೊಂಡು ಪಾಲಿಸಿಯನ್ನು ಪರಿಚಯಿಸಲಾಗಿದೆ.
ಇದು ಒಂದು ವರ್ಷದ ಜೀವ ವಿಮಾ ಯೋಜನೆ. ಇನ್ಷೂರೆನ್ಸ್ ಖರೀದಿಸಿದವರ ಜೀವಕ್ಕೆ ಕವರೇಜ್ ನೀಡುತ್ತದೆ. ಬಳಕೆದಾರರು ಚಂದಾದಾರ ಅರ್ಜಿಯನ್ನು ನೋಂದಣಿ ಮಾಡಿಕೊಂಡು, ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾಗೆ ಅರ್ಜಿ ಹಾಕಬೇಕು. ವ್ಯಕ್ತಿಯ ಹೆಸರು, ಉಳಿತಾಯ ಖಾತೆ ಸಂಖ್ಯೆ, ಇ- ಮೇಲ್ ಐಡಿ, ವಿಳಾಸ ಮತ್ತಿತರ ದಾಖಲೆಗಳನ್ನು ಭರ್ತಿ ಮಾಡಿ, ಯೋಜನೆಗೆ ಅರ್ಜಿ ಹಾಕಬೇಕು.
ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ (ಪಿಎಂಜೆಜೆಬಿವೈ) ಅರ್ಹತಾ ಮಾನದಂಡ: 18ರಿಂದ 50 ವರ್ಷ ವಯೋಮಾನದವರಾಗಿದ್ದು, ಬ್ಯಾಂಕ್ ಖಾತೆ ಇದ್ದು, ಸೇರ್ಪಡೆ/ಆಟೋ ಡೆಬಿಟ್ ಎನೇಬಲ್ ಮಾಡಿಕೊಂಡಲ್ಲಿ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾಗೆ ಸೇರ್ಪಡೆ ಆಗಬಹುದು. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಪ್ರಾಥಮಿಕ ಕೆವೈಸಿ ಆಗಿರುತ್ತದೆ. ಯಾರಾದರೂ ಪಿಎಂಜೆಜೆಬಿವೈ ಯೋಜನಾದಿಂದ ಹಿಂಪಡೆದುಕೊಂಡದಲ್ಲಿ ಮತ್ತೆ ಯೋಜನೆಗೆ ಸೇರ್ಪಡೆ ಆಗಬಹುದು.
ಲೈಫ್ ಕವರ್ 2 ಲಕ್ಷ ರೂಪಾಯಿ ಆಗುತ್ತದೆ. ಜೂನ್ 1ರಿಂದ ಮೇ 31ರ ಅವಧಿಗೆ ಇರುತ್ತದೆ ಮತ್ತು ಇದು ನವೀಕರಣ ಆಗುವಂಥದ್ದಾಗಿರುತ್ತದೆ. ಇನ್ಷೂರೆನ್ಸ್ ಮಾಡಿಸಿಕೊಂಡ ವ್ಯಕ್ತಿ ಯಾವುದಾರರೂ ಕಾರಣಕ್ಕೆ ಸಾವನ್ನಪ್ಪಿದಲ್ಲಿ ಈ ಯೋಜನೆ ಅಡಿಯಲ್ಲಿ 2 ಲಕ್ಷ ರೂಪಾಯಿ ರಿಸ್ಕ್ ಕವರ್ ಆಗುತ್ತದೆ.
ಈ ಯೋಜನೆಗೆ ವಾರ್ಷಿಕ ಪ್ರೀಮಿಯಂ ರೂ. 330 ಚಂದಾದಾರರ ಬ್ಯಾಂಕ್ ಖಾತೆಯಿಂದ ಒಂದೇ ಕಂತಿನಲ್ಲಿ ಆಟೋ ಡೆಬಿಟ್ ಆಗುತ್ತದೆ. ಪ್ರತಿ ವರ್ಷದ ಮೇ 31ಕ್ಕೆ ಮುಂಚಿತವಾಗಿ ಚಂದಾದಾರ ಆಯ್ಕೆಯಂತೆ ಪ್ರೀಮಿಯಂ ಮೊತ್ತ ಖಾತೆಯಿಂದ ಆಟೋ ಡೆಬಿಟ್ ಆಗುತ್ತದೆ.
ಇದನ್ನೂ ಓದಿ: Vehicle Scrappage Policy: ವಾಹನಗಳ ‘ಗುಜರಿ’ ನೀತಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು