Vehicle Scrappage Policy: ವಾಹನಗಳ ‘ಗುಜರಿ’ ನೀತಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಯಲ್ಲಿ ಗುಜರಿ ನೀತಿ ಘೋಷಣೆ ಮಾಡಿದ್ದಾರೆ. ಇದರಿಂದ ಎಲ್ಲ ವರ್ಗದ ಮೇಲೂ ಪರಿಣಾಮ ಆಗುತ್ತದೆ. ಏನಿದು ಹೊಸ ನೀತಿ, ನಿಯಮ ಎಂಬುದನ್ನು ತಿಳಿದುಕೊಳ್ಳಿ.

Vehicle Scrappage Policy: ವಾಹನಗಳ 'ಗುಜರಿ' ನೀತಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು
ಸಾಂದರ್ಭಿಕ ಚಿತ್ರ
Follow us
Srinivas Mata
| Updated By: Digi Tech Desk

Updated on:Mar 19, 2021 | 1:21 PM

ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರದಂದು ಲೋಕಸಭೆಯಲ್ಲಿ ವಾಹನಗಳ ಗುಜರಿ ನೀತಿ ಘೋಷಣೆ ಮಾಡಿದ್ದಾರೆ. ಇದು ಬಹು ನಿರೀಕ್ಷಿತವಾದ ನೀತಿಯಾಗಿದ್ದು. ಇದರ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

– ನಿಮ್ಮ ಬಳಿ ಇರುವ 15 ವರ್ಷ ಪೂರ್ಣಗೊಳಿಸಿದ ವಾಣಿಜ್ಯ (ಕಮರ್ಷಿಯಲ್) ವಾಹನಗಳಿಗೆ ಫಿಟ್​ನೆಸ್ ಪ್ರಮಾಣಪತ್ರ ಇಲ್ಲ ಎಂದಾದಲ್ಲಿ ನೋಂದಣಿ ತಾನಾಗಿಯೇ ರದ್ದಾಗುತ್ತದೆ. – ಇನ್ನು ಖಾಸಗಿ ವಾಹನಗಳ ನೋಂದಣಿ 20 ವರ್ಷಗಳ ಅವಧಿಗೆ ಆಗಿರುತ್ತದೆ. ಆ ನಂತರ ರಿನೀವಲ್​ಗೆ (ನವೀಕರಣಕ್ಕೆ) ಫಿಟ್​ನೆಸ್ ಪ್ರಮಾಣಪತ್ರ ಒದಗಿಸಬೇಕು. – ನೋಂದಾಯಿತ ಕೇಂದ್ರಗಳ ಮೂಲಕವಾಗಿ ಹಳೇ ವಾಹನಗಳನ್ನು ಸ್ಕ್ರಾಪ್ ಮಾಡುವ ಮಾಲೀಕರಿಗೆ ಪ್ರೋತ್ಸಾಹಧನ ನೀಡುವುದಕ್ಕೆ ಸರ್ಕಾರ ಯೋಜನೆ ರೂಪಿಸುತ್ತಿದೆ. – ಗುಜರಿ ನೀತಿ ರೂಪಿಸಿರುವ ಕಾರಣ ಏನೆಂದರೆ, ಮಾಲಿನ್ಯ ಕಡಿಮೆ ಮಾಡಬಹುದು, ನೋಂದಾಯಿತ ಗುಜರಿ ಕೇಂದ್ರಗಳ ಮೂಲಕವಾಗಿ ಉದ್ಯೋಗ ಸೃಷ್ಟಿಸಬಹುದು, ಹೊಸ ವಾಹನಗಳಿಗೆ ಬೇಡಿಕೆ ಸೃಷ್ಟಿಸಬಹುದು. – ಹೊಸ ಗುಜರಿ ನೀತಿಯ ಮೂಲಕವಾಗಿ 10,000 ಕೋಟಿ ರೂಪಾಯಿ ಹೊಸ ಬಂಡವಾಳ ಹರಿದು ಬರುವ ಹಾಗೂ 35000 ಉದ್ಯೋಗ ಸೃಷ್ಟಿಯಾಗುವ ಅಂದಾಜಿದೆ. – ಗುಜರಿ ಕೇಂದ್ರಗಳಿಂದ ಹಳೇ ವಾಹನಗಳಿಗೆ ಗುಜರಿ ಮೌಲ್ಯದ ಲೆಕ್ಕಾಚಾರದಲ್ಲಿ ಪ್ರೋತ್ಸಾಹಧನ ಎಂದು ನೀಡಲಾಗುತ್ತದೆ. ಅದು ಹೊಸ ವಾಹನದ ಬೆಲೆಯ ಶೇಕಡಾ 4ರಿಂದ 6ರಷ್ಟಾಗಿರುತ್ತದೆ. ಇನ್ನು ರಸ್ತೆ ತೆರಿಗೆ ಮೇಲೆ ವೈಯಕ್ತಿಕ ವಾಹನಗಳಿಗೆ ಶೇಕಡಾ 25ರ ತನಕ ಹಾಗೂ ವಾಣಿಜ್ಯ ವಾಹನಗಳಿಗೆ ಶೇ 15ರಷ್ಟು ವಿನಾಯಿತಿ ಮತ್ತು ಗುಜರಿ ಪ್ರಮಾಣಪತ್ರದ ಮೇಲೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ. – ಫಿಟ್​ನೆಸ್ ಪರೀಕ್ಷೆ ಮತ್ತು ಗುಜರಿ ಕೇಂದ್ರಗಳು ಈ ವರ್ಷದ ಅಕ್ಟೋಬರ್​ನಿಂದ ಜಾರಿಗೆ ಬರುತ್ತವೆ. ಪಿಎಸ್​ಯು ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿದ್ದಲ್ಲಿ ಕಡ್ಡಾಯ ಸ್ಕ್ರಾಪಿಂಗ್ ಏಪ್ರಿಲ್ 1, 2022ರಿಂದ ಜಾರಿಯಾಗುತ್ತದೆ. ಇನ್ನು ಭಾರೀ ವಾಣಿಜ್ಯ ವಾಹನಗಳಿಗೆ ಏಪ್ರಿಲ್ 1, 2023ರಿಂದ ಹಾಗೂ ಇತರ ವಾಹನಗಳಿಗೆ ಏಪ್ರಿಲ್ 1, 2024ರಿಂದ ಫಿಟ್​ನೆಸ್ ಪರೀಕ್ಷೆ ಕಡ್ಡಾಯವಾಗುತ್ತದೆ. ಇದರ ಜತೆಗೆ ಹಳೇ ವಾಹನಗಳಿಗೆ ಫಿಟ್​ನೆಸ್ ಪ್ರಮಾಣಪತ್ರ ಪಡೆಯುವುದಕ್ಕೆ ಶುಲ್ಕ ಹೆಚ್ಚಿಸುವ ಪ್ರಸ್ತಾವ ಕೂಡ ಮಾಡಲಾಗಿದೆ.

ಇದನ್ನೂ ಓದಿ: ದೋಷಪೂರಿತ ವಾಹನ ತಯಾರಿಸಿದ ಕಂಪೆನಿಗಳಿಗೆ ಬೀಳಲಿದೆ ಭಾರೀ ಜುಲ್ಮಾನೆ

Published On - 12:03 pm, Fri, 19 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್