ಮಾಧ್ಯಮಗಳ ಕಣ್ತಪ್ಪಿಸುವ ತಂತ್ರ: 3 ಯುವತಿಯರನ್ನು 3 ಪ್ರತ್ಯೇಕ ಕಾರುಗಳಲ್ಲಿ ಕರೆದೊಯ್ದು ಎಸ್​ಐಟಿಯಿಂದ ತನಿಖೆ!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ಪರಿಕಲ್ಪನೆ ಮಾಡಿಕೊಂಡು ಚಿತ್ರೀಕರಣ ನಡೆಸಲಾಗುತ್ತಿದ್ದು, ರಮೇಶ್ ಜಾರಕಿಹೊಳಿ ಯಾವ ರೀತಿ ಬರ ಮಾಡಿಕೊಂಡ್ರು, ಬಂದ ನಂತರ ಏನೆಲ್ಲ ಮಾತುಕತೆ ನಡೆಯಿತು ಎಂಬ ಎಲ್ಲಾ ವಿಚಾರಗಳನ್ನೂ ಚಿತ್ರೀಕರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಾಧ್ಯಮಗಳ ಕಣ್ತಪ್ಪಿಸುವ ತಂತ್ರ: 3 ಯುವತಿಯರನ್ನು 3 ಪ್ರತ್ಯೇಕ ಕಾರುಗಳಲ್ಲಿ ಕರೆದೊಯ್ದು ಎಸ್​ಐಟಿಯಿಂದ ತನಿಖೆ!
ಸಂತ್ರಸ್ತ ಯುವತಿ
Follow us
Skanda
|

Updated on:Apr 01, 2021 | 7:06 PM

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಸ್ಥಳ ಮಹಜರು ಮಾಡುತ್ತಿರುವ ಎಸ್​ಐಟಿ ಅಧಿಕಾರಿಗಳು ಸಿಡಿಯಲ್ಲಿರುವ ಸಂತ್ರಸ್ತ ಯುವತಿಯ ಹೇಳಿಕೆ ದಾಖಲು ಮಾಡಿಕೊಳ್ಳಲು ಆಕೆಯನ್ನು ಕರೆತರುವಾಗ ಮಾಧ್ಯಮಗಳ ಕಣ್ತಪ್ಪಿಸಲು ಭಾರೀ ಪ್ಲ್ಯಾನ್ ಮಾಡಿದ್ದಾರೆ. ಸಿಡಿ ಸಂತ್ರಸ್ತೆಯನ್ನು ಮಾಧ್ಯಮಗಳಿಂದ ಆದಷ್ಟು ದೂರವಿಡುವ ಸಲುವಾಗಿ ಮೂರು ಯುವತಿಯರನ್ನು ಮೂರು ಪ್ರತ್ಯೇಕ ಗಾಡಿಗಳಲ್ಲಿ ಕರೆತಂದಿರುವ ಪೊಲೀಸರು ಅದೇ ರೀತಿಯಲ್ಲಿ ಆಕೆಯನ್ನು ವಾಪಾಸು ಕರೆದುಕೊಂಡು ಹೋಗಲಿದ್ದಾರೆ.

ರಮೇಶ್ ಜಾರಕಿಹೊಳಿ ಮತ್ತು ಯುವತಿ ಖಾಸಗಿ ಕ್ಷಣಗಳನ್ನು ಕಳೆದಿರುವ ಫ್ಲ್ಯಾಟ್​ನ ಮಹಜರು ಪ್ರಕ್ರಿಯೆಯನ್ನು ಸಂಪೂರ್ಣ ಚಿತ್ರೀಕರಣ ಮಾಡಿಕೊಂಡಿರುವ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಹೇಳಿಕೆಗಳನ್ನು ದಾಖಲಿಸಿಕೊಂಡು ಅದನ್ನು ಓದಿ ಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ, ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಫ್ಲ್ಯಾಟ್​ನಲ್ಲಿದ್ದ ಸಿಬ್ಬಂದಿ ಹೇಳಿಕೆಯನ್ನೂ ಪಡೆದುಕೊಂಡಿದ್ದಾರೆ. ವಿಡಿಯೋದಲ್ಲಿ ಚಿತ್ರೀಕರಣಗೊಂಡ ಸ್ಥಳಕ್ಕೂ ಈಗ ಮಹಜರು ನಡೆಸಿದ ಸ್ಥಳಕ್ಕೂ ಸಾಮ್ಯತೆ ಪರಿಶೀಲಿಸಲಾಗಿದ್ದು, ವಿಡಿಯೋದಲ್ಲಿ ಕಂಡುಬಂದಿದ್ದ ಬೆಡ್​ಶೀಟ್, ಬೆಡ್​ ಕವರ್​ ಸೇರಿದಂತೆ ಎಲ್ಲಾ ಸಾಕ್ಷ್ಯಗಳು ಈಗಲೂ ಇವೆಯಾ ಎಂದು ಹುಡುಕಾಡಿದ್ದಾರೆ.

ಎಸ್​ಐಟಿಯಿಂದ ಕೃತ್ಯದ ಪರಿಕಲ್ಪನೆ ಮಾಡಿಕೊಂಡು ಚಿತ್ರೀಕರಣ ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ಪರಿಕಲ್ಪನೆ ಮಾಡಿಕೊಂಡು ಚಿತ್ರೀಕರಣ ನಡೆಸಲಾಗುತ್ತಿದ್ದು, ರಮೇಶ್ ಜಾರಕಿಹೊಳಿ ಯಾವ ರೀತಿ ಬರ ಮಾಡಿಕೊಂಡ್ರು, ಬಂದ ನಂತರ ಏನೆಲ್ಲ ಮಾತುಕತೆ ನಡೆಯಿತು ಎಂಬ ಎಲ್ಲಾ ವಿಚಾರಗಳನ್ನೂ ಚಿತ್ರೀಕರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಮೇಶ್​ ಜಾರಕಿಹೊಳಿ ಸೆಕ್ರೆಟರಿ ಅಂದುಕೊಂಡಿದ್ವಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಫ್ಲ್ಯಾಟ್​ಗೆ ಈ ಯುವತಿ ಅನೇಕ ಸಲ ಬಂದುಹೋಗುತ್ತಿದ್ದರು. ಆದರೆ, ಆಕೆ ರಮೇಶ್ ಜಾರಕಿಹೊಳಿ ಸೆಕ್ರೆಟರಿ ಇರಬೇಕೆಂದು ನಾವು ಭಾವಿಸಿದ್ದೆವು ಎಂದು ಅಲ್ಲಿನ ನಿವಾಸಿಗಳು ಹೇಳಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಸಿಡಿ ಸಂತ್ರಸ್ತೆಯ ಬಟ್ಟೆ ತೆಗೆದುಕೊಂಡ ಎಸ್​ಐಟಿ; ಎಫ್​​ಎಸ್​​ಎಲ್​​ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ 

ಬೌರಿಂಗ್ ಆಸ್ಪತ್ರೆಯಲ್ಲಿ ಸಿಡಿ ಸಂತ್ರಸ್ಥೆಗೆ ಮನೋವೈದ್ಯರಿಂದ ಕೌನ್ಸೆಲಿಂಗ್

Published On - 7:04 pm, Thu, 1 April 21