ಸಿಡಿ ಸಂತ್ರಸ್ತೆಯ ಬಟ್ಟೆ ತೆಗೆದುಕೊಂಡ ಎಸ್ಐಟಿ; ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ
ಸಂತ್ರಸ್ತ ಯುವತಿ ವಾಸವಿದ್ದ ಪಿಜಿ ಮಹಜರು ಮಾಡಿರುವ ಎಸ್ಐಟಿ ಅಧಿಕಾರಿಗಳು ಆಕೆಗೆ ಸಂಬಂಧಿಸಿದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಪಿಜಿಯನ್ನು ಮಹಜರು ಮಾಡಲಾಗಿದ್ದು, ವಶಕ್ಕೆ ಪಡೆದ ಎಲ್ಲಾ ವಸ್ತುಗಳನ್ನೂ ಸೀಲ್ ಮಾಡಿ ಎಫ್ಎಸ್ಎಲ್ಗೆ ರವಾನಿಸುವುದಾಗಿ ತಿಳಿದುಬಂದಿದೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಸಂತ್ರಸ್ತ ಯುವತಿ ವಾಸವಿದ್ದ ಪಿಜಿ ಕೇಂದ್ರದಲ್ಲಿ ಎಸ್ಐಟಿ ಅಧಿಕಾರಿಗಳು ಮಹಜರು ಕಾರ್ಯ ನಡೆಸಿದ್ದಾರೆ. ಆಕೆಗೆ ಸಂಬಂಧಿಸಿದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಪಿಜಿಯನ್ನು ಮಹಜರು ಮಾಡಲಾಗಿದ್ದು, ವಶಕ್ಕೆ ಪಡೆದ ಎಲ್ಲಾ ವಸ್ತುಗಳನ್ನೂ ಸೀಲ್ ಮಾಡಿ ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ರವಾನಿಸುವುದಾಗಿ ತಿಳಿದುಬಂದಿದೆ. ಆ ಮೂಲಕ ಇಂದು ಬೆಳಗ್ಗೆಯಿಂದ ಸತತ ಮೂರು ಗಂಟೆಗಳ ಕಾಲ ಸ್ಥಳ ಮಹಜರು ಮಾಡಿ ವಸ್ತುಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಎಲ್ಲವನ್ನೂ ಪ್ರಯೋಗಾಲಯಕ್ಕೆ ಕಳುಹಿಸಿ ಹೆಚ್ಚಿನ ತನಿಖೆ ನಡೆಸಲು ಸನ್ನದ್ಧರಾಗಿದ್ದಾರೆ.
ಇದನ್ನೂ ಓದಿ: ಪೋಷಕರ ಮಾತನಾಡಿಸಬೇಕೆಂದು ಹಟ, ಬಿಕ್ಕಿಬಿಕ್ಕಿ ಅತ್ತ ಸಿಡಿ ಸಂತ್ರಸ್ತೆ: ಅನುಮತಿ ನೀಡಲ್ಲ ಎಂದ ಎಸ್ಐಟಿ