ಪೋಷಕರ ಮಾತನಾಡಿಸಬೇಕೆಂದು ಹಟ, ಬಿಕ್ಕಿಬಿಕ್ಕಿ ಅತ್ತ ಸಿಡಿ ಸಂತ್ರಸ್ತೆ: ಅನುಮತಿ ನೀಡಲ್ಲ ಎಂದ ಎಸ್ಐಟಿ
ಯುವತಿಯ ಒತ್ತಾಯಕ್ಕೆ ಕಡೆಗೂ ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡುವುದಾಗಿ ಹೇಳಿರುವ ಎಸ್ಐಟಿ ಅಧಿಕಾರಿಗಳು, ಮಾನವೀಯತೆಯಿಂದ ನಿಮಗೆ ಅವಕಾಶ ಕೊಡುತ್ತೇವೆ. ಆದರೆ, ನಿಮ್ಮ ವಕೀಲರ ಮೂಲಕ ನಮಗೆ ಒಂದು ಮನವಿ ಪತ್ರ ಕೊಡಿ. ಮನವಿ ಪತ್ರ ಸಿಕ್ಕ ನಂತರ ನಾವೇ ನಿಮ್ಮ ಪೊಷಕರನ್ನ ಇಲ್ಲಿಗೆ ಕರೆಸುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಸ್ಐಟಿ ವಿಚಾರಣೆ ವೇಳೆ ಸಿಡಿ ಸಂತ್ರಸ್ತೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ ಎಂದು ತಿಳಿದುಬಂದಿದೆ. ಎಸ್ಐಟಿ ಅಧಿಕಾರಿಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ಪೋಷಕರನ್ನು ಮಾತನಾಡಿಸಬೇಕು ಎಂದು ಪಟ್ಟು ಹಿಡಿದಿರುವ ಯುವತಿ, ಪೋಷಕರ ಭೇಟಿಗೆ ಅನುಮತಿ ನೀಡುವಂತೆ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಆದರೆ, ಈ ವೇಳೆ ಸಂತ್ರಸ್ತೆಯನ್ನು ಸಮಾಧಾನ ಮಾಡಿರುವ ಎಸ್ಐಟಿ ಅಧಿಕಾರಿಗಳು ಅನುಮತಿ ನೀಡಲಾಗುವುದಿಲ್ಲ ಎಂದು ಮನವೊಲಿಸುವ ಯತ್ನ ಮಾಡಿದ್ದಾರೆ. ನಾವು ಈಗ ನಿಮ್ಮ ಪೊಷಕರನ್ನ ಕರೆಸಿದರೆ ನಮ್ಮ ಮೇಲೆಯೇ ಆರೋಪ ಬರುತ್ತದೆ. ಪೊಷಕರನ್ನ ಕರೆಸಿ ಮನವೊಲಿಕೆಗೆ ಯತ್ನಿಸಿದ್ದಾರೆಂದು ಆರೋಪಿಸುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಭೇಟಿಯಾಗಲು ಅವಕಾಶ ಕೊಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಲೆತ್ನಿಸಿದರೂ ಯುವತಿ ತನ್ನ ಪಟ್ಟು ಸಡಲಿಸದೇ ಕಣ್ಣೀರಿಟ್ಟು ತಾಯಿಯೊಂದಿಗೆ ಮಾತನಾಡಲಾದರೂ ಅವಕಾಶ ಕೊಡುವಂತೆ ಕೇಳಿಕೊಂಡಿದ್ದಾರೆ.
ಯುವತಿಯ ಒತ್ತಾಯಕ್ಕೆ ಕಡೆಗೂ ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡುವುದಾಗಿ ಹೇಳಿರುವ ಎಸ್ಐಟಿ ಅಧಿಕಾರಿಗಳು, ಮಾನವೀಯತೆ ಯಿಂದ ನಿಮಗೆ ಅವಕಾಶ ಕೊಡುತ್ತೇವೆ. ಆದರೆ, ನಿಮ್ಮ ವಕೀಲರ ಮೂಲಕ ನಮಗೆ ಒಂದು ಮನವಿ ಪತ್ರ ಕೊಡಿ. ಮನವಿ ಪತ್ರ ಸಿಕ್ಕ ನಂತರ ನಾವೇ ನಿಮ್ಮ ಪೊಷಕರನ್ನ ಇಲ್ಲಿಗೆ ಕರೆಸುತ್ತೇವೆ ಎಂದು ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಸೂಕ್ತ ಸಮಯದಲ್ಲಿ ಇನ್ನುಳಿದ 9 ಆಡಿಯೋ ಸಾಕ್ಷ್ಯ ಬಿಡುಗಡೆ ಮಾಡ್ತೇವೆ; ಅದರಲ್ಲಿ ಶಿವಕುಮಾರ್ ಹೆಸರೂ ಇದೆ -ಸಂತ್ರಸ್ತೆ ಸಹೋದರ