Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ 114ನೇ ವರ್ಷದ ಹುಟ್ಟುಹಬ್ಬ ಸಂಭ್ರಮ

ಇಂದು ಏಪ್ರಿಲ್​ 1ನೇ ತಾರೀಕು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 114ನೇ ವರ್ಷದ ಹುಟ್ಟು ಹಬ್ಬ. ಮಠದಲ್ಲಿ ಕಳೆಗಟ್ಟಿದ ಸಂಭ್ರಮ.

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ 114ನೇ ವರ್ಷದ ಹುಟ್ಟುಹಬ್ಬ ಸಂಭ್ರಮ
ಶಿವಕುಮಾರ ಸ್ವಾಮೀಜಿ
Follow us
shruti hegde
|

Updated on:Apr 01, 2021 | 2:36 PM

ತುಮಕೂರು: ಇಂದು ಏಪ್ರಿಲ್​ 1ನೇ ತಾರೀಕು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 114ನೇ ವರ್ಷದ ಹುಟ್ಟು ಹಬ್ಬ. ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಮಠ, ಗದ್ದುಗೆ ಪೂಜೆ, ಮಕ್ಕಳ ನಾಮಕರಣದ ಮೂಲಕ ಜನ್ಮದಿನ ಕಾರ್ಯಕ್ರಮ ನೆರವೇರಿತು. ಬೆಳಗ್ಗೆಯಿಂದ ಭಕ್ತರು ಮಠಕ್ಕೆ ಆಗಮಿಸಿ ಗದ್ದುಗೆ ದರ್ಶನ ಪಡೆದರು.

ಬಳಿಕ ಶ್ರೀಗಳ ಭಾವಚಿತ್ರವನಗನು ಹಾಗೂ ಪುತ್ಥಳಿಯನಗನು ಮಠದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ನಂದಿ ಧ್ವಜ, ವೀರಗಾಸೆ, ಪೂರ್ಣಕುಂಭದ ಮೂಲಕ ನಡೆದ ಮೆರವಣಿಗೆ ಶ್ರೀಗಳ ಹುಟ್ಟುಹಬ್ಬಕ್ಕೆ ಮೆರಗು ನೀಡಿತು. ಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ, ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದರು. ಪೀಠಾಧಿಪತಿ ಸಿದ್ದಲಿಂಗಸ್ವಾಮೀಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದರು.

ಜತೆಗೆ, ಸಾಮೂಹಿಕ ನಾಮಕರಣ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶ್ರೀಗಳ ಹುಟ್ಟುಹಬ್ಬದಲ್ಲಿ ಈ ಕಾರ್ಯಕ್ರಮ ಮೆರುಗು ನೀಡಿದೆ. ಮಠದ ಆವರಣದಲ್ಲಿರುವ ಉದ್ಧಾನ ಶಿವಯೋಗಿಗಳ ಸಮುದಾಯ ಭವನದಲ್ಲಿ 48 ಮಕ್ಕಳಿಗೆ ಸಾಮೂಹಿಕ ನಾಮಕರಣ ಏರ್ಪಡಿಸಲಾಗಿತ್ತು. ಬೆಂಗಳೂರು-ತುಮಕೂರು ಸೇರಿದಂತೆ ರಾಜ್ಯದ ಹಲವು ಕಡೆಯಿಂದ ಪೋಷಕರು ಮಕ್ಕಳನ್ನು ಕೆರೆದುಕೊಂಡು ಬಂದಿದ್ದರು. ಗಂಡುಮಕ್ಕಳಿಗೆ ಶಿವಕುಮಾರ್, ಹೆಣ್ಣು ಮಕ್ಕಳಿಗೆ ಶಿವಾನಿ ಎಂದು ನಾಮಕರಣ ಮಾಡಲಾಯಿತು. ನಾಮಕರಣದಲ್ಲಿ ಪಾಲ್ಗೊಂಡಿದ್ದ ಪೋಷಕರಿಗೆ ತೊಟ್ಟಿಲು ಹಾಗೂ ಶ್ರೀಗಳ ಭಾವಚಿತ್ರ ನೀಡಲಾಯಿತು.

shivakumar swamiji

ತೊಟ್ಟಿಲು

ನಡೆದಾಡುವ ದೇವರಿಗೆ ಪ್ರಧಾನಿ ನರೆಂದ್ರ ಮೋದಿ ಅವರೂ ಟ್ವೀಟ್​ ಮೂಲಕ ಶುಭಾಶಯ ತಿಳಿಸಿದ್ದಾರೆ. ಬೆಳಗ್ಗೆಯಿಂದಲೇ ಮಠದ ಆವರಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಭಕ್ತಾದಿಗಳು ಬೆಳಗ್ಗೆಯಿಂದ ಮಠದತ್ತ ಧಾವಿಸಿ ಗದ್ದುಗೆ ದರ್ಶನ ಪಡೆದರು. ಮಠಕ್ಕೆ ಬರುವ ಎಲ್ಲಾ ಭಕ್ತರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು ಪಾಯಸ, ಮೈಸೂರು ಪಾಕ್, ಚಿತ್ರಾನ್ನ, ಮಧ್ಯಾಹ್ನಕ್ಕೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 114ನೇ ಜನ್ಮಜಯಂತಿ: ಮಠದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ

ಸಿದ್ದಗಂಗಾ ಶ್ರೀಗಳ ಸ್ಮರಿಸಿದ ಪ್ರಧಾನಿ ಮೋದಿ.. ಉದಾತ್ತ ಆಲೋಚನೆಗಳ ಸ್ವಾಮೀಜಿಗೆ ಶಿರಬಾಗಿ ನಮಿಸುವೆ ಎಂದ್ರು

Published On - 2:34 pm, Thu, 1 April 21

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ