AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ಮಂಟಪಕ್ಕೆ ಭರ್ಜರಿ ಎಂಟ್ರಿ ಕೊಟ್ಟ ವಧು..ಆಕೆಗೆ ಸಹಾಯ ಮಾಡಿದ ಚಿಕ್ಕಪ್ಪನ ವಿರುದ್ಧ ಎಫ್​ಐಆರ್​

ವಿಡಿಯೋ ವ್ಯಾಪಕವಾಗಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ.

Viral Video: ಮದುವೆ ಮಂಟಪಕ್ಕೆ ಭರ್ಜರಿ ಎಂಟ್ರಿ ಕೊಟ್ಟ ವಧು..ಆಕೆಗೆ ಸಹಾಯ ಮಾಡಿದ ಚಿಕ್ಕಪ್ಪನ ವಿರುದ್ಧ ಎಫ್​ಐಆರ್​
ಉತ್ತರ ಪ್ರದೇಶದಲ್ಲೊಂದು ವಿಭಿನ್ನ ಮದುವೆ
TV9 Web
| Edited By: |

Updated on:Jun 02, 2021 | 5:21 PM

Share

ಈ ಜನ ಡಿಫರೆಂಟ್​ ಆಗಿ ಏನೇನೆಲ್ಲ ಮಾಡೋಕೆ ಹೋಗ್ತಾರೋ..! ಇಲ್ಲೊಬ್ಬಳು ವಧು, ಮದುವೆ ಮಂಟಪಕ್ಕೆ ವಿಶೇಷವಾಗಿ ಎಂಟ್ರಿ ಕೊಡಲು ಹೋಗಿ ಇದೀಗ ಆಕೆಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಅಷ್ಟೇ ಅಲ್ಲ, ಅವಳ ಚಿಕ್ಕಪ್ಪನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮದುವೆ ಸ್ಪೆಶಲ್​ ಆಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹಾಗೇ ಈ ವಧು ತಾನು ಮಂಟಪಕ್ಕೆ ಇನ್ನಷ್ಟು ವಿಭಿನ್ನವಾಗಿ ಪ್ರವೇಶಿಸಬೇಕು ಎಂದು ಬಯಸಿ ಬರುಬರುತ್ತಲೇ ಗನ್​​ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಉತ್ತರಪ್ರದೇಶದ ಪ್ರತಾಪ್​ಗಢ್​ನ ಜೇತ್ವಾರಾ ಎಂಬಲ್ಲಿ ಘಟನೆ ನಡೆದಿದೆ. ತನ್ನ ಮದುವೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ವಧು ಇದೀಗ ಪೊಲೀಸ್​ ಕೇಸ್ ಎದುರಿಸುವಂತಾಗಿದೆ. ಯುವತಿಯ ಹೆಸರು ರೂಪಾ ಪಾಂಡೆ.

ವರನೊಂದಿಗೆ ಮಂಟಪವಿದ್ದ ವೇದಿಕೆಗೆ ಬರುತ್ತಾಳೆ. ಆ ಹೊತ್ತಲ್ಲಿ ಆಕೆಯ ಚಿಕ್ಕಪ್ಪ ರಾಮ್​ನಿವಾಸ್ ಪಾಂಡೆ ಅವಳ ಕೈಗೆ ರಿವಾಲ್ವರ್​ನ್ನು ನೀಡುತ್ತಾರೆ. ಅದನ್ನು ತೆಗೆದುಕೊಂಡ ರೂಪಾ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಇದು ಲೈಸೆನ್ಸ್ ಇರುವ ರಿವಾಲ್ವರ್​ ಆಗಿದ್ದು, ಆಕೆ ಶೂಟ್ ಮಾಡುತ್ತಿದ್ದಂತೆ ನೆರೆದಿದ್ದ ಅತಿಥಿಗಳೆಲ್ಲ ಫುಲ್ ಖುಷಿಯಿಂದ ಚಿಯರ್ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ವ್ಯಾಪಕವಾಗಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿದ ಆರೋಪದಡಿ ವಧು ಮತ್ತು ಆಕೆಯ ಚಿಕ್ಕಪ್ಪನ ವಿರುದ್ಧ ಕೇಸ್​ ದಾಖಲಿಸಿಕೊಂಡಿದ್ದಾರೆ.

ಬರೀ ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರ ಬಳಕೆ ಮಾಡಿದ್ದಷ್ಟೇ ಅಲ್ಲದೆ, ಕೊವಿಡ್​ 19 ಮಧ್ಯೆ ವಿವಾಹದಲ್ಲಿ ಹಲವು ಜನ ಸೇರುವ ಮೂಲಕ ಕೊರೊನಾ ನಿಯಂತ್ರಣ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದೂ ಕೇಸ್​​ನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಆ ರಿವಾಲ್ವರ್​​ಗೆ ನೀಡಿದ್ದ ಲೈಸೆನ್ಸ್ ಕ್ಯಾನ್ಸಲ್​ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಬಿಮ್ಸ್​ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಸಹೋದ್ಯೋಗಿಗಳ ಅಸಹಕಾರ: ದೀರ್ಘಾವಧಿ ರಜೆ ಹಾಕಿ ತೆರಳಿದ ನಿರ್ದೇಶಕ

Published On - 5:18 pm, Wed, 2 June 21

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು