AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಾಯಿ ಹುಲಿಯೊಂದಿಗೆ ಪುಟಾಣಿ ಮರಿಗಳ ಚೆಲ್ಲಾಟ; ವಿಡಿಯೋ ನೋಡ್ತಾ ಇದ್ರೆ ಸಖತ್ ಟೈಂ ಪಾಸ್

ಹುಲಿರಾಯ ಪರಭಕ್ಷಕ ಎಂದು ಗುರುತಿಸಿಕೊಂಡಿರಬಹುದು. ಆದರೆ ಮನುಷ್ಯನಾಗಲೀ ಅಥವಾ ತಾಯಿಯಾಗಲೀ ಎಲ್ಲಾ ಮಕ್ಕಳಿಗೂ ತಾಯಿ ಅಂದರೆ ಅಚ್ಚು-ಮೆಚ್ಚು.

Viral Video: ತಾಯಿ ಹುಲಿಯೊಂದಿಗೆ ಪುಟಾಣಿ ಮರಿಗಳ ಚೆಲ್ಲಾಟ; ವಿಡಿಯೋ ನೋಡ್ತಾ ಇದ್ರೆ ಸಖತ್ ಟೈಂ ಪಾಸ್
ಸದ್ದಿಲ್ಲದೆ ತಾಯಿಯೊಡನೆ ಬೆಚ್ಚಗೆ ಮಲಗಿವೆ ಹುಲಿಮರಿಗಳು
TV9 Web
| Edited By: |

Updated on:Jun 03, 2021 | 12:09 PM

Share

ಹುಲಿ ತನ್ನ ನಾಲ್ಕು ಮಕ್ಕಳೊಂದಿಗೆ ನೆಮ್ಮದಿಯಿಂದ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ವನ್ಯ ಜೀವಿಗಳ ಕೆಲವು ವಿಡಿಯೋಗಳು ಮನಗೆಲ್ಲುತ್ತವೆ. ಅದರಲ್ಲಿಯೂ ಹುಲಿರಾಯ ಗಾಂಭೀರ್ಯದ ನಡಿಗೆ ನೋಡುವುದೇ ಒಂದು ರೀತಿಯ ಖುಷಿಯಾದರೆ, ಹುಲಿ ಮರಿಗಳ ತುಂಟಾಟಗಳು ಇಷ್ಟವಾಗುತ್ತವೆ.

ಇದೀಗ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಹುಲಿಮರಿಗಳು ಶಾಂತವಾಗಿ ಮಲಗಿವೆ. ತನ್ನ ತಾಯಿ ಬಂದು ಅವರ ಪಕ್ಕದಲ್ಲಿ ಮಲಗಿದಾಕ್ಷಣವೇ ಸುತ್ತಲಿರುವ ಎಲ್ಲಾ ಹುಲಿ ಮರಿಗಳೂ ಓಡೋಡಿ ಬರುತ್ತಿವೆ. ಒಂದಾದ ಮೇಲೊಂದು ಬಂದು ತಾಯಿಯ ಮಡಿಲಲ್ಲಿ ಮಲಗುತ್ತಿವೆ. ಬೆಜ್ಜಗೆ ತಾಯಿಯನ್ನು ತಪ್ಪಿ ಮಲಗಿರುವ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

ಹುಲಿರಾಯ ಪರಭಕ್ಷಕ ಎಂದು ಗುರುತಿಸಿಕೊಂಡಿರಬಹುದು. ಆದರೆ ಮನುಷ್ಯನಾಗಲೀ ಅಥವಾ ಪ್ರಾಣಿಯಾಗಲಿ ಎಲ್ಲಾ ಮಕ್ಕಳಿಗೂ ತನ್ನ ತಾಯಿ ಅಂದರೆ ಅಚ್ಚು-ಮೆಚ್ಚು. ತಾಯಿಯ ಮಡಿಲಿನಲ್ಲಿ ಮಲಗಲು ಎಲ್ಲಾ ಮಕ್ಕಳೂ ಹೆಚ್ಚು ಇಷ್ಟಪಡುತ್ತಾರೆ. ಮನುಷ್ಯನಾಗಲೀ ಅಥವಾ ಪ್ರಾಣಿಯಾಗಲೀ ತಾಯಿಯ ಮೇಲಿನ ಮಮತೆಯ ಭಾವನೆ ಒಂದೇ ಎಂಬುದಕ್ಕೆ ಸಾಕ್ಷಿ ಈ ವಿಡಿಯೋ.

ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 57,000 ಕ್ಕೂ ಹೆಚ್ಚು ವೀಕ್ಷಣೆಗಳು ಗಳಿಸಿಕೊಂಡಿದೆ. 3000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ‘ಕೊನೆಗೆ ಎಲ್ಲ ಮರಿಗಳೂ ತಾಯಿಯ ಬಳಿಗೇ ಬರುತ್ತಾರೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್​ ಮಾಡಲಾಗಿದೆ.

ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಜಗತ್ತಿಗೆ ಅಪಾಯಕಾರಿ ಎನಿಸಿಕೊಳ್ಳುತ್ತದೆ ಹುಲಿ, ಆದರೆ ಮಕ್ಕಳಿಗೆ ಪ್ರೀತಿಯ ತಾಯಿ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಹಳ ಸುಂದರ ದೃಶ್ಯವಿದು! ಎಂದು ಇನ್ನೋರ್ವರು ಹೇಳಿದ್ದಾರೆ. ಪೃಕ್ರತಿಯ ಕೆಲವು ಅದ್ಭುತ ನೋಟಗಳು ಮನಗೆಲ್ಲುತ್ತದೆ ಎಂಬುದು ನೆಟ್ಟಿಗರ ಅನಿಸಿಕೆ.

ಇದನ್ನೂ ಓದಿ: 

Viral Video: ಚಿರತೆಯನ್ನು ಮೂರ್ಖನನ್ನಾಗಿ ಮಾಡಿದ ಮೊಸಳೆ.. ಆಮೇಲ್​ ಏನಾಯ್ತು?​

Published On - 12:08 pm, Thu, 3 June 21

Follow Us
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್