Viral Video: ಅತಿ ಹೆಚ್ಚು ವೇಗದಲ್ಲಿ ಗ್ರೀಸ್​ ಹಚ್ಚಿದ ಕಂಬವನ್ನು ದಾಟುವವರು ಯಾರು? ವಿಡಿಯೋ ವೈರಲ್

TV9 Digital Desk

| Edited By: shruti hegde

Updated on:Jun 11, 2021 | 11:32 AM

80ಕ್ಕೂ ಹೆಚ್ಚಿನ ಚಾಲೆಂಜರ್ಸ್​ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಗಿನ್ನಿಸ್​ ವರ್ಲ್ಡ್ ರೆಕಾರ್ಡ್​ ಫೇಸ್​ಬುಕ್​ ಪೇಜ್​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈವರೆಗೆ 65 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

Viral Video: ಅತಿ ಹೆಚ್ಚು ವೇಗದಲ್ಲಿ ಗ್ರೀಸ್​ ಹಚ್ಚಿದ ಕಂಬವನ್ನು ದಾಟುವವರು ಯಾರು? ವಿಡಿಯೋ ವೈರಲ್
ಅತಿ ಹೆಚ್ಚು ವೇಗದಲ್ಲಿ ಗ್ರೀಸ್​ ಹಚ್ಚಿದ ಕಂಬವನ್ನು ದಾಟುವವರು ಯಾರು?

Follow us on

ಗ್ರೀಸ್​ ಬಳಿದ ಕಂಬವನ್ನು ದಾಡುವುದು ಅಥವಾ ಹತ್ತುವುದು ಸುಲಭದ ಮಾತಲ್ಲ. ಕಾಲು ಜಾರುವ ಗ್ರೀಸ್​ ಕಂಬದಲ್ಲಿ ಬ್ಯಾಲೆನ್ಸ್​ ತಪ್ಪದೇ ಕೊನೆಯವರೆಗೆ ಹೋಗಿ ತಲುಪುದು ಸಾಧನೆಯೇ ಸರಿ. ಸ್ವಲ್ಪ ಬ್ಯಾಲೆನ್ಸ್​ ತಪ್ಪಿದರೂ ಸಹ ಕೆಳಗೆ ಬೀಳುತ್ತಾರೆ. ಗ್ರೀಸ್​ ಬಳಿದ ಕಂಬವನ್ನು ಅತಿ ವೇಗದಲ್ಲಿ ಯಾರು ದಾಟುತ್ತಾರೆ ಎಂಬ ಸ್ಪರ್ಧೆಯೊಂದು ಏರ್ಪಟ್ಟಿದೆ. ಹಾಗಾದರೆ ಅತಿ ಕಡಿಮೆ ಸಮಯದಲ್ಲಿ ಗ್ರೀಸ್​ ಕಂಬ ದಾಟುವ ಚಾಲೆಂಜ್​ನಲ್ಲಿ ಸ್ಪರ್ಧೆಯ ವಿಜೇತರು ಯಾರು? ವಿಡಿಯೋ ನೋಡಿ.

80ಕ್ಕೂ ಹೆಚ್ಚಿನ ಚಾಲೆಂಜರ್ಸ್​ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಗಿನ್ನಿಸ್​ ವರ್ಲ್ಡ್ ರೆಕಾರ್ಡ್​ ಫೇಸ್​ಬುಕ್​ ಪೇಜ್​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈವರೆಗೆ 65 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

ವಿಡಿಯೋದಲ್ಲಿ ಗಮನಿಸುವಂತೆ, ಒಬ್ಬೊಬ್ಬರೆ ಗ್ರೀಸ್​ ಬಳಿದ ಕಂಬವನ್ನು ದಾಟಲು ಬರುತ್ತಾರೆ. ಗ್ರೀಸ್​ ಹಚ್ಚಿಟ್ಟ ಕಂಬದ ಮೇಲೆ ಬ್ಯಾಲೆನ್ಸ್​ ತಪ್ಪದೇ ಕೊನೆಯವರೆಗೆ ಹೋಗಿ ಬಾವುಟ ಹಿಡಿಯುವವರು ಸ್ಪರ್ಧೆಯಲ್ಲಿ ವಿಜೇತರು. ಈ ಸ್ಪರ್ಧೆಯಲ್ಲಿ ರೆಕಾರ್ಡ್​ ಮಾಡಿದ ವ್ಯಕ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Over 80 challengers went for the record – but who crossed the greased pole in the fastest time?

Posted by Guinness World Records on Saturday, 6 June 2020

ಒಬ್ಬರ ನಂತರ ಒಬ್ಬರು ಗ್ರೀಸ್​ ಕಂಬ​ ದಾಟಲು ಪ್ರಯತ್ನಿಸುತ್ತಾರೆ. ಆದರೆ ಅರ್ಥದಲ್ಲೇ ಕಾಲು ಜಾರಿ ಕೆಳಗೆ ಬೀಳುತ್ತಿದ್ದಾರೆ. ಕೆಲವೇ ಜನರು ಕೊನೆಯವರೆಗೂ ತಲುಪಿ ಬಾವುಟ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಅತಿ ಹೆಚ್ಚು ವೇಗದಲ್ಲಿ ಚಲಿಸಿದವರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Viral Video: ರೈಲು ಹತ್ತುವಾಗ ಜಾರಿ ಬಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಆರ್​ಪಿಎಫ್​ ಕಾನ್​ಸ್ಟೇಬಲ್​

ತಾಜಾ ಸುದ್ದಿ

Related Stories

Click on your DTH Provider to Add TV9 Kannada