AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಿಂದ ಶಮಂತ್​ ಬ್ರೋ ಗೌಡ ಎಲಿಮಿನೇಟ್? ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ

Bigg Boss Kannada Season 8 Elimination: ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದ ವೈಜಯಂತಿ ಅಡಿಗ ತಾವು ಬಿಗ್​ ಬಾಸ್​ ಮನೆಯಿಂದ ಹೊರ ಹೋಗುತ್ತೇವೆ ಎಂದು ಶಮಂತ್​ ಅವರನ್ನು ಸೇವ್​ ಮಾಡಿದ್ದರು. ಇದಾದ ನಂತರದಲ್ಲಿ ಶಮಂತ್​ ಲಕ್ಕಿ ಬಾಯ್​ ಎಂದೇ ಕರೆಯಲ್ಪಟ್ಟಿದ್ದರು.

ಬಿಗ್​ ಬಾಸ್​ ಮನೆಯಿಂದ ಶಮಂತ್​ ಬ್ರೋ ಗೌಡ ಎಲಿಮಿನೇಟ್? ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ
ಬಿಗ್​ ಬಾಸ್​ ಮನೆಯಿಂದ ಶಮಂತ್​ ಬ್ರೋ ಗೌಡ ಎಲಿಮಿನೇಟ್? ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ
TV9 Web
| Edited By: |

Updated on: Jul 24, 2021 | 3:46 PM

Share

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪ್ರವೇಶಿಸಿದ ಶಮಂತ್​ ಬ್ರೋ ಗೌಡಗೆ ಅದೃಷ್ಟ ಒಲಿದಿತ್ತು. ಎಲಿಮಿನೇಟ್​ ಆಗಿದ್ದರೂ ಅದೃಷ್ಟ ಬಲದಿಂದ ಬಚಾವ್​ ಆದರು. ಆದರೆ, ಈಗ ಅವರಿಗೆ ಅದೃಷ್ಟ ಕೈ ಕೊಟ್ಟಂತೆ ಕಾಣುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಫೋಟೋ ಒಂದು ಈ ರೀತಿಯ ಅನುಮಾನ ಹುಟ್ಟುಹಾಕಿದೆ.

ಶಮಂತ್​ ಬ್ರೋ ಗೌಡ ಮನೆಯಲ್ಲಿ ಸತತ ಎರಡು ವಾರ ಕ್ಯಾಪ್ಟನ್​ ಆದರು. ಇದಕ್ಕೆ ಮನೆಯವರ ಬೆಂಬಲ ಕೂಡ ಇತ್ತು. ನಂತರ, ಶಮಂತ್​ಗೋಸ್ಕರ ಬೆಡ್​ ರೂಮ್​ ಬಿಟ್ಟುಕೊಡೋ ಸಮಯ ಬಂದಾಗ ಎಲ್ಲರೂ ಇದನ್ನು ಬೆಂಬಲಿಸಿ, ಲಿವಿಂಗ್​ ಏರಿಯಾದಲ್ಲಿ ಮಲಗಿದ್ದರು. ಇನ್ನು, ಅವರು ಬಿಗ್​ಬಾಸ್​ನಿಂದ ಎಲಿಮಿನೇಟ್​ ಆಗಿದ್ದರು. ಆದರೆ, ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದ ವೈಜಯಂತಿ ಅಡಿಗ ತಾವು ಬಿಗ್​ ಬಾಸ್​ ಮನೆಯಿಂದ ಹೊರ ಹೋಗುತ್ತೇವೆ ಎಂದು ಶಮಂತ್​ ಅವರನ್ನು ಸೇವ್​ ಮಾಡಿದ್ದರು. ಇದಾದ ನಂತರದಲ್ಲಿ ಶಮಂತ್​ ಲಕ್ಕಿ ಬಾಯ್​ ಎಂದೇ ಕರೆಯಲ್ಪಟ್ಟಿದ್ದರು. ಅರ್ಧಕ್ಕೆ ನಿಂತಿದ್ದ ಬಿಗ್​ ಬಾಸ್​ ಆರಂಭಕ್ಕೂ ಶಮಂತ್​ ಅದೃಷ್ಟ ಕಾರಣ ಎಂದು ಟ್ರೋಲ್​ ಪೇಜ್​ಗಳು ಪೋಸ್ಟ್​ ಮಾಡಿದ್ದವು.

ಈ ವಾರ ಪ್ರಶಾಂತ್ ಸಂಬರಗಿ​, ಶುಭಾ ಪೂಂಜಾ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ​ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಈ ವಾರ ಡಬಲ್​ ಎಲಿಮಿನೇಷನ್​ ನಡೆಯಲಿದ್ದು, ಇಬ್ಬರು ಹೊರ ಹೋಗುತ್ತಾರೆ ಎನ್ನುವ ಮಾತು ಕೇಳಿ ಬಂದಿದೆ. ಒಂದೊಮ್ಮೆ ಡಬಲ್ ಎಲಿಮಿನೇಷನ್​ ಆದರೆ ಚಕ್ರವರ್ತಿ ಚಂದ್ರಚೂಡ್​, ಪ್ರಶಾಂತ್ ಸಂಬರಗಿ ಮತ್ತು ಶುಭಾ ಪೂಂಜಾ ಮೂವರಲ್ಲಿ ಇಬ್ಬರು ಔಟ್​ ಆಗಲಿದ್ದಾರೆ ಎಂಬುದು ಫ್ಯಾನ್ಸ್​ ಲೆಕ್ಕಾಚಾರವಾಗಿತ್ತು. ಆದರೆ, ಈ ಲೆಕ್ಕಾಚಾರ ತಲೆಕೆಳಗೆ ಆದಂತೆ ಕಾಣುತ್ತಿದೆ.

ಕಲರ್ಸ್​ ಕನ್ನಡ ವಾಹಿನಿ ಬ್ಯುಸಿನೆಸ್​ ಹೆಡ್ ಪರಮೇಶ್ವರ್​ ಗುಂಡ್ಕಲ್​ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ‘ಈ ವಾರದ ಎಪಿಸೋಡ್​​​ಗೆ ರೆಡಿ ಆಗುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಎಲ್ಲಾ ಸ್ಪರ್ಧಿಗಳು ನಿಂತಿರುವ ಫೋಟೋ ಇದಾಗಿದ್ದು, ಶಮಂತ್​ ಮಿಸ್​ ಆಗಿದ್ದಾರೆ.

ಇದನ್ನು ನೋಡಿದ ಅನೇಕ ಸ್ಪರ್ಧಿಗಳು ಶಮಂತ್​ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಶಮಂತ್​ ಅವರು ಎಲಿಮಿನೇಟ್​ ಆದರಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಎಲ್ಲಾ ಕುತೂಹಲಕ್ಕೆ ಇಂದು (ಜುಲೈ 24) ನಡೆಯುವ ಎಪಿಸೋಡ್​ನಲ್ಲಿ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: ಈ ವಾರ ಡಬಲ್​ ಎಲಿಮಿನೇಷನ್? ಸೂಚನೆ ಕೊಟ್ಟ ಬಿಗ್​ ಬಾಸ್​; ಔಟ್​ ಆಗೋರು ಯಾರು?

‘ನೀವು ನನಗೆಷ್ಟು ದಿನದ ಫ್ರೆಂಡ್​?‘; ಶಮಂತ್​ ಬಗ್ಗೆ ಹಗುರವಾಗಿ ಮಾತನಾಡಿದ ಚಕ್ರವರ್ತಿಗೆ ಕ್ಲಾಸ್​

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?