‘ದುಡ್ಡಿಗಾಗಿ ನಾನು ಮದುವೆ ಆಗಿಲ್ಲ, ಅಂಥವರ ದಾರಿ ಬೇರೆ’; ಚೈತ್ರಾ ಕೋಟೂರ್​ ತೆರೆದಿಟ್ಟ ಸತ್ಯ

ಬಿಗ್​ ಬಾಸ್ ಮಾಜಿ​ ಸ್ಪರ್ಧಿ ಚೈತ್ರಾ ಕೋಟೂರ್​ ಅವರ ವಿವಾದಾತ್ಮಕ ಮದುವೆ ದೊಡ್ಡ ಸುದ್ದಿ ಆಗಿತ್ತು. ಅವರ ಮೇಲೆ ಹಲವು ಆರೋಪಗಳನ್ನು ಕೂಡ ಮಾಡಲಾಗಿತ್ತು. ಅವುಗಳ ಕುರಿತು ಈಗ ಚೈತ್ರಾ ಮನಬಿಚ್ಚಿ ಮಾತನಾಡಿದ್ದಾರೆ.

ನಟಿ ಚೈತ್ರಾ ಕೋಟೂರ್​ (Chaithra Kotoor) ಅವರ ಮದುವೆ ಬಳಿಕ ನಡೆದ ಅಚಾನಕ್​ ಬೆಳವಣಿಗೆಗಳು ಒಂದೆರಡಲ್ಲ. ತಾಳಿ ಕಟ್ಟಿದ ಕೆಲವೇ ಗಂಟೆಗಳಲ್ಲಿ ಅವರ ಮದುವೆ (Marriage) ಮುರಿದುಬಿತ್ತು. ಆಗ ಅನೇಕ ಸುದ್ದಿಗಳು ಹೊರಬಂದವು. ಚೈತ್ರಾ ಬಗ್ಗೆ ಹಲವು ಆರೋಪಗಳನ್ನು ಕೂಡ ಮಾಡಲಾಗಿತ್ತು. ಅವುಗಳ ಕುರಿತು ಈಗ ಚೈತ್ರಾ ಕೋಟೂರ್​ ಮನಬಿಚ್ಚಿ ಮಾತನಾಡಿದ್ದಾರೆ. ‘ನಾನು ಹಣಕ್ಕಾಗಿ ಮದುವೆ ಆಗಿಲ್ಲ. ಹಣಕ್ಕಾಗಿ ಬದುಕುವವಳು ನಾನಾಗಿದ್ದರೆ ನನ್ನ ಬದುಕು ಬೇರೆ ರೀತಿ ಇರುತ್ತಿತ್ತು’ ಎಂದು ಅವರು ಹೇಳಿದ್ದಾರೆ.

ಚೈತ್ರಾ ಕೋಟೂರ್​ ಅವರು ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಅಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆ ಕ್ಷಣಗಳ ಹಲವು ಫೋಟೋ ಮತ್ತು ವಿಡಿಯೋಗಳನ್ನು ಕೂಡ ಚೈತ್ರಾ ಹಂಚಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ಅವರ ಹೆಸರು ಕೂಡ ಬದಲಾಗಿದೆ. ಮಾ ಪ್ರಗ್ಯಾ ಭಾರತಿ ಎಂದು ಅವರು ತಮ್ಮನ್ನು ತಾವು ಕರೆದುಕೊಂಡಿದ್ದಾರೆ.

ಇದನ್ನೂ ಓದಿ:

ನಾನು ಯಾರನ್ನೂ ದ್ವೇಷಿಸುತ್ತಿಲ್ಲ, ಪ್ರೀತಿನೂ ಮಾಡಲ್ಲ​; ಚೈತ್ರಾ ಕೋಟೂರ್​

ಓಶೋ ಧ್ಯಾನ ಶಿಬಿರದಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದ ಚೈತ್ರಾ ಕೋಟೂರ್

Click on your DTH Provider to Add TV9 Kannada