ನಾನು ಯಾರನ್ನೂ ದ್ವೇಷಿಸುತ್ತಿಲ್ಲ, ಪ್ರೀತಿನೂ ಮಾಡಲ್ಲ​; ಚೈತ್ರಾ ಕೋಟೂರ್​

ಚೈತ್ರಾ ಕೋಟೂರ್​ ಅವರು ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಅಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಈ ಬಗ್ಗೆ ಟಿವಿ9 ಕನ್ನಡದ ಜತೆಗೆ ಚೈತ್ರಾ ಮಾತನಾಡಿದ್ದಾರೆ. 

ಬಿಗ್​ ಬಾಸ್​ಗೆ (Bigg Boss) ಕಾಲಿಟ್ಟ ಬಳಿಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡವರು ನಟಿ ಚೈತ್ರಾ ಕೋಟೂರ್​. ಸಿನಿಮಾ, ಸಾಹಿತ್ಯ, ರಂಗಭೂಮಿ, ಜಾಹೀರಾತು, ರಿಯಾಲಿಟಿ ಶೋ ಸೇರಿದಂತೆ ಹಲವು ಕಡೆಗಳಲ್ಲಿ ತೊಡಗಿಕೊಂಡಿರುವ ಚೈತ್ರಾ (Chaithra Kotoor) ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇರುತ್ತಾರೆ. ಮ್ಯೂಸಿಕ್​ ವಿಡಿಯೋ ಮೂಲಕವೂ ಅವರು ಗುರುತಿಸಿಕೊಂಡಿದ್ದರು. ಅವರ ವೈಯಕ್ತಿಕ ಜೀವನದಲ್ಲಿ ವಿವಾದ ಕೂಡ ಆಗಿತ್ತು. ಆದರೆ ಎಲ್ಲದರ ನಡುವೆ ಅವರೀಗ ಹೆಸರು ಬದಲಾಯಿಸಿಕೊಂಡು ಅಧ್ಯಾತ್ಮದ ಸೆಳೆತಕ್ಕೆ ಸಿಲುಕಿದ್ದಾರೆ.

ಚೈತ್ರಾ ಕೋಟೂರ್​ ಅವರು ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಅಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆ ಕ್ಷಣಗಳ ಹಲವು ಫೋಟೋ ಮತ್ತು ವಿಡಿಯೋಗಳನ್ನು ಕೂಡ ಚೈತ್ರಾ ಹಂಚಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ಅವರ ಹೆಸರು ಕೂಡ ಬದಲಾಗಿದೆ. ಈ ಬಗ್ಗೆ ಟಿವಿ9 ಕನ್ನಡದ ಜತೆಗೆ ಚೈತ್ರಾ ಮಾತನಾಡಿದ್ದಾರೆ.

ಇದನ್ನೂ ಓದಿ: ‘ಸತ್ತ ದೇಹದ ಬಗ್ಗೆ ಮಾತನಾಡೋಕೆ ಇಷ್ಟವಿಲ್ಲ’; ಮದುವೆ ಬಗ್ಗೆ ಚೈತ್ರಾ ಕೋಟೂರ್​ ಪ್ರತಿಕ್ರಿಯೆ

Click on your DTH Provider to Add TV9 Kannada