‘ಸತ್ತ ದೇಹದ ಬಗ್ಗೆ ಮಾತನಾಡೋಕೆ ಇಷ್ಟವಿಲ್ಲ’; ಮದುವೆ ಬಗ್ಗೆ ಚೈತ್ರಾ ಕೋಟೂರ್​ ಪ್ರತಿಕ್ರಿಯೆ

ಚೈತ್ರಾ ಕೋಟೂರ್​ ಅವರು ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಅಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ.

ಬಿಗ್​ ಬಾಸ್ ಮಾಜಿ​ ಸ್ಪರ್ಧಿ ಚೈತ್ರಾ ಕೋಟೂರ್​ ಅವರು ಕನ್​ಸ್ಟ್ರಕ್ಷನ್ ಮತ್ತು ರಿಯಲ್​ ಎಸ್ಟೇಟ್​​ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ನಾಗಾರ್ಜುನ್​ ಎಂಬುವವರ ಜೊತೆ ಮಾ.28ರ ಬೆಳಗ್ಗೆ ಸಿಂಪಲ್ ಆಗಿ ಮದುವೆ ಆಗಿದ್ದರು. ಆದರೆ ವಿವಾಹವಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ ನಾಗಾರ್ಜುನ್​ ಮನೆಯವರು ತಕರಾರು ತೆಗೆದಿದ್ದರು.  ಈ ವಿಚಾರ ಪೊಲೀಸ್​ ಠಾಣೆಯ ಮೆಟ್ಟಿಲು ಕೂಡ ಏರಿತ್ತು. ನಂತರ ಇವರ ಸಂಬಂಧ ಮುರಿದು ಬಿದ್ದಿತ್ತು. ನಂತರ ಚೈತ್ರಾ ಕೋಟೂರ್​ ಏಪ್ರಿಲ್​ 8ರಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.  ಈಗ ಅವರು ಹಳೆಯ ಕಹಿ ನೆನಪನ್ನು ಬಿಟ್ಟು ಹೊಸ ಬದುಕು ಆರಂಭಿಸಿದ್ದಾರೆ.

ಚೈತ್ರಾ ಕೋಟೂರ್​ ಅವರು ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಅಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆ ಕ್ಷಣಗಳ ಹಲವು ಫೋಟೋ ಮತ್ತು ವಿಡಿಯೋಗಳನ್ನು ಕೂಡ ಚೈತ್ರಾ ಹಂಚಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ಅವರ ಹೆಸರು ಕೂಡ ಬದಲಾಗಿದೆ. ಮಾ ಪ್ರಗ್ಯಾ ಭಾರತಿ ಎಂದು ಅವರು ತಮ್ಮನ್ನು ತಾವು ಕರೆದುಕೊಂಡಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಅವು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.  ಆ ವಿಡಿಯೋ ಇಲ್ಲಿದೆ.

ಇದನ್ನೂ ಓದಿ: ಬದಲಾಯ್ತು ಚೈತ್ರಾ ಕೋಟೂರ್​ ಹೆಸರು; ಮಾ ಪ್ರಗ್ಯಾ ಭಾರತಿ ಆಗಿ ಅಧ್ಯಾತ್ಮಕ್ಕೆ ಜಾರಿದ ನಟಿ

Click on your DTH Provider to Add TV9 Kannada